ರಾಯಚೂರು ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಖಾಲಿ ಇರುವ 13 ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಮೇಲ್ವಿಚಾರಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಜಿಲ್ಲಾ ಪಂಚಾಯತ್ ಅಧಿಸೂಚನೆ ಹೊರಡಿಸಿದೆ.
ಪ್ರಮುಖ ಮಾಹಿತಿ:
- ಹುದ್ದೆಯ ಹೆಸರು: ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಮೇಲ್ವಿಚಾರಕ.
- ಖಾಲಿ ಇರುವ ಹುದ್ದೆಗಳ ಸಂಖ್ಯೆ: 13.
- ಅರ್ಜಿ ಸಲ್ಲಿಕೆ ದಿನಾಂಕ: 27.05.2026 ರಿಂದ 10.06.2026ರ ವರೆಗೆ.
ಅರ್ಹತೆಗಳು:
- ಶೈಕ್ಷಣಿಕ ವಿದ್ಯಾರ್ಹತೆ: ಅಭ್ಯರ್ಥಿಗಳು ದ್ವಿತೀಯ ಪಿಯುಸಿ (PUC) ಉತ್ತೀರ್ಣರಾಗಿರಬೇಕು.
- ಹೆಚ್ಚುವರಿ ಅರ್ಹತೆ: ಲೈಬ್ರರಿ ಸೈನ್ಸ್‌ನಲ್ಲಿ ‘ಸರ್ಟಿಫಿಕೇಶನ್ ಕೋರ್ಸ್’ ಪೂರ್ಣಗೊಳಿಸಿ ಪ್ರಮಾಣಪತ್ರ ಹೊಂದಿರಬೇಕು ಮತ್ತು ಕನಿಷ್ಠ ಮೂರು ತಿಂಗಳ ಕಂಪ್ಯೂಟರ್ ಕೋರ್ಸ್ ಉತ್ತೀರ್ಣರಾಗಿರಬೇಕು.
- ಅರ್ಜಿ ಸಲ್ಲಿಸುವವರು: ಸಂಬಂಧಪಟ್ಟ ಸ್ಥಳೀಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೀಸಲಾತಿಗೆ ಒಳಪಡುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
- ಆಯ್ಕೆ ವಿಧಾನ: ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಗಳಿಸಿದ ಗರಿಷ್ಠ ಅಂಕಗಳು ಅಥವಾ ಮೆರಿಟ್ ಆಧಾರದ ಮೇಲೆ ಆಯ್ಕೆ ನಡೆಯಲಿದೆ.
ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜಿಲ್ಲಾ ಪಂಚಾಯತ್ ರಾಯಚೂರಿನ ಅಧಿಕೃತ ವೆಬ್‌ಸೈಟ್ zpraichur.kar.nic.in ಗೆ ಭೇಟಿ ನೀಡಿ, ಅಲ್ಲಿ ನೀಡಿರುವ ಸೂಚನೆಗಳು ಮತ್ತು ನೇಮಕಾತಿ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿಕೊಂಡು, ಸಂಪೂರ್ಣವಾಗಿ ಓದಿದ ನಂತರ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
