LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗೌರವಯುತವಾಗಿ ಮಾತನಾಡುವುದನ್ನು ಕಲಿರಿ

ಶಿವಮೊಗ್ಗ : ನಿಮಗೆ ಗೌರವ ಬೇಕಾದರೆ ಇನ್ನೊಬ್ಬರಿಗೆ ಗೌರವ ಕೊಟ್ಟು ಅದನ್ನು ಪಡೆದುಕೊಳ್ಳಿ. ನೀವು ಸರಿಯಾಗಿದ್ದರೆ ಎಲ್ಲವೂ ಸರಿಯಾಗಿರುತ್ತದೆ ನೀವು ಹಿಂದೆ ಮಾಡಿದ ಕರ್ಮಗಳು ಈಗ ನಿಮಗೆ ವಾಪಸ್ ಬರುತ್ತಿವೆ.

ಹೀಗೆಂದು ಶಾಸಕ ಎಸ್ ಎನ್ ಚನ್ನಬಸಪ್ಪ ಅವರಿಗೆ ಮಾಜಿ ಶಾಸಕ ಆಯನೂರು ಮಂಜುನಾಥ್ ತಿರುಗೇಟು ನೀಡಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಚನ್ನಬಸಪ್ಪ ಅವರು ಸಚಿವ ಮಧು ಬಂಗಾರಪ್ಪ ಬಗ್ಗೆ ನಾಲಿಗೆ ಹಿಡಿತದಲ್ಲಿಟ್ಟುಕೊಂಡು, ಶಬ್ದದ ಮೇಲೆ ನಿಯಂತ್ರಣವಿರಿಸಿ ಮಾತನಾಡಬೇಕು.

ಈ ಹಿಂದೆ ಅವರೇ ಸಿದ್ದರಾಮಯ್ಯ, ಜಮೀರ್ ಅಹ್ಮದ್ ವಿರುದ್ಧ ಅತಿ ಕೆಟ್ಟದಾದ ಭಾಷೆಯಲ್ಲಿ ಮಾತನಾಡಿದ್ದರು. ಈಗ ತಾವೇ ಮಧು ಬಂಗಾರಪ್ಪ ವಿರುದ್ಧ ಅಹಂಕಾರದ ಮಾತು ಬಿಡಿ ಎಂಬ ಬುದ್ಧಿವಾದ ಹೇಳುತ್ತಿದ್ದಾರೆ ಎಂದು ಹೇಳಿದರು.

ಮಾಜಿ ಸಚಿವ ಈಶ್ವರಪ್ಪನವರು ಸಚಿವರಾದಾಗ ಚನ್ನಬಸಪ್ಪ ಅವರ ಬಲಗೈಯಂತಿದ್ದರು. ಈಶ್ವರಪ್ಪನವರ ಕಾರ್ಯಕ್ರಮದಲ್ಲಿ ಅರ್ಧದಷ್ಟು ಅವರೇ ನಿಭಾಯಿಸುತ್ತಿದ್ದರು. ಆಗ ಬಿಜೆಪಿಯ ಶಾಸಕರಾಗಿದ್ದ ಆಯನೂರು ಮಂಜುನಾಥ್, ಭಾರತಿ ಶೆಟ್ಟಿ, ಡಿಎಸ್ ಅರುಣ್ ಅವರನ್ನು ಎಷ್ಟು ಕಾರ್ಯಕ್ರಮಗಳಿಗೆ ಶಿಷ್ಟಾಚಾರದ ಪ್ರಕಾರ ಆಹ್ವಾನಿಸಿದ್ದಾರೆ.

ಬಿಜೆಪಿ ಶಾಸಕರನ್ನು ಸಹ ಕಾರ್ಯಕ್ರಮಕ್ಕೆ ಕರೆಯುತ್ತಿರಲಿಲ್ಲ ನೀವೇ ಮಾಡಿದ ಕೆಲಸಗಳು ಈಗ ನಿಮಗೇ ವಾಪಸ್ ಬರುತ್ತಿವೆ. ಬೇರೆಯವರು ಮಾಡಿದರೆ ಮಾತ್ರ ಅದನ್ನು ಅನಾಚಾರ ಎನ್ನುತ್ತಿದ್ದಾರೆ ಎಂದು ಹೇಳಿದರು.

ಆಶ್ರಯ ಮನೆ ಸಂಬಂಧ ಶಾಸಕರು ಸಚಿವರ ವಿರುದ್ಧ ಮಾತನಾಡಿರುವುದಕ್ಕೆ ತಿರುಗೇಟು ನೀಡಿದ ಆಯನೂರು, ನೀವು ಅಹಂಕಾರದ ಮಾತನಾಡುತ್ತಿದ್ದೀರಿ. ಬ್ರಹ್ಮ ಬಂದರೂ ತಾನು ಮನೆ ಹಂಚುವುದನ್ನು ತಡೆಯಲಾಗುವುದು ಎಂಬ ಉಡಾಫೆಯ ಮಾತನಾಡಿದ್ದೀರಿ.

ಇದು ಸರಿಯಲ್ಲ. ನಿಮಗೆ ಧೈರ್ಯ ಇರುವುದಾದರೆ ಸ್ಮಾರ್ಟ್ ಸಿಟಿ ಮತ್ತು ಪಾಲಿಕೆಯಲ್ಲಿ ಎಲ್ಲೆಲ್ಲಿ ಕಾನೂನು ಉಲ್ಲಂಘಿಸಿ ಕಾಮಗಾರಿ ನಡೆದಿದೆ ಅದರ ವಿರುದ್ಧ ಕ್ರಮ ತೆಗೆದುಕೊಳ್ಳಿ. ಕಾಮಗಾರಿ ಮುಗಿದಿದೆ ಎಂದರೆ ಸ್ಮಾರ್ಟ್ ಸಿಟಿ ಸ್ಟಾಫ್ ಅನ್ನು ಏಕೆ ಮುಂದುವರಿಸಿದ್ದೀರಿ ಎಂದು ಪ್ರಸನಿಸಿದರೆಉ.

ಶಾಸಕರು ರಾಜಕೀಯದಲ್ಲಿ ಸೌಜನ್ಯವನ್ನು ಬೆಳೆಸಿಕೊಳ್ಳಬೇಕು, ಸ್ನೇಹದ ಹಸ್ತವನ್ನು ಸಚಿವರು ಕೊಡಲು ಬಂದರೂ ಅದನ್ನು ನಿರಾಕರಿಸಿದ ಘಟನೆ ಇದೆ. ಉದ್ಧಟತನದ ಮಾತನಾಡುತ್ತಿದ್ದಾರೆ. ಈಶ್ವರಪ್ಪನವರನ್ನು ಅರ್ಧದಾರಿ ತಪ್ಪಿಸಿರುವ ನೀವು ಈಗ ಜಿಲ್ಲಾ ಉಸ್ತುವಾರಿ ಸಚಿವರಿಗೆ ಬುದ್ಧಿವಾದ ಹೇಳುವ ಮಟ್ಟಿಗೆ ಬೆಳೆದಿದ್ದೀರಿ. ಇದು ಒಳ್ಳೆಯದಲ್ಲ. ಎಲ್ಲರ ಜೊತೆಯು ಒಳ್ಳೆಯ ಬಾಂಧವ್ಯವನ್ನು ಇಟ್ಟುಕೊಳ್ಳಿ ಎಂದು ಕಿವಿ ಮಾತು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಆರ್ ಎನ್ ಮಂಜುನಾಥ ಗೌಡ, ಜಿ ಡಿ ಮಂಜುನಾಥ್, ಎಸ್ ಕೆ ಮರಿಯಪ್ಪ, ರಮೇಶ್ ಹೆಗಡೆ, ಶಿ ಜು ಪಾಶಾ ಮೊದಲಾದವರಿದ್ದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST