Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕೆಂಪೇಗೌಡರ ಜಾತ್ಯತೀತ ಕಲ್ಪನೆ ಇಂದಿಗೂ ಆದರ್ಶ-ಡಾ.ಕೆ.ಸುಧಾಕರ್

 ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕುವೆಂಪು ಅವರು ವಿಶ್ವ ಮಾನವ ಸಂದೇಶ ಸಾರುವ ಮುನ್ನವೇ 
500 ವರ್ಷಗಳ ಹಿಂದೆಯೇ ನಾಡಪ್ರಭು ಕೆಂಪೇಗೌಡರು ಎಲ್ಲಾ ಜಾತಿ-ವರ್ಗಗಳನ್ನು ಒಗ್ಗೂಡಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದರು. ಜಾತಿ ಪದ್ಧತಿಯ ಕಟ್ಟುಪಾಡುಗಳನ್ನು ಮೀರಿ, ವೃತ್ತಿ ಆಧಾರಿತವಾಗಿ ಪೇಟೆಗಳನ್ನು ನಿರ್ಮಿಸಿ ಉತ್ತಮ ಆಡಳಿತ ನೀಡಿದರು . ಅವರ ಜಾತ್ಯತೀತ ಪರಿಕಲ್ಪನೆಯು ಇಂದಿಗೂ ಆದರ್ಶವಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು. 

ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ನಾಡಪ್ರಭು ಕೆಂಪೇಗೌಡರ 517 ನೇ ಜಯಂತೋತ್ಸವನ್ನ ಉಧ್ಘಾಟಿಸಿ ಮಾತನಾಡಿದ ಅವರು ಕೆಂಪೇಗೌಡ ಕಟ್ಪಿದ ಬೆಂಗಳೂರು ನಗರ ಜಾಗತಿಕ ನಗರವಾಗಿದೆ ಬೆಂಗಳೂರು ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರಲು ‌ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಯೋಜನೆಗಳ ಫಲ ಪ್ರಪಂಚವೇ ಬೆಂಗಳೂರಿನತ್ತ ತಿರುಗಿ ನೋಡುವಂತಾಗಿದೆ.  ಐಟಿ ಕ್ಷೇತ್ರದಲ್ಲಿ 30 ಲಕ್ಷಕ್ಕೂ  ಹೆಚ್ಚು ಯುವಕರಿಗೆ ಉದ್ಯೋಗ ಕೊಟ್ಟಿರುವ ನಗರ ಭಾರತದಿಂದ ರಫ್ತಾಗುವ ಐ ಟಿ  50 ರಿಂದ 60 ರಷ್ಠು  ಬೆಂಗಳೂರಿ ನಿಂದಲೆ ರಪ್ತುತಾಗುತ್ತದೆ. ಹಾಗು 60 ಲಕ್ಷ ಕೋಟಿ ವಹಿವಾಟಿನಲ್ಲಿ ಬೆಂಗಳೂರಿನಿಂದ ಅರ್ಧದಷ್ಟು ಅಂದರೆ 40 ಲಕ್ಷ ಕೋಟಿ ಯಷ್ಠು ಇದೆ .

ನಗರಗಳ ಉದಯಕ್ಕೆ ನದಿಗಳ ಆಶ್ರಯ ಅನಿವಾರ್ಯ. ನದಿಗಳು ಕುಡಿಯುವ ನೀರು, ಸಾರಿಗೆ, ಮತ್ತು ಕೃಷಿಗೆ ಆಧಾರವಾಗಿರುವುದರಿಂದ ಪ್ರಾಚೀನ ಕಾಲದಿಂದಲೂ ನಾಗರಿಕತೆಗಳು ನದಿಯ ದಂಡೆಯ ಮೇಲೆ ನೆಲೆಗೂಂಡಿವೆ. ಅದರೆ ಬೆಂಗಳೂರಿನಲ್ಲಿ ಯಾವ ನದಿಯು ಇಲ್ಲ.  ಬೆಂಗಳೂರು ಕಟ್ಬ  ಬೇಕಾದರೆ ಸಾವಿರಾರು ಕೆರೆ ಕುಂಟೆಗಳು ನಿರ್ಮಾಣ ಮಾಡುವ ಮೂಲಕ ಬೆಂಗಳೂರನ್ನು ಕಟ್ಟಿದ ಹೆಮ್ಮೆ ಕೆಂಪೇಗೌಡರದ್ದು.ಅಂತಹ ದೂರದೃಷ್ಟಿ ಆಡಳಿತಗಾರನ ಬದುಕು ನಮಗೆ ಪಾಠ ವಾಗಬೇಕು. ಸಮುದಾಯ ಸಂಘಟಿತವಾಗಬೇಕು.

ಪಕ್ಷ ಯಾವುದೇ ಇರಲಿ ಒಟ್ಟಿಗೆ ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿ ಗಳಾಗಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ ಅವರು, ಇನ್ನೆರಡು ವರ್ಷಗಳಲ್ಲಿ ಬಯಲು ಸೀಮೆಯ ಜಿಲ್ಲೆಗಳಿಗೆ ಕುಡಿಯುವ ಹಾಗೂ ಕೃಷಿಗೆ ನೀರುಣಿಸುವ ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದರು.

 ಶಾಸಕ ಧೀರಜ್ ಮುನಿರಾಜು ಮಾತನಾಡಿ, ಗ್ರಾಮಗಳಲ್ಲಿ ಎಲ್ಲಾ ಸಮುದಾಯಗಳು ಒಗ್ಗಟ್ಟಾಗಿದ್ದಾರೆ ಎಂದರೆ ಅದಕ್ಕೆ ಒಕ್ಕಲಿಗ ಸಮುದಾಯ ಮುಖ್ಯ ಕಾರಣವಾಗಿದೆ. ಒಕ್ಕಲುತನ ಮಾಡುವ ಒಕ್ಕಲಿಗ ಸಮುದಾಯ ಬದುಕು ರೂಪಿಸಿಕೊಳ್ಳಲು ಕೆಂಪೇಗೌಡರ  ಕೊಡುಗೆ ಅಪಾರವಾಗಿದೆ.

ಸರ್ವ ವರ್ಗದ ಜನರಿಗೆ ನೆಲೆ ಕಲ್ಲಿಸಿದ್ದ ಕೆಂಪೇಗೌಡರು ಕೆರೆ ಕುಂಟೆಗಳನ್ನು ಕಟ್ಟಿಸಿ ಹಾಗೂ ವಿವಿಧ ಸೌಲಭ್ಯಗಳನ್ನು ನೀಡುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಿದ್ದರು. ಇಂತಹ ಮಹಾಮಹಿಮರ ವಿಚಾರಗಳನ್ನು ಅರಿಯ ಬೇಕಿದೆ. ಇಂದು ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಸಮಾರಂಭದಲ್ಲಿ ಇತ್ತೀಚೆಗೆ ನಿಧನರಾದ ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ ಅವರಿಗೆ ಸಂತಾಪ ಸೂಚಿಸಲಾಯಿತು. ಎಸ್ಎಸ್ಎಲ್ ಸಿ ಹಾಗೂ ದ್ವೀತಿಯ ಪಿ ಯು ಸಿ  ಪರೀಕ್ಷೆಯಲ್ಲಿ ಶೇ.90 ಕ್ಕೂ ಹೆಚ್ಚು ಅಂಕ ಪಡೆದ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ವೇದಿಕೆ ಕಾರ್ಯ ಕ್ರಮಕ್ಕೂ ಮುನ್ನ ನಗರದ ನೆಲದಾಂಜನೇಯಸ್ವಾಮಿ ದೇವಾಲಯದ ನಗರದ ಬಳಿಯಿಂದ ಒಕ್ಕಲಿಗರ ಭವನದವರೆಗೆ ಬೆಳ್ಳಿ ರಥದಲ್ಲಿ ಕೆಂಪೇಗೌಡರ ಉತ್ಸವ ಮೂರ್ತಿಯನ್ನು ಕೂರಿಸಿ ನಗರದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾ ತಂಡಗಳೊಡನೆ ಮೆರವಣೆಗೆ ನಡೆಸಲಾಯಿತು.

 ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಗಂಟಿಗಾನಹಳ್ಳಿ ಕೃಷ್ಣಪ್ಪ,ಟಿ.ವೆಂಕಟರ ಮಣಯ್ಯ, ಖ್ಯಾತ ವೈದ್ಯ ಡಾ.ಟಿ.ಎಚ್.ಅಂಜಿನಪ್ಪ, ಕೇಂದ್ರ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತ ರಾಯಪ್ಪ, ತಹಸೀಲ್ದಾರ್ ಮಲ್ಲಪ್ಪಕೆ.ಯರಗೋಳ, ನಗರಸಭಾ ಉಪಾಧ್ಯಕ್ಷ ಬಂತಿ ವೆಂಕಟೇಶ್,  ಕೆಂಪೇಗೌಡ ಜಯಂತ್ಯುತ್ಸವ ಆಚರಣ ಸಮಿತಿ ಅಧ್ಯಕ್ಷ ಟಿ.ವಿ.ಲಕ್ಷ್ಮಿ ನಾರಾಯಣ, ಟಿಎಪಿಎಂಸಿಎಸ್ ಅಧ್ಯಕ್ಷ ಡಿ.ಸಿದ್ದರಾಮಯ್ಯ,

ನಿರ್ದೇಶಕ ವಿಶ್ವಾಸ್ ಗೌಡ, ಮುಖಂಡರಾದ ಎ. ನರಸಿಂಹಯ್ಯ, ಹರೀಶ್ ಗೌಡ, ವೆಂಕಟೇಶ್ ಬಾಬು, ಬಿ.ಸಿ.ವೆಂಕಟೇಶ್, ಬಿ.ಸಿ.ನಾರಾಯಣಸ್ವಾಮಿ, ತಿ.ರಂಗ ರಾಜು, ತಿಪೂರು ಭೈರೇಗೌಡ, ಶಿವಣ್ಣ, ಗೋವಿಂದರಾಜು. ಹಾಡೋನಹಳ್ಳಿ ಎ. ನಾಗರಾಜ್ ಹಾಗು ಒಕ್ಕಲಿಗ ಜನಾಂಗದ ಮುಖಂಡರು ಹಾಜರಿದ್ದರು.

ರಾಜಕೀಯವಾಗಿ, ಸಾಮಾಜಿಕವಾಗಿ, ಆಡಳಿತಾತ್ಮಕವಾಗಿ ಏನೆಲ್ಲಾ ಮಾಡಬಹುದು ಎನ್ನುವುದಕ್ಕೆ ಕೆಂಪೇಗೌಡರು ಮಾದರಿ ನಿರ್ದಿಷ್ಟ ಸಮುದಾಯಗಳ ವೃತ್ತಿ ಮತ್ತು ವ್ಯಾಪಾರದ ಬೆಳವಣಿಗೆಗೆ ಜಾಗತಿಕ ಮಟ್ಟದ ಮಾದರಿ ವ್ಯವಸ್ಥೆಯನ್ನು ರೂಪಿಸಿದರು. ಅವರು ವಿವಿಧ ಕರಕುಶಲ ಕರ್ಮಿಗಳು ಮತ್ತು ವ್ಯಾಪಾರಿಗಳನ್ನು ಆಹ್ವಾನಿಸಿ, ಅವರಿಗೆ ಪ್ರತ್ಯೇಕ ಮಾರುಕಟ್ಟೆ ಹಾಗೂ ವಸತಿ ಪ್ರದೇಶಗಳನ್ನು ಕಲ್ಪಿಸುವ ಮೂಲಕ ಸುಸ್ಥಿರ ಆರ್ಥಿಕತೆಗೆ ಅಡಿಪಾಯ ಹಾಕಿದರು.
ವಿ.ಕೃಷ್ಣಪ್ಪ, ಮಾಜಿ ಶಾಸಕರು ಹಾಗು ಅಧ್ಯಕ್ಷರು ತಾಲೂಕು ಒಕ್ಕಲಿಗರ ಸಂಘ.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು : ಜಿಲ್ಲಾ ಉಸ್ತುವಾರಿ ಸಚಿವರು ಟಿ ರಘುಮೂರ್ತಿಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಕಾಡುಗೊಲ್ಲರ ಬದುಕು - ಸಣ್ಣಚಿತ್ತಯ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಹಂದರಗಂಭ ಪೂಜೆನೂತನ ಬಸ್ ನಿಲ್ದಾಣ ಲೋಕಾರ್ಪಣೆ ನೆರವೇರಿಸಿದ ಸಚಿವ ಟಿ.ರಘುಮೂರ್ತಿ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳ ಉದ್ಘಾಟನೆಬೆಳೆ ಸಮೀಕ್ಷೆದಾರರ ಬೇಡಿಕೆ ಈಡೇರಿಕೆಗೆ ಕ್ರಮ: ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಚಿವ ರಘುಮೂರ್ತಿದೇವಾಲಯ ನಿರ್ಮಾಣ ಪವಿತ್ರ ಕಾರ್ಯ - ಟಿ. ರಘುಮೂರ್ತಿಡಾ.ಹೇಮಂತರಾಜು ರವರ ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನ ಲೋಕಾರ್ಪಣೆಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತದ ಶೂಟಿಂಗ್ ತಾರೆ ಮನು ಭಾಕರ್ಪ್ಯಾರಾ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಕೆ.ಎಸ್. ಶಿಲ್ಪಾ