ದಾವಣಗೆರೆ : ಭಾರತೀಯ ಅಂಚೆ ಇಲಾಖೆಯ ದಾವಣಗೆರೆ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ (PLI) ಹಾಗೂ ಗ್ರಾಮೀಣ ಅಂಚೆ ಜೀವ ವಿಮೆಯ (RPLI) ನೇರ ವಿಮಾ ಪ್ರತಿನಿಧಿಗಳು (ಏಜೆಂಟರುಗಳು) ಮತ್ತು ಫೀಲ್ಡ್ ಆಫೀಸರ್ ಗಳಾಗಿ ಕಾರ್ಯ ನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಮ್ಮ ಸಂಪೂರ್ಣ ವಿವರ (Resume) ಹಾಗೂ ಅಗತ್ಯ ಮೂಲ ದಾಖಲೆಗಳು ಮತ್ತು ಅವುಗಳ ನಕಲು ಪ್ರತಿಯೊಂದಿಗೆ ಜೂನ್ 03 ರಂದು ಬೆಳಿಗ್ಗೆ 11.00 ಗಂಟೆಗೆ ಅಂಚೆ ಅಧೀಕ್ಷಕರು, ದಾವಣಗೆರೆ ಅಂಚೆ ವಿಭಾಗ, ಗಡಿಯಾರ ಕಂಬದ ಹತ್ತಿರ, ಪ್ರಧಾನ ಅಂಚೆ ಕಛೇರಿ, ದಾವಣಗೆರೆ – 577001 ಇಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬಹುದು.
ಹೆಚ್ಚಿನ ವಿವರಗಳಿಗಾಗಿ ದಾವಣಗೆರೆ ಅಂಚೆ ವಿಭಾಗದ ಅಂಚೆ ಜೀವ ವಿಮೆ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಮಹೇಶ್ ಎಸ್ (ಮೊಬೈಲ್ ಸಂಖ್ಯೆ: 9986038721) ಇವರನ್ನು ಸಂಪರ್ಕಿಸಬಹುದಾಗಿದೆ ಅಥವಾ ಇಮೇಲ್ ವಿಳಾಸ: [email protected] ಮೂಲಕ ಮಾಹಿತಿ ಪಡೆಯಬಹುದು ಎಂದು ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.
ಇಪಿಎಫ್‌ಒ ವತಿಯಿಂದ ‘ನಿಧಿ ಆಪೇ ನಿಕಟ್ 2.0’ ಕಾರ್ಯಕ್ರಮ
ದಾವಣಗೆರೆ, ಮೇ 22 (ಕರ್ನಾಟಕ ವಾರ್ತೆ): ಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆ ಅಗತ್ಯಗಳನ್ನು ಪೂರೈಸುವ ನೌಕರರ ಭವಿಷ್ಯ ನಿಧಿ ಸಂಸ್ಥೆಯು (EPFO), ಕಾರ್ಮಿಕರಿಗೆ ಲಭ್ಯವಿರುವ ವಿವಿಧ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲು ಮತ್ತು ಕುಂದುಕೊರತೆಗಳನ್ನು ನಿವಾರಿಸಲು ಮೇ 27 ರಂದು ದಾವಣಗೆರೆ ಎಕೆಪಿ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್, ಹದಡಿ ರಸ್ತೆ, ತರಳಬಾಳು ಶಾಲೆ ಎದುರು ಇಲ್ಲಿ ‘ನಿಧಿ ಆಪೇ ನಿಕಟ್ 2.0’ ಔಟ್‌ರೀಚ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಈ ಕಾರ್ಯಕ್ರಮವನ್ನು ಇಪಿಎಫ್‌ಒ ಮತ್ತು ಇಎಸ್‌ಐಸಿ (ESIC) ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ನಡೆಸಲಿದ್ದಾರೆ. ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ: ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00 ರವರೆಗೆ. ಪಿಂಚಣಿದಾರರಿಗೆ: ಮಧ್ಯಾಹ್ನ 2.30 ರಿಂದ ಸಂಜೆ 4.00 ರವರೆಗೆ ಭೇಟಿ ನೀಡಬಬಹುದು.
ಭವಿಷ್ಯ ನಿಧಿಗೆ ಸಂಬಂಧಿಸಿದ ಸಮಸ್ಯೆಗಳು ಅಥವಾ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಇಚ್ಛಿಸುವ ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ ಎಂದು ಶಿವಮೊಗ್ಗ ಪ್ರಾದೇಶಿಕ ಕಚೇರಿ, ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು-II ತಿಳಿಸಿದ್ದಾರೆ.