LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕಬೀರಾನಂದಾಶ್ರಮ: ಫೆ. 11 ರಿಂದ 15ರವರೆಗೆ 96ನೇ ಮಹಾ ಶಿವರಾತ್ರಿ ಮಹೋತ್ಸವ

 

ಚಿತ್ರದುರ್ಗ : ಕಬೀರಾನಂದ ನಗರದಲ್ಲಿನ ಶ್ರೀ ಸದ್ಗುರು ಕಬೀರಾನಂದಾಶ್ರಮದಲ್ಲಿ ಫೆ. 11 ರಿಂದ 15ರವರೆಗೆ 96ನೇ ಮಹಾ ಶಿವರಾತ್ರಿ ಮಹೋತ್ಸವ ನಡೆಯಲಿದೆ ಎಂದು ಶ್ರೀ ಸದ್ಗುರು ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳ ತಿಳಿಸಿದರು.

ಸೋಮವಾರ ಶ್ರೀ ಸದ್ಗುರು ಕಬೀರಾನಂದಾಶ್ರಮದ ಸಭಾಂಗಣದಲ್ಲಿ 96ನೇ ಮಹಾ ಶಿವರಾತ್ರಿ ಮಹೋತ್ಸವದ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಶ್ರೀಗಳು, ಚಿತ್ರದುರ್ಗ ಜಿಲ್ಲೆಯಲ್ಲಿ ವಿವಿಧ ಜಾತಿಯ ಮಠಗಳು ಇವೆ ಆದರೆ ಕಬೀರಾನಂದಾಶ್ರಮ ಮಾತ್ರ ಜಾತ್ಯಾತೀತವಾದ ಆಶ್ರಮವಾಗಿದೆ ಇಲ್ಲಿ ಜಾತಿ, ಧರ್ಮ, ಲಿಂಗ, ಜನಾಂಗ ಎನ್ನದೆ ಎಲ್ಲರು ಸಹಾ ಬಂದು ಹೋಗುತ್ತಾರೆ. ಇದೇ ರೀತಿ ಇಲ್ಲಿನ ಮಠಗಳು ಸಹಾ ತಮ್ಮ ಪಾಲಿನ ಜಾತಿಯ ಸಮಾವೇಶಗಳನ್ನು ಮಾಡುತ್ತಾರೆ ಆದರೆ ನಮ್ಮ ಆಶ್ರಮ ಶಿವನ ನಾಮ್ಮಸ್ಮರಣೆಯನ್ನು ಮಾಡುವ ಸಲುವಾಗಿ ಕಳೆದ 95 ವರ್ಷಗಳಿಂದ ನಿರಂತರವಾಗಿ ಶಿವನಾಮ ಸಪ್ತಾಹವನ್ನು ಆಚರಿಸಿಕೊಂಡು ಬಂದಿದೆ. ಮಾನವನಿಗೆ ಆಧ್ಯಾತ್ಮಿಕ, ಆದಿ ಭೌತಿಕ ಹಾಗೂ ಆದಿ ದೈವ ಎಂಬ ಮೂರು ಕಾಡುತ್ತವೆ, ಇವುಗಳಿಂದ ಹೂರ ಬರಲು ಈ ರೀತಿಯಾದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಬಾಗವಹಿಸುವುದು ಅಗತ್ಯವಾಗಿದೆ ಎಂದರು.

ಪೌರಾಣಿಕ ಹಿನ್ನಲೆಯಿರುವ ಮಹಾಶಿವರಾತ್ರಿಯನ್ನು ನಾಡಿನಾದ್ಯಂತ ವಿಜೃಂಭಣೆಯಿಂದ ಶಿವಭಜನೆ, ಶಿವಪೂಜೆ ಮತ್ತು ಉಪವಾಸ, ನಾನಾ ರೀತಿಯಲ್ಲಿ ಭಕ್ತರು ಆಚರಿಸುವ ಈ ಮಹಾಶಿವರಾತ್ರಿಯು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ, ಶ್ರೀ ಜಗದ್ಗುರು ಸಿದ್ಧಾರೂಢ ಮಹಾತ್ಮರು ಅವತರಿಸಿ ಪವಾಡಗಳ ಮೂಲಕ ಜಗತ್ಪಸಿದ್ಧರಾಗಿ ತಮ್ಮ ಶಿಷ್ಯ ಸಮೂಹವನ್ನು ಶಿವಭಜನೆ, ಶಿವನಾಮ ಸಪ್ತಾಹ ಆಚರಿಸುವ ಮೂಲಕ ಆಧ್ಯಾತ್ಮ ಮಾರ್ಗವನ್ನು ಅನುಸರಿಸಲು ಪ್ರೇರೇಪಿಸಿದರು. ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳವರ ಕರಕಮಲಸಂಜಾ ತರಾದ ಶ್ರೀ ಸದ್ಗುರು ಕಬೀರಾನಂದ ಮಹಾಸ್ವಾಮಿಗಳು, ಗುರುಗಳ ಆದೇಶದಂತೆ, ಚಿತ್ರದುರ್ಗದಲ್ಲಿ ಮಾನವರ ಕಲ್ಯಾಣಕ್ಕಾಗಿ ಸ್ಥಾಪಿಸಿದ ಅದೈತ, ಜಾತ್ಯತೀತ ಸಂಪ್ರದಾಯದ ಮಠವೇ ಶ್ರೀ ಸದ್ಗುರು ಕಬೀರಾನಂದಾಶ್ರಮ. ಗುರುಗಳ ಪರಂಪರೆಯಂತೆ ಪ್ರತಿವರ್ಷವು ಶಿವನಾಮ ಸಪ್ತಾಹವನ್ನು ಮಹಾಶಿವರಾತ್ರಿ ಸಮಯದಲ್ಲಿ ನಡೆಸಿಕೊಂಡು ಬರುತ್ತಿರುವುದು ಶ್ರೀಮಠದ ವೈಶಿಷ್ಟ್ಯವಾಗಿದೆ.

ಶ್ರೀಮಠವು ಚಾರಿತ್ರಿಕ ಹಿನ್ನೆಲೆಯಲ್ಲಿ ನಡೆಸಿಕೊಂಡು ಬರುತ್ತಿರುವ ಶಿವನಾಮ ಸಪ್ತಾಹವನ್ನು ಜಾತಿ-ಮತಗಳ ಚೌಕಟ್ಟನ್ನು ಮೀರಿ, ನಾಡಿನ ಜನರ ಭಾವೈಕ್ಯ ಸಾಧನವನ್ನಾಗಿ ಸಾಧಿಸುತ್ತಿದೆ  ಅದೈತ ಸಂಪ್ರದಾಯದಂತೆ ನಡೆದು ಬಂದ ಪರಂಪರೆಯನ್ನು ಉಳಿಸಿಕೊಂಡು, ಶಿವನಾಮ ಸಂಕೀರ್ತನೆ ಮಾಡಿಸುವುದು,  ಮೂಲಕ ಈ ಮಹಾಶಿವರಾತ್ರಿ ಕಾರ್ಯಕ್ರಮಕ್ಕೆ ವಿಶೇಷ ಮೆರಗನ್ನು ನಿಡಲಾಗುತ್ತಿದೆ 96ನೇ ಮಹಾಶಿವರಾತ್ರಿ ಮಹೋತ್ಸವ ಕಾರ್ಯಕ್ರಮವು ಶ್ರೀ ಮಠದ ಆವರಣದಲ್ಲಿ ನಿರ್ಮಿತವಾಗಿರುವ ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ಮಹಾಮಂಟಪದಲ್ಲಿ ನಡೆಯಲಿದೆ. ಪ್ರತಿದಿನ ರಾತ್ರಿ ಕಾರ್ಯಕ್ರಮದ ನಂತರ ಕಿರೀಟ ಪೂಜೆ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ಇರುತ್ತದೆ.

ಶಿವನಾಮ ಸಪ್ತಾಹದ ಅಂಗವಾಗಿ ಆಶ್ರಮದ ಹಿಂಭಾಗದಲ್ಲಿ ನಿರ್ಮಾಣವಾಗಿರುವ ಮಂಟಪದಲ್ಲಿ ಶ್ರೀ ಸದ್ಗರು ಕಬೀರಾನಂದಸ್ವಾಮಿ ವೇದಿಕೆಯಲ್ಲಿ ಪ್ರತಿ ದಿನ ಸಂಜೆ 6.30ರಿಂದ ಸಭಾ ಕಾರ್ಯಕ್ರಮಗಳು ನಡೆಯಲಿದ್ದು, ಇದರಲ್ಲಿ ನಾಡಿನ ವಿವಿಧ ಮಠಾಧೀಶರು, ಸಾಹಿತಿಗಳು, ಗಣ್ಯರು, ವಿದ್ವಾಂಸರು, ಚುನಾಯಿತ ಪ್ರತಿನಿಧಿಗಳು, ಮಾಜಿ ಸಚಿವರು ಶಾಸಕರು, ಸಂಸದರು ಭಾಗವಹಿಸಲಿದ್ದಾರೆ ಎಂದು ಶ್ರೀಗಳು, ಶಿವನಾಮ ಸಪ್ತಾಹವನ್ನು ಆಚರಿಸಲು ಈಗಾಗಲೇ ಎಲ್ಲಾ ಸಿದ್ದತೆಯನ್ನು ಮಾಡಲಾಗಿದೆ, ಈ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮಠಾಧಿಶರು ಆಗಮಿಸುವುದರ ಮೂಲಕ ಭಕ್ತಾಧಿಗಳು ದರ್ಶನಾರ್ಶಿವಾದವನ್ನು ನೀಡಲಿದ್ದಾರೆ. ಫೆ. 15 ರಂದು ಶಿವಲಿಂಗಾನಂದ ಶ್ರೀಗಳ ಪಲ್ಲಕ್ಕಿ ಉತ್ಸವ, ಫೆ, 16 ರಂದು ಕೌದಿ ಪೂಜೆಯೊಂದಿಗೆ ಶಿವನಾಮ ಸಪ್ತಾಹವೂ ಸಮಾಪ್ತಿಯಾಗಲಿದೆ.

ಈ ಸಂದರ್ಭದಲ್ಲಿ 96ನೇ ಮಹಾ ಶಿವರಾತ್ರಿ ಮಹೋತ್ಸವದ ಅಧ್ಯಕ್ಷರಾದ ಭಾಸ್ಕರ್, ಉಪಾಧ್ಯಕ್ಷರಾದ ಪರಮೇಶ್ವರಪ್ಪ, ಪ್ರಶಾಂತ್, ಓಂಕಾರ್, ರೂಪ ಜನಾರ್ಧನ್, ರುದ್ರೇಶ್, ಸತೀಶ್, ಗಣಪತಿ ಶಾಸ್ತ್ರಿ, ತಿಪ್ಪೇಸ್ವಾಮಿ ನಿರಂಜನಮೂರ್ತಿ, ಯೋಗೀಶ್, ಸೇರಿದಂತೆ ಇತರರು ಉಪಸ್ಥಿತರಿದ್ದರು.

 

 

 

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026