Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಕರ್ನಾಟಕ ವಿಧಾನಸಭಾ ಚುನಾವಣೆ ಬಹಳ ಮಹತ್ವದ ಚುನಾವಣೆ: ಮಲ್ಲಿಕಾರ್ಜುನ ಖರ್ಗೆ

ಸುದ್ದಿಮೂಲ ವಾರ್ತೆ

ಮಂಡ್ಯ,ಏ.29: ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆ ಬಹಳ ಮಹತ್ವದ ಚುನಾವಣೆ. ಈ ದೇಶದಲ್ಲಿ ಪ್ರಜಾಪ್ರಭುತ್ವದ ಉಳಿವಿಗೆ ಇದು ಮಹತ್ವದ ಚುನಾವಣೆ. ಒಂದುವೇಳೆ ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯದೇ ಹೋದರೆ ನಮಗೆ ಯಾರಿಗೂ ವೋಟಿನ ಅಧಿಕಾರ ನಮಗೆ ಇರೋದಿಲ್ಲ. ಅಂಬೇಡ್ಕರ್ ಬರೆದ ಸಂವಿಧಾನವನ್ನು ನಾವು ರಕ್ಷಣೆ ಮಾಡದೇ ಹೋದರೆ ಯಾರಿಗೂ ಮತದಾನವನ್ನು ಮಾಡುವ ಅಧಿಕಾರ ಇರೋದಿಲ್ಲ ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಮಾತನಾಡಿದ ಅವರು, ಇಂದು ಯುವಕರು, ಮುದುಕರು, ಹೆಣ್ಣು ,ಗಂಡು ಎಲ್ಲ ವಯಸ್ಕರಿಗೂ ವೋಟಿನ ಅಧಿಕಾರವಿದೆ. ಒಂದು ವೇಳೆ ಅಂಬೇಡ್ಕರ್, ನೆಹರೂ ಅವರು ಮತದಾನದ ಹಕ್ಕನ್ನು ಕೊಡದೇ ಇರುತ್ತಿದ್ದರೆ ಇಂದು ಯಾರೂ ನಿಮ್ಮ ಮನೆಬಾಗಿಲಿಗೆ ಮತಯಾಚನೆಗೆ ಬರುತ್ತ ಇರಲ್ಲಿಲ್ಲ. ಹಾಗಾಗಿ ನಮಗೆ ಇಂದು ಮತದಾನವನ್ನು ಮಾಡುವ ಅವಕಾಶ ಕಲ್ಲಿಸಿದ್ದು ಅಂಬೇಡ್ಕರ್ ಮತ್ತು ನೆಹರೂ ಅವರು.

ಈ ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಅನೇಕ ಬಡವರ ಪರ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ, ಬ್ಯಾಂಕ್ ರಾಷ್ಟ್ರೀಕರಣ, ಭೂ ಸುಧಾರಣೆ ಸೇರಿದಂತೆ ಅನೇಕ ಗರೀಬಿ ಹಟವೋ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ಅನೇಕ ಯೋಜನೆಗಳನ್ನು ಕೊಟ್ಟಿದ್ದಾರೆ. ಆದರೆ ಈಗಿನ ಬಿಜೆಪಿ ಸರ್ಕಾರ ಮಾತ್ರ ಸಂವಿಧಾನವನ್ನು ತಿರುಚಬೇಕು ಮತ್ತು ಪ್ರಜಾಪ್ರಭುತ್ವವನ್ನು ಅಲುಗಾಡಿಸಬೇಕು ಎಂಬ ಪ್ರಯತ್ನ ನಡೆಸುತ್ತಲೇ ಇದೆ. ಆದ್ದರಿಂದ ಕರ್ನಾಟಕದ ಚುನಾವಣೆ ಬಹಳ ಮಹತ್ವದ ಚುನಾವಣೆ. ಈ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಜಯಬೇರಿ ಗಳಿಸಿದರೆ ಇಡೀ ದೇಶದಲ್ಲಿ ಜಾಗೃತರಾಗುತ್ತಾರೆ.

ನೀವು ಸತ್ಯವಾಗಿ ಮಾತನಾಡಿದರೆ ಬಿಜೆಪಿ ಸರ್ಕಾರ ಜೈಲಿಗೆ ಕಳಿಸುತ್ತಾರೆ. ಅನೇಕ ಜನ ಪ್ರಗತಿಪರ ವಿಚಾರಧಾರೆಗೆ ಬೆಂಬಲಕೊಟ್ಟರೆ ಅವರಿಗೆ ಈಡೀ, ಐಟಿ ಅಂತ ಬೆದರಿಸುವ ಮುಖೇನ ಅವರನ್ನು ಹತ್ತಿಕುವ ಕೆಲಸ ಈ ಸರ್ಕಾರ ಮಾಡುತ್ತಲೇ ಇದೆ. ಸಂಸತ್ತಿನಲ್ಲಿ ರಾಹುಲ್ ಗಾಂಧಿ ಸತ್ಯ ಹೇಳಿದ್ರೆ ಅವರ ಭಾಷಣವನ್ನು ತೆಗೆದ್ರು ರಾಜ್ಯಸಭೆ ಮಾತನಾಡಿದ ನನ್ನ ಭಾಷಣವನ್ನು ತೆಗೆದ್ರು. ನಮ್ಮನ್ನು ಬಾಯಿ ಮುಚ್ಚಿಸಲು ರಾಹುಲ್ ಗಾಂಧೀ ಅವರ ಸದಸ್ಯತ್ವವನ್ನೇ ತೆಗೆದ್ರು. ಮೋದಿಯ ಗೆಳೆಯ, ಗುಜರಾತ್ತಿನ ಸಂಸದ ನಾರಯಣ ಭಾಯ್ ಕಚಾಡಿಯಾ ಅವರು ದಲಿತ ವೈದ್ಯನಿಗೆ ಕಪಾಳಮೋಕ್ಷ ಮಾಡಿದ ಪ್ರಕರಣದಲ್ಲಿ ಅವರಿಗೆ 3 ವರ್ಷ 10 ತಿಂಗಳು ಶಿಕ್ಷೆಯಾಯಿತು. ಅವರನ್ನು ಅನರ್ಹಗೊಳಿಸಲಿಲ್ಲ. ಮತ್ತೇ 2019 ರಲ್ಲಿ ಚುನಾವಣೆಗೆ ನಿಂತು ಗೆದ್ದಿದ್ದಾರೆ. ಆದರೆ, ರಾಹುಲ್ ಗಾಂಧಿ ಅವರಿಗೆ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಶಿಕ್ಷೆ ಆದಾಗ ಅವರನ್ನು ಒಂದೇ ದಿನದಲ್ಲಿ ಅನರ್ಹ ಮಾಡಿದರು. ಮನೆ ಖಾಲಿ ಮಾಡಿಸಿದರು.

ಕರ್ನಾಟಕ ಮತ್ತು ಆಂಧ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ದಲಿತರಿಗೆ ಜನಸಂಖ್ಯೆ ಆಧಾರದ ಮೇಲೆ ವಿಶೇಷ ಅನುದಾನವನ್ನು ಕೊಟ್ಟಿದ್ದೇವೆ. ಸಿದ್ದರಾಮಯ್ಯ ಸರ್ಕಾರವಿದ್ದಾಗ ಎಸ್ ಈಪಿ ಅನುದಾವನ್ನು ಕೊಟ್ಟರು, ಬೇರೆ ಯಾವ ರಾಜ್ಯದಲ್ಲಿ ಈ ರೀತಿಯ ಅನುದಾನವನ್ನು ಕೊಟ್ಟಿಲ್ಲ.

5 ಗ್ಯಾರಂಟಿ, ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ ಮತ್ತು ಯುವನಿಧಿ ಹಾಗೆಯೇ ಕಾಂಗ್ರೆಸ್ ಪಕ್ಷ ಇದೀಗ ಐದನೇ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದೆ ಅದರಲ್ಲಿ ಸಾರ್ವಜನಿಕ ಬಸ್ಗಳಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುತ್ತೇವೆ. ಸೋನಿಯಾ ಗಾಂಧಿಯ ನೇತೃತ್ವದಲ್ಲಿ ಯುಪಿಎ ಸರ್ಕಾರ ಮನರೇಗಾ ಕಾರ್ಯಕ್ರಮ ಮಾಡಿದ್ದೇವೆ. ನಾವು ಎನ್ನೆಲ್ಲಾ ವಾಗ್ದಾನ ಮಾಡಿದ್ದೇವೆ ಅದು ಅಧಿಕಾರದಲ್ಲಿರುವಾಗ ಕೇಂದ್ರ ಮತ್ತು ರಾಜ್ಯದಲ್ಲೂ ನಾವು ನುಡಿದಂತೆ ನಡೆದಿದ್ದೇವೆ. ನಾವು ಘೋಷಣೆ ಮಾಡಿರುವ 5 ಗ್ಯಾರಂಟಿ ಕಾರ್ಯಕ್ರಮಗಳು ಅದು ಗ್ಯಾರಂಟಿಯೇ ಎಂಬ ಭರವಸೆ ವ್ಯಕ್ತಪಡಿಸುತ್ತೇನೆ. ಅದು ಬೋಗಸ್ ಅಲ್ಲ, ಸುಳ್ಳು ಹೇಳೊದು ಬಿಜೆಪಿ ಅವರಿಗೆ ಅಭ್ಯಾಸವಾಗಿ ಬಿಟ್ಟಿದ್ದೇವೆ. ನಾವು ಯಾವತ್ತೂ ಬಡವರು ಮತ್ತು ಕಾರ್ಮಿಕರ ಪರ. ನಾವು ಬಡವರ ಕೃಷಿಕರ ಪರ ಪ್ರಗತಿಪರ ಕಾರ್ಯಕ್ರಮದ ಮೂಲಕ ಉತ್ತಮ ಕಾರ್ಯಕ್ರಮಗಳನ್ನು ನೀಡಿ ಅನುಷ್ಠಾನಕ್ಕೆ ತರುತ್ತೇವೆ.

ರಾಜ್ಯದಲ್ಲಿ ಮೇಕೇದಾಟು ಪಾದಯಾತ್ರೆ, ರಾಜ್ಯದ ರೈತರಿಗೆ ಮಾಡಿದ ಮೊದಲ ಚಳವಳಿ ಈ ರೀತಿಯ ಚಳವಳಿ ಯಾರು ಮಾಡಿಲ್ಲ. ಭಾರತ್ ಜೋಡೊ ಯಾತ್ರೆ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯುವುದರ ಮೂಲಕ 12 ರಾಜ್ಯಗಳಲ್ಲಿ ಸುಮಾರು 3,500 ಕಿ.ಮೀ ಪಾದಯಾತ್ರೆ ಕೈಗೊಂಡಿದ್ದರು. ಇದರಲ್ಲಿ ಜನಸಾಮಾನ್ಯರ ಕಷ್ಟ ಬವಣೆಗಳು ಅರಿಯಲು ಸಾಧ್ಯವಾಯಿತು. ರಾಹುಲ್ ಗಾಂಧಿ ಅವರು ಅವರೇನು ಪ್ರಧಾನಿ ಆಗಕ್ಕೆ ಈ ಯಾತ್ರೆಯನ್ನು ಮಾಡಿಲ್ಲ. ಜನಸಾಮಾನ್ಯರ ಕಲ್ಯಾಣಕ್ಕಾಗಿ ಮಾಡಿದ್ದರು. ರಾಹುಲ್ ಗಾಂಧಿ ಹೆದರುವವರು ಅಲ್ಲ.

ನಮಗೆ ಬಿಜೆಪಿ ಅವರು ಕೇಳ್ತಾರೆ ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದ್ದಾರೆ ಅಂತ ಕೇಳ್ತಾರೆ. 75% ರಷ್ಟು ಸಾಕ್ಷರತೆಯನ್ನು ಮತ್ತು ಶಿಕ್ಷಣದ ಮೂಲಕ ಜನರನ್ನು ವಿದ್ಯಾವಂತರನ್ನು ಮಾಡಿದ್ದೇ ಕಾಂಗೆಸ್ಸಿನ ದೊಡ್ಡ ಕೊಡುಗೆ. ಮೂಲಭೂತ ಸೌಕರ್ಯವನ್ನು ಕೊಟ್ಟಿದ್ದೇವೆ, ಆಸ್ಪತ್ರೆ ಮಾಡಿದ್ದೇವೆ.

ಬೇಲೆಯೇರಿಕೆ ಗಗನಕ್ಕೇರಿದೆ. ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದಾಗಿ ಜನ ಸಂಕಷ್ಟದಲ್ಲಿದ್ದಾರೆ.ಅದೇ ರೀತಿ ಮಿತಿಮೀರಿದ ಭ್ರಷ್ಟಾಚಾರ ಇವೆಲ್ಲಾ ನೋಡಿದಾಗ ಈ ಬಿಜೆಪಿ ಸರ್ಕಾರ ಯಾರಿಗೂ ಬೇಕಾಗಿಲ್ಲ. ಅದಕ್ಕೆ ತೆಗೆಯಬೇಕಂತ ರಾಜ್ಯದ ಜನ ಮನಸ್ಸು ಮಾಡಿದ್ದಾರೆ. ಹಾಗಾಗಿ ಮನುಷ್ಯನ ಅಂಗಾಗಗಳಲ್ಲಿ ಕೈ ಅವಿಭಾಜ್ಯ ಅಂಗ ಹಾಗಾಗಿ. ಈ ಬಾರಿ ಕೈ ಯನ್ನು ಬಲಪಡಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಹಾಗೂ ಈ ವಿಧಾನಸಭಾ ಚುನಾವಣೆಯಲ್ಲಿ ಮಳವಳ್ಳಿಯಲ್ಲಿ ಈ ಬಾರಿ ನರೇಂದ್ರ ಸ್ವಾಮಿಯನ್ನು ಅತ್ಯಧಿಕ ಬಹುಮತದಿಂದ ಗೆಲ್ಲಿಸುವಂತೆ ಕ್ಷೇತ್ರದ ಜನತೆಗೆ ಕರೆ ನೀಡಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ