E-PAPER
20 Nov 2026, 12:17:46 AM|
Gold₹13023/gGold24K ₹13,023/g - 22K ₹11,927/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

Kalaburagi | ಲಾರಿ–ಬೈಕ್ ನಡುವೆ ಭೀಕರ ಅಪಘಾತ: ಮೂವರು ಯುವಕರು ಮೃತ್ಯು

ಕಲಬುರಗಿ : ಆಳಂದ ಪಟ್ಟಣದ ಹಳೆ ಆರ್‌ಟಿಒ ಕಚೇರಿ ಸಮೀಪ ಬುಧವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಯುವಕರು ಮೃತಪಟ್ಟಿದ್ದಾರೆ. ವೇಗವಾಗಿ ಬಂದ ಲಾರಿಯೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಅಪಘಾತದಲ್ಲಿ ಶರಣನಗರದ ಶ್ರೀಕಾಂತ ದಯಾನಂದ ಜಗದೆ (19), ಗುರುನಾಥ ಮಲ್ಲಿನಾಥ ಮಾಶಾಳ (25) ಹಾಗೂ ಶಶಿಕಾಂತ ಬಸವರಾಜ ಇಟಾಮಳೆ (30) ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಶ್ರೀಕಾಂತ ಬುಧವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದಿದ್ದರು. ಸ್ನೇಹಿತ ದರ್ಶನನ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ತೆರಳುವುದಾಗಿ ಹಾಗೂ ವಿಂಡ್ ಕಂಪನಿಯ ಕಚೇರಿಗೆ ಕೆಲವು ದಾಖಲೆಗಳನ್ನು ನೀಡಬೇಕೆಂದು ಹೇಳಿ ಮನೆಯಿಂದ ಹೊರಟಿದ್ದರು. ರಾತ್ರಿ 10 ಗಂಟೆಗೆ ತಾಯಿ ಬಸಮ್ಮ ಊಟಕ್ಕೆ ಬರುವಂತೆ ಕರೆ ಮಾಡಿದಾಗ, ಹೊರಗಡೆ ಊಟ ಮಾಡುವುದಾಗಿ ತಿಳಿಸಿದ್ದ ಎನ್ನಲಾಗಿದೆ.

ರಾತ್ರಿ 10.40ರ ಸುಮಾರಿಗೆ ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಬಂದ ಲಾರಿಯೊಂದು ಮೂವರು ಯುವಕರು ಪ್ರಯಾಣಿಸುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಮೂವರೂ ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು ಎಂದು ತಿಳಿದು ಬಂದಿದೆ.

ರಾತ್ರಿ 11.15ರ ಸುಮಾರಿಗೆ ಪಕ್ಕದ ಮನೆಯ ಮಹೇಶ ಪಾಟೀಲ್ ಅವರು ಶ್ರೀಕಾಂತನ ತಂದೆ ದಯಾನಂದ ಅವರಿಗೆ ಅಪಘಾತದ ವಿಷಯ ತಿಳಿಸಿದ್ದರು. ತಕ್ಷಣ ಅವರು ತಮ್ಮ ಸಹೋದರ ರಾಮಚಂದ್ರ ಅವರೊಂದಿಗೆ ಸ್ಥಳಕ್ಕೆ ಧಾವಿಸಿದ್ದರು. ಶ್ರೀಕಾಂತನ ತಲೆಗೆ ತೀವ್ರ ಗಾಯಗಳಾಗಿದ್ದು, ಬಲಗೈ ಮತ್ತು ಬಲಗಾಲು ಮುರಿದಿದ್ದವು. ಗುರುನಾಥ ಅವರ ತೊಡೆಗೆ ತೀವ್ರ ಗಾಯವಾಗಿದ್ದು, ಬಲಗಾಲು ಮುರಿದಿತ್ತು. ಶಶಿಕಾಂತ ಅವರ ಬಲಗಾಲು ಮುರಿದಿದ್ದು, ಅವರು ಅರೆಪ್ರಜ್ಞಾವಸ್ಥೆಯಲ್ಲಿದ್ದರು.

ಸ್ಥಳೀಯರು ಗಾಯಾಳುಗಳನ್ನು ಆಳಂದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಪರೀಕ್ಷಿಸಿದ ವೈದ್ಯರು ಶ್ರೀಕಾಂತ ಮತ್ತು ಗುರುನಾಥ ಮೃತಪಟ್ಟಿರುವುದಾಗಿ ಘೋಷಿಸಿದರು. ಗಂಭೀರವಾಗಿ ಗಾಯಗೊಂಡಿದ್ದ ಶಶಿಕಾಂತ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಕಳುಹಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರೂ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಕಲಂ 125(ಬಿ), 106(1) ಹಾಗೂ ಮೋಟಾರು ವಾಹನ ಕಾಯ್ದೆಯ ಕಲಂ 187ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಾಹನ ದಟ್ಟಣೆ ನಿಯಂತ್ರಣಕ್ಕೆ ʼನೂತನ ರಸ್ತೆ ಗ್ರಿಡ್ ವ್ಯವಸ್ಥೆʼ : ಸಿಎಂ ಡಿ.ಕೆ.ಶಿವಕುಮಾರ್ʼಬಸವ ಮಂಟಪ’ ಕೃತಿ ವಿವಾದ; ಲೇಖಕ ರವಿ ಹಂಜ್, ವಿಶ್ವೇಶ್ವರ ಭಟ್ ವಿರುದ್ಧ ಎಫ್‍ಐಆರ್ ದಾಖಲುಧರ್ಮಸ್ಥಳ ಪ್ರಕರಣ; ಎಸ್‌ಐಟಿ ತನಿಖೆ ಪ್ರಶ್ನಿಸಿ ಗಿರೀಶ್ ಮಟ್ಟಣ್ಣವರ್ ಸಲ್ಲಿಸಿದ್ದ ಅರ್ಜಿ ವಜಾ2,321 ಕೋಟಿ ರೂ.ವೆಚ್ಚದಲ್ಲಿ ಬೆಂಗಳೂರು ರಸ್ತೆಗಳ ವೈಟ್ ಟ್ಯಾಪಿಂಗ್ : ಸಂಪುಟ ತೀರ್ಮಾನ‘ಬಸವ ಮಂಟಪ’ ಕೃತಿ ಮುಟ್ಟುಗೋಲು; ರವಿ ಹಂಜ್, ವಿಶ್ವೇಶ್ವರ ಭಟ್ ವಿರುದ್ಧ ಕಾನೂನು ಕ್ರಮ : ಸಂಪುಟ ಸಭೆ ನಿರ್ಣಯಸಿಸಿಬಿಗೆ ರೌಡಿ ನಿಗ್ರಹ ದಳ ಎಂದು ಮರುನಾಮಕರಣಎಸಿ ರೂಂನಲ್ಲಿದ್ದ ಹಲವು ಕಾಂಗ್ರೆಸ್ ನಾಯಕರಿಗೆ ಬಿಸಿ ಮುಟ್ಟಿಸಿ ರಾಹುಲ್ ಗಾಂಧಿ ಬೀದಿಗೆ ತಂದಿದ್ದಾರೆ : ವಿನಯ್ ಕುಮಾರ್ ಸೊರಕೆತಾ.ಪಂ, ಜಿ.ಪಂ ಕ್ಷೇತ್ರ ಮೀಸಲು ಅಂತಿಮ ಅಧಿಸೂಚನೆ ಶುಕ್ರವಾರ ಪ್ರಕಟ : ಸಚಿವ ಈಶ್ವರ್ ಖಂಡ್ರೆʼSIRʼ ಅಂತಿಮ ಪಟ್ಟಿ ತಿರಸ್ಕರಿಸಿ ಸಾಮಾಜಿಕ ಪರಿಶೋಧನೆ ನಡೆಸಿ : ಎಸ್‍ಐಆರ್ ವಿರೋಧಿ ಜಾತ್ಯತೀತ ಪಕ್ಷಗಳು-ಜನಪರ ಸಂಘಟನೆಗಳ ಒಕ್ಕೂಟಬಸವ ಮಂಟಪ ಕೃತಿ ಮುಟ್ಟುಗೋಲಿಗೆ ಸಂಪುಟ ಸಮ್ಮತಿ : ಸಚಿವ ಈಶ್ವರ್‌ ಖಂಡ್ರೆ