LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಲ್ಮಲಾ ಶ್ರೀ ಕರಿಯಪ್ಪ ತಾತಾ ಜಾತ್ರೆ; ಮದ್ಯ ಮಾರಾಟ ನಿಷೇಧ ಜಿಲ್ಲಾಧಿಕಾರಿ ನಿತೀಶ್ ಕೆ.


ರಾಯಚೂರು, ತಾಲೂಕಿನ ಕಲ್ಮಲಾ ಗ್ರಾಮದ ಶ್ರೀ ಕರಿಯಪ್ಪ ತಾತಾ ದೇವಸ್ಥಾನದ ಜಾತ್ರೆ ಸುಗಮವಾಗಿ ನಡೆಯಲು ಆಯ್ದ ದಿನಗಳಂದು ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಅವರು ತಿಳಿಸಿದ್ದಾರೆ.



ಅಬಕಾರಿ ಕಾಯ್ದೆ 1965ರ ಕಲಂ.21 (1)ರನ್ವಯ ರಾಯಚೂರು ತಾಲೂಕಿನ ಕಲ್ಮಲಾ ಗ್ರಾಮದ ಶ್ರೀ ಕರಿಯಪ್ಪ ತಾತಾ ಜಾತ್ರೆಯಲ್ಲಿ ಭಕ್ತಾದಿಗಳಿಗೆ ತೊಂದರೆಯಾಗದ0ತೆ ಹಾಗೂ ಕಾನೂನು, ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಮತ್ತು ಜಾತ್ರೆಯು ಸುಗಮವಾಗಿ ನಡೆಯಲು ಮುಂಜಾಗ್ರತಾ ಕ್ರಮವಾಗಿ ದಿನಾಂಕ:09-08-2024ರ0ದು ಸಂಜೆ 05ಗಂಟೆಯಿ0ದ ದಿನಾಂಕ:10-08-2024 ರಂದು ಬೆಳಿಗ್ಗೆ 6ಗಂಟೆಯವರೆಗೆ, ದಿನಾಂಕ:12-08-2024 ರಂದು ಬೆಳಿಗ್ಗೆ 6ಗಂಟೆಯಿ0ದ ಮರು ದಿನ ಬೆಳಿಗ್ಗೆ 6ಗಂಟೆಯವರೆಗೆ, ದಿನಾಂಕ:19-08-2024 ರಂದು ಬೆಳಿಗ್ಗೆ 6ಗಂಟೆಯಿoದ ಮರು ದಿನ ಬೆಳಿಗ್ಗೆ 6-00 ಗಂಟೆಯವರೆಗೆ ಹಾಗೂ ದಿನಾಂಕ:26-08-2024 ರಂದು ಬೆಳಿಗ್ಗೆ 6ಗಂಟೆಯಿoದ ಮರು ದಿನ ಬೆಳಿಗ್ಗೆ, 6ಗಂಟೆಯವರೆಗೆ ಕಲ್ಮಲಾ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಎಲ್ಲ ರೀತಿಯ ಮಧ್ಯ ತಯಾರಿಕಾ ಘಟಕಗಳು, ಸಾಗಾಣಿಕೆ ಮತ್ತು ಸಂಗ್ರಹಣೆಯನ್ನು/ ಮಾರಾಟ ಮಳಿಗೆಗಳನ್ನು ಬಂದ್ ಇಡಲು ಆದೇಶ ಹೊರಡಿಸಿದ್ದಾರೆ.



ಈ ಅವಧಿಯಲ್ಲಿ ಹೊರಗಿನಿಂದ ಮದ್ಯ ಇತ್ಯಾದಿಗಳನ್ನು ತಂದು ಮಾರಾಟ ಮಾಡುವುದು ಕಂಡುಬ0ದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆ ತಿಳಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರೀಪೇಡ್ ಮರಣಬಳ್ಳಾರಿ: ವಸತಿ ನಿಲಯಗಳ ನೋಂದಣಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಜಿ ಆಹ್ವಾನಕೈಮಗ್ಗ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಬಳ್ಳಾರಿ: ಮೇ ಮತ್ತು ಜೂನ್ ತಿಂಗಳ ಪಡಿತರ ಹಂಚಿಕೆಬಳ್ಳಾರಿ: ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಜಮೀನು ಖರೀದಿ - ಸಾರ್ವಜನಿಕ ಆಕ್ಷೇಪಣೆಗೆ ಆಹ್ವಾನಕನಕಗಿರಿ ಉತ್ಸವದಲ್ಲಿ ಸಾರ್ವಜನಿಕರಿಗಾಗಿ ವೈವಿದ್ಯಮಯ ಕಾರ್ಯಕ್ರಮಗಳು: ಡಾ.ಸುರೇಶ ಬಿ ಇಟ್ನಾಳಅಂಜನಾದ್ರಿ ದೇವಸ್ಥಾನಕ್ಕೆ ಅರ್ಪಿಸಿದ ಚಿನ್ನದ ಆಭರಣದಲ್ಲಿ ತಾಮ್ರ ಪತ್ತೆ2.30 ಕೋಟಿ ಮೌಲ್ಯದ ಕಾಣಿಕೆಯಲ್ಲಿ ಅನುಮಾನ; ಮೌಲ್ಯಮಾಪನ ವೇಳೆ ಬಹಿರಂಗಸುಕ್ಷೇತ್ರ ಹುಲಿಗಿಯಲ್ಲಿ ಹಬ್ಬದ ಸಡಗರ * ಭಕ್ತಗಣದಿಂದ ಉದೋ ಉದೋ ಘೋಷ *ವಿಜ್ರಂಭಣೆಯಿಂದ ಜರುಗಿದ ಲೋಕಮಾತೆ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ*ಅಂಜನಾದ್ರಿಗೆ ಹೈದ್ರಾಬಾದ್ ದಾನಿ ದೇಣಿಗೆ ನೀಡಿದ ಲೋಹಗಳ ಬಿಲ್, ದಾಖಲೆಗಳನ್ನು ಪುನಃ ಪರಿಶೀಲಿಸಲಾಗುವುದು: ಜಿಲ್ಲಾಧಿಕಾರಿಗಳು