Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕನಕ ದಾಸರು ನಾಡಿಗೆ ನೀಡಿದ ಕೊಡುಗೆ ಅಪಾರ-ಧೀರಜ್ ಮುನಿರಾಜು 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
     ದಾಸಶ್ರೇಷ್ಠ ಕನಕ ದಾಸರ ಭಕ್ತಿ ಅನನ್ಯವಾದುದು. ಉಡುಪಿಯಲ್ಲಿ ಶ್ರೀಕೃಷ್ಣನ ದರ್ಶನ ಭಕ್ತರಿಗೆ ದೇವಾಲಯದ ಕನಕನ ಕಿಂಡಿಯ ಮೂಲಕವೇ ಆಗುತ್ತದೆ ಎಂದರೆ ಕನಕರ ಭಕ್ತಿಯ ಅಗಾದತೆ ಎಷ್ಟು ಎಂಬುದು ತಿಳಿಯುತ್ತದೆ ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.

          ದೊಡ್ಡಬಳ್ಳಾಪುರ ತಾಲೂಕು ಆಡಳಿತದಿಂದ ನಡೆದ ಸಂತ ಶ್ರೇಷ್ಠ ಕನಕದಾಸರ 537ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಧೀರಜ್ ಮುನಿರಾಜು ದಾಸರಲ್ಲಿ ಶ್ರೇಷ್ಠ ಕನಕದಾಸರು ನಾಡಿಗೆ ನೀಡಿದ ಕೊಡುಗೆ ಅಪಾರ.

ವರ್ಣ ಭೇದ, ವರ್ಗ ಬೇದ ನೀತಿಯ ವಿರುದ್ಧ ಹೋರಾಡಿದ ಕನಕದಾಸರು ಕನ್ನಡ ಸಾಹಿತ್ಯಕ್ಕೆ ತನ್ನ ಕೀರ್ತನೆಗಳ ಮೂಲಕ ಹೊಸರೂಪವನ್ನು ತಂದು ಕೊಟ್ಟವರಲ್ಲಿ ಮೊದಲಿಗರು. ನಾವೆಲ್ಲ ಅವರ ಆದರ್ಶಗಳನ್ನು ಅನುಸರಿಸಬೇಕಾಗಿದೆ ಎಂದು ಧೀರಜ್ ಹೇಳಿದರು.

            ನಗರ ಸಭೆ ಉಪಾಧ್ಯಕ್ಷ ರೈಲ್ವೆ ಸ್ಟೇಷನ್ ಮಲ್ಲೇಶ್ ಮಾತನಾಡಿ ಕನಕ ದಾಸರು ಸಂತರಾಗುವ ಮುನ್ನ ಪಾಳೇಗಾರರಾಗಿ ಉತ್ತಮ ಆಡಳಿತ ನೀಡಿದವರು. ಆದಿನೆಲೆ ಯಾದೀಶ ಚೆನ್ನಕೇಶವನ ಭಕ್ತರಾಗಿ ತನ್ನೆಲ್ಲ ಸಂಪತ್ತು ಸಾಮ್ರಾಜ್ಯ ಬಿಟ್ಟು ಸಂತ ರಾದವರು. ಅನಿಷ್ಠ ಜಾತಿ ಪದ್ಧತಿ ವಿರೋಧಿಸಿದವರು.

ಇವತ್ತಿಗೂ ಕೂಡಾ ಅವರ ಕುಲಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯ ಏನಾದರು ಬಲ್ಲಿರಾ ಎಂಬ ಕೀರ್ತನೆ ಸರ್ವಕಾಲಿಕವಾದದ್ದು. ಅವರು ಒಂದು ಜಾತಿಗೆ ಸೀಮಿತವಾಗದೆ ಮಾನವರೆಲ್ಲ ಒಂದೇ ಎಂಬ ಸಂದೇಶವನ್ನು ಜಗತ್ತಿಗೆ ಸಾರಿದವರು. 500ವರ್ಷಗಳ ಹಿಂದೆಯೇ ವರ್ಣ ದ್ವೇಷದ ವಿರುದ್ಧ ಹೋರಾಡಿದ ಕನಕ ದಾಸರ ಕೊಡುಗೆ ಅಪಾರವಾದುದು ಎಂದು ಹೇಳಿದರು.

         ನಿಕಟ ಪೂರ್ವ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಪ್ರಮೀಳಾ ಮಹದೇವ್ ಮಾತನಾಡಿ ಕನಕ ದಾಸರ ಕೊಡುಗೆ ಕನ್ನಡ ಸಾಹಿತ್ಯಕ್ಕೆ ಅಪಾರವಾದುದು. ಅವರ ಉಘಾ, ಬೋಗಾದಿಗಳು, ಮುಂಡಿಗೆಗಳು, ಕೀರ್ತನೆಗಳು ಸರ್ವ ಕಾಲಕ್ಕೂ ಸಲ್ಲುವಂತಹವು.

ಕನಕದಾಸರ ರಚನೆಗಳಾದ ರಾಮದಾನ್ಯ ಚರಿತ್ರೆ, ನಳ ಚರಿತ್ರೆ, ಮೋಹನ ತರಂಗಿಣಿ ಮುಂತಾದ ಕೃತಿಗಳು ಕನ್ನಡ ಸಾಹಿತ್ಯ ಲೋಕದ ಮೇರು ಕೃತಿಗಳು. ಅವರು ಕವಿ ಮಾತ್ರವಲ್ಲದೆ ಒಬ್ಬ ಗಟ್ಟಿ ಹೋರಾಟಗಾರರಾಗಿದ್ದಾವರು. ಪುರೋಹಿತ ಶಾಹಿ, ಹಾಗೂ ಅಸಮಾನತೆ ವಿರುದ್ಧ ಶತಮಾನಗಳ ಹಿಂದೆಯೇ ದ್ವನಿ ಎತ್ತಿ ಹೋರಾಟ ಮಾಡಿದುದು ಅತ್ಯಂತ ಗಮನಾರ್ಹವಾದ ಸಂಗತಿ ಎಂದು ಹೇಳಿದರು.

           ಕಾರ್ಯಕ್ರಮದಲ್ಲಿ ತಾಲೂಕು ದಂಡಾಧಿಕಾರಿಗಳಾದ ವಿಭಾ ವಿದ್ಯಾ ರಾತೋಡ್, ರಾಷ್ಟ್ರಿಯ ಹಬ್ಬಗಳ ಆಚರಣ ಸಮಿತಿ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘಟನೆಗಳ ಮುಖಂಡರಾದ ಸಿ. ಗುರುರಾಜಪ್ಪ, ಕನ್ನಡ ಪಕ್ಷದ ವೆಂಕಟೇಶ್, ಮುನಿಪಾಪಯ್ಯ, ಗ್ರಾ. ಪಂ ಸದಸ್ಯೆ ನಾಗರತ್ನಮ್ಮ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜಶೇಖರ್ ಹಾಗೂ ತಾಲೂಕು ಕುರುಬರ ಸಮಾಜದ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು : ಜಿಲ್ಲಾ ಉಸ್ತುವಾರಿ ಸಚಿವರು ಟಿ ರಘುಮೂರ್ತಿಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಕಾಡುಗೊಲ್ಲರ ಬದುಕು - ಸಣ್ಣಚಿತ್ತಯ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಹಂದರಗಂಭ ಪೂಜೆನೂತನ ಬಸ್ ನಿಲ್ದಾಣ ಲೋಕಾರ್ಪಣೆ ನೆರವೇರಿಸಿದ ಸಚಿವ ಟಿ.ರಘುಮೂರ್ತಿ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳ ಉದ್ಘಾಟನೆಬೆಳೆ ಸಮೀಕ್ಷೆದಾರರ ಬೇಡಿಕೆ ಈಡೇರಿಕೆಗೆ ಕ್ರಮ: ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಚಿವ ರಘುಮೂರ್ತಿದೇವಾಲಯ ನಿರ್ಮಾಣ ಪವಿತ್ರ ಕಾರ್ಯ - ಟಿ. ರಘುಮೂರ್ತಿಡಾ.ಹೇಮಂತರಾಜು ರವರ ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನ ಲೋಕಾರ್ಪಣೆಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತದ ಶೂಟಿಂಗ್ ತಾರೆ ಮನು ಭಾಕರ್ಪ್ಯಾರಾ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಕೆ.ಎಸ್. ಶಿಲ್ಪಾ