LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜೂನ್ 12 :ಡಾ||ಜ್ಞಾನೇಶ್ ಹುಟ್ಟುಹಬ್ಬ

ಸೊರಬ,ಜೂ.09 : ಸಮಾಜ ಸೇವಕ ಡಾ.ಜ್ಞಾನೇಶ್ ಅವರ ಹುಟ್ಟು ಹಬ್ಬವನ್ನು ಜೂನ್ ೧೨ರಂದು ಬೆಳಿಗ್ಗೆ 10 ಗಂಟೆಗೆ ಗಿರಿಜಾ ಶಂಕರ ಭವನದಲ್ಲಿ ಪಟ್ಟಣದ ನವಚೇತನ ಬುದ್ದಿಮಾಂದ್ಯ ಮಕ್ಕಳೊಂದಿ ಗೆ ವಿಶಿಷ್ಟವಾಗಿ ಆಚರಿಸಲಾಗುವುದು ಎಂದು   ಡಾ||  ಜ್ಞಾನೇಶ್ ಸ್ನೇಹ ಬಳಗದ ಯಶೋಧರ ಹೇಳಿದರು.

ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಡಾ|| ಜ್ಞಾನೇಶ್ ಸ್ನೇಹ ಬಳಗದ ವತಿಯಿಂದ ಡಾ.ಜ್ಞಾನೇಶ್ ಅವರ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಂಡಿರುವ ಬೃಹತ್ ರಕ್ತದಾನ ಶಿಬಿರದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ಜೂನ್ 12 ರಂದು ನಡೆಯುವ ವಿಶಿಷ್ಟ ಕಾರ್ಯಕ್ರಮಕ್ಕೆ ಸಂಸದ ಬಿ.ವೈ.ರಾಘವೇಂದ್ರ ಚಾಲನೆ ನೀಡಲಿದ್ದಾರೆ. ಕಳೆದ ಹತ್ತಾರು ವರ್ಷಗಳಿಂದ ತಮ್ಮ ವೈದ್ಯವೃತ್ತಿ ಜೊತೆಗೆ  ಜ್ಞಾನೇಶ್ ಅವರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಸೇವಾ ಕಾರ್ಯವನ್ನು ತಾಲ್ಲೂಕಿನ ಜನರಿಗೆ ತಲುಪಿಸುವ ಉದ್ದೇಶದಿಂದ ಸಕ್ರಿಯ ರಾಜಕಾರಣಕ್ಕೆ ಧುಮುಕಿ ಜನರಿಗೆ ತಮ್ಮ ಸೇವೆ ನೀಡುತ್ತಿರುವುದು ಅವರ ಸಾಮಾಜಿಕ ಬದ್ಧತೆಯ ಚಿಂತನೆಗೆ ಸಾಕ್ಷಿಯಾಗಿದೆ ಎಂದರು.

ಸ್ನೇಹ ಬಳಗದ ಪ್ರಮುಖರಾದ ಶರತಗೌಡ ಈ ಮಾತನಾಡಿ, ಜೀವನ್ಮರಣದ ನಡುವೆ ಹೋರಾಡುವ ರೋಗಿಗಳಿಗೆ ಇಂದು ರಕ್ತ ಸಮಯಕ್ಕೆ ಸರಿಯಾಗಿ ಸಿಗದೇ ಮರಣ ಹೊಂದುತ್ತಿದ್ದಾರೆ. ತಮ್ಮ ಜನ್ಮದಿನವನ್ನು ವಿಶೇಷವಾಗಿ ರಕ್ತದಾನ ಶಿಬಿರದ ಮೊಲಕ ಆಚರಿಸಿಕೊಳ್ಳುತ್ತಿದ್ದಾರೆ.  ಬಾರಿ 200 ಕ್ಕೂ ಅಕ ಯುನಿಟ್ ರಕ್ತ ಸಂಗ್ರಹವಾಗುವ ನಿರೀಕ್ಷೆಯಲ್ಲಿ ಇಂತಹ ತಂದಿದೆ.   ಎಂದರು.
ಶಿವಾನಂದ ತೆಲಗುಂದ್ದಿ, ಹರೀಶ್ ಎಸ್. ಪುನೀತ್, ಸಮರ್ಥ್, ಸ್ವರೂಪ್, ಶರತಗೌಡ ಉದ್ರಿ,ಅಕ್ಷಯ್,  ಧನರಾಜ್ ಸುರೇಂದ್ರ ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST