LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

'ಭಾರತದಲ್ಲಿ 2ನೇ ಅತಿದೊಡ್ಡ ಹಾಲು ಉತ್ಪಾದಕ ರಾಜ್ಯ ಕರ್ನಾಟಕ'- ಸಿಎಂ

ಬೆಂಗಳೂರು : ಕರ್ನಾಟಕವು ಭಾರತದಲ್ಲಿ ಎರಡನೇ ಅತಿದೊಡ್ಡ ಹಾಲು ಉತ್ಪಾದಕ ರಾಜ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ನಂದಿನಿ ಬ್ರ‍್ಯಾಂಡ್ ಉತ್ಪನ್ನಗಳ ಬಿಡುಗಡೆ ಮಾಡಿ ಗುರುವಾರ ಮಾತನಾಡಿದ ಅವರು, ಅತಿ ಹೆಚ್ಚು ಹಾಲು ಉತ್ಪಾದಿಸುವ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿ ಗುಜರಾತ್ ಇದೆ. ರಾಜ್ಯದ 16 ಹಾಲು ಒಕ್ಕೂಟಗಳು ಪ್ರತಿದಿನ ಸುಮಾರು 1 ಕೋಟಿ ಲೀಟರ್ ಹಾಲನ್ನು ಉತ್ಪಾದಿಸುತ್ತವೆ. ಕರ್ನಾಟಕವು ನವದೆಹಲಿಗೆ ಪ್ರತಿದಿನ 2.5 ಲಕ್ಷ ಲೀಟರ್ ಹಾಲನ್ನು ಪೂರೈಸಲು ಪ್ರಾರಂಭಿಸಿದ್ದು, 6 ತಿಂಗಳಲ್ಲಿ ಇದನ್ನು 5 ಲಕ್ಷ ಲೀಟರ್‌ಗೆ ಹೆಚ್ಚಿಸುವ ಯೋಜನೆ ಹೊಂದಿದೆ ಎಂದಿದ್ದಾರೆ.

ಹಾಲಿನ ಉತ್ಪನ್ನಗಳಿಗೆ ಪ್ರಬಲ ಮಾರುಕಟ್ಟೆಯನ್ನು ಸೃಷ್ಟಿಸುವುದು ಡೇರಿ ಉದ್ಯಮದ ಬೆಳವಣಿಗೆ ಮತ್ತು ರೈತರ ಯೋಗಕ್ಷೇಮಕ್ಕೆ ನಿರ್ಣಾಯಕವಾಗಿದೆ. ಹೈನುಗಾರಿಕೆ ಕ್ಷೇತ್ರಕ್ಕೆ ನೀಡಿದ ಬಲವಾದ ಬೆಂಬಲವೇ ರಾಜ್ಯದ ಯಶಸ್ಸಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
'ಭಯೋತ್ಪಾದನೆ ವಿರುದ್ಧ ಹೋರಾಡಲು ಪಾಕ್‌ಗೆ ಆಗದಿದ್ರೆ, ಸಹಾಯ ಮಾಡಲು ನಾವು ಸಿದ್ಧ'- ರಾಜನಾಥ್ ಸಿಂಗ್ಜಿಲ್ಲೆಯಲ್ಲಿ 1485 ಮೆಟ್ರಿಕ್ ಟನ್ ಯೂರಿಯಾ ದಾಸ್ತಾನು ರೈತರಿಗೆ ಆತಂಕ ಬೇಡ: ಬಿ.ಮಂಜುನಾಥ.!ವಿದ್ಯಾರ್ಥಿ ವೇತನ: ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನರಮ್ಯಾ ಅವರ ವಿರುದ್ಧ ಬಳಸಿರುವ ಪದಗಳು ಖಂಡನೀಯ: ನಟ ಶಿವರಾಜ್ ಕುಮಾರ್ಮಳೆ ಹಾನಿ ಕುಟುಂಬಸ್ಥರ ನೆರವಿಗೆ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ವೈಯಕ್ತಿವಾಗಿ ಆರ್ಥಿಕ ನೆರವು.!ರೈತ ವಿರೋಧಿ ಕಾಂಗ್ರಸ್ ಸರ್ಕಾರ: ಡಾ.ವಿನಯ ಕುಮಾರ್ ಆರೋಪ.!ಜವಾಹರ್ ನವೋದಯ ವಿದ್ಯಾಲಯ: 9 ಮತ್ತು 11ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನಧರ್ಮಸ್ಪಳದಲ್ಲಿ ಉತ್ಪನನ ಕಾರ್ಯ: 1ನೇ ಪಾಯಿಂಟ್‌ ನಲ್ಲಿ ಸಿಗದ ತಲೆ ಬುರುಡೆಬೆಳ್ತಂಗಡಿ : ನೇತ್ರಾವತಿ ಬಳಿ ಅರಣ್ಯದಲ್ಲಿ ಎಸ್.ಐ.ಟಿ ತನಿಖೆ ಮುಂದುವರಿಕೆ: ಮುಂದೆ ಜೆಸಿಬಿಯಿಂದ ಕಾರ್ಯಾಚರಣೆಅಶ್ಲೀಲ ಸಂದೇಶ ಕಳುಹಿಸಿದ ದರ್ಶನ್ ಫ್ಯಾನ್ಸ್ ವಿರುದ್ಧ ದೂರು ನೀಡಿದ ರಮ್ಯಾ: ಎಫ್‌ಐಆರ್ ದಾಖಲು