ಧಾರವಾಡ: ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯದ ನಿರ್ದೇಶನದಂತೆ ಧಾರವಾಡ ನಗರದಲ್ಲಿರುವ ಬೀಡಿ ಕಾರ್ಮಿಕರ ಕಲ್ಯಾಣ ನಿಧಿ ಆಸ್ಪತ್ರೆಯನ್ನು ಜೂನ್ 1, 2026 ರಿಂದ ಶಾಶ್ವತವಾಗಿ ಮುಚ್ಚಲಾಗುತ್ತದೆ.
ಫಲಾನುಭವಿಗಳು ಹುಬ್ಬಳ್ಳಿ ನಗರದಲ್ಲಿರುವ ಆರ್.ಎಮ್.ಚಾಟನಿಸ್ ಬಿಲ್ಡಿಂಗ್, ಪಿಬಿ ರೋಡ ಹತ್ತಿರದ ಬೀಡಿ ಕಾರ್ಮಿಕರ ಕಲ್ಯಾಣ ನಿಧಿ ಸ್ಥಿರ ಉಪಚಿಕಿತ್ಸಾಲಯ (BWWFDD dispensaŗy R.M.Chatnis buliding PB Road, Hubballi) ಆಸ್ಪತ್ರೆಯಲ್ಲಿ ಆರೋಗ್ಯ ಸೇವೆಗಳು ಲಭ್ಯವಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಆಸ್ಪತ್ರೆಯ ವೈದ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.