Press ID & Credential Portal
Apply / Verify  ➔
LIVE TV LocalKarnatakaCrimeIndiaWorldFilmNationalLife StyleInternationalBusinessPoliticsSportsBusinessEducationTechnology
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Sports

ಮುಂಬೈ ಇಂಡಿಯನ್ಸ್ಗೆ ಕೀರನ್ ಪೊಲಾರ್ಡ್ ನೂತನ ಮುಖ್ಯ ಕೋಚ್

ಮುಂಬೈ,: ಕೀರನ್ ಪೊಲಾರ್ಡ್ ಅವರನ್ನು ಮುಂಬೈ ಇಂಡಿಯನ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ. ಈ ವಿಷಯವನ್ನು ಘೋಷಿಸಲು ಮುಂಬೈ ಇಂಡಿಯನ್ಸ್ ಅತ್ಯಂತ ಸಂತೋಷಪಡುತ್ತದೆ. ಕ್ರಿಕೆಟ್ ಜಗತ್ತಿನಲ್ಲಿ ತಂಡವೊಂದರ ಆಟಗಾರನೇ ಅದರ ತರಬೇತುದಾರನಾಗಿ ಪರಿವರ್ತನೆಗೊಂಡ ವಿಶೇಷ ಕ್ಷಣಗಳಲ್ಲಿ ಇದೂ ಒಂದಾಗಿದೆ. ಎಂಐ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಕೀರನ್ ಪೊಲಾರ್ಡ್, ತಂಡದ ಜತೆಗಿನ ತಮ್ಮ ಗಮನಾರ್ಹ 16 ವರ್ಷಗಳ ಒಡನಾಟದಲ್ಲಿ ಇದೀಗ ಹೊಸ ಅಧ್ಯಾಯವೊಂದನ್ನು ಆರಂಭಿಸುತ್ತಿದ್ದಾರೆ.

"ಪೊಲಾರ್ಡ್ ತಮ್ಮ 22ನೇ ವಯಸ್ಸಿನಲ್ಲಿ ಆಟಗಾರನಾಗಿ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡರು. ಕಳೆದ ಹದಿನಾರು ವರ್ಷಗಳಲ್ಲಿ ಅವರು ನಮ್ಮ ಎಂಐ ಕುಟುಂಬದ (#OneFamily)ಅವಿಭಾಜ್ಯ ಅಂಗವಾಗಿದ್ದಾರೆ. ಆಟಗಾರನಾಗಿ ಅವರು ನಮಗೆ ಅನೇಕ ಅವಿಸ್ಮರಣೀಯ ಕ್ಷಣಗಳನ್ನು ನೀಡಿದ್ದಾರೆ. ತರಬೇತುದಾರರಾಗಿ ತಮ್ಮ ಅನುಭವ, ಉತ್ಸಾಹ ಮತ್ತು ಆಟದ ಬಗೆಗಿನ ಆಳವಾದ ತಿಳುವಳಿಕೆಯನ್ನು ತಂಡದೊಂದಿಗೆ ಹಂಚಿಕೊಳ್ಳುತ್ತಾ ಬಂದಿದ್ದಾರೆ. ಅವರು ಈಗ ಮುಖ್ಯ ತರಬೇತುದಾರರಾಗಿ ಈ ಹೊಸ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿರುವುದು ನಮಗೆ ಅತ್ಯಂತ ಸಂತೋಷದ ವಿಷಯ. 'ಎಂಐ' ಜೆರ್ಸಿಯನ್ನು ಧರಿಸುವುದು ಮತ್ತು ತಂಡದ ಅಭಿಮಾನಿ ಬಳಗದ(ಪಲ್ಟಾನ್) ಪರವಾಗಿ ಆಡುವುದು ಎಂದರೆ ಏನು ಎಂಬುದು ಪೊಲಾರ್ಡ್‌ಗೆ ಚೆನ್ನಾಗಿ ತಿಳಿದಿದೆ. ಅವರು ಈ ಹೊಸ ಪಾತ್ರದಲ್ಲೂ ಅದೇ ಬದ್ಧತೆ, ನಂಬಿಕೆ ಮತ್ತು ದೃಢನಿಶ್ಚಯವನ್ನು ಪ್ರದರ್ಶಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ತಂಡವನ್ನು ಮುಂದಿನ ಅಧ್ಯಾಯದತ್ತ ಮುನ್ನಡೆಸಲಿರುವ ಅವರಿಗೆ ನಾನು ಶುಭ ಹಾರೈಸುತ್ತೇನೆ" ಎಂದು ಮುಂಬೈ ಇಂಡಿಯನ್ಸ್‌ನ ಸಹ-ಮಾಲೀಕರಾದ ನೀತಾ ಎಂ. ಅಂಬಾನಿ ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ಸಂಸ್ಕೃತಿ ಮತ್ತು ಅದು ಉನ್ನತ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಬೇಕಾದ ಅಗತ್ಯತೆಗಳ ಬಗ್ಗೆ ಪೊಲಾರ್ಡ್‌ಗೆ ಅಸಾಧಾರಣ ತಿಳುವಳಿಕೆಯಿದೆ. ಟಿ20 ಕ್ರಿಕೆಟ್‌ನ ವಿಕಾಸದ ಭಾಗವಾಗಿದ್ದ ಅವರು, ಈ ಆಟದಲ್ಲಿನ ಬದಲಾಗುತ್ತಿರುವ ಗತಿ, ತಂತ್ರಗಾರಿಕೆಯ ಬೇಡಿಕೆಗಳು ಮತ್ತು ಹೆಚ್ಚುತ್ತಿರುವ ಸ್ಪರ್ಧಾತ್ಮಕ ವಾತಾವರಣದ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಹೊಂದಿದ್ದಾರೆ. ಆಟಗಾರನಾಗಿ ಮತ್ತು ಇತ್ತೀಚೆಗೆ ಬ್ಯಾಟಿಂಗ್ ತರಬೇತುದಾರನಾಗಿ ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿಯೊಂದಿಗೆ ಅವರು ಸಾಗಿ ಬಂದಿರುವ ಪಯಣವು ತಂಡದ ಯಶಸ್ಸಿನ ಬಗ್ಗೆ ಅವರಿಗೆ ವಿಶಿಷ್ಟ ದೃಷ್ಟಿಕೋನವನ್ನು ನೀಡಿದೆ. ಇದು ತಂಡವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಅವರಿಗೆ ಭದ್ರ ಬುನಾದಿಯಾಗಿದೆ.

"ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿರುವುದು ನನಗೆ ಸಂದ ಗೌರವವಾಗಿದೆ. ಮುಂಬೈ ಇಂಡಿಯನ್ಸ್ ನನ್ನ ಜೀವನ ಮತ್ತು ವೃತ್ತಿಜೀವನದ ಅವಿಭಾಜ್ಯ ಅಂಗವಾಗಿದೆ. ಈ ತಂಡ, ಆಟಗಾರರು ಮತ್ತು 'ಪಲ್ಟಾನ್' (ಅಭಿಮಾನಿ ಬಳಗ) ಜೊತೆಗಿರುವ ನನ್ನ ಬಾಂಧವ್ಯ ನನಗೆ ಅತ್ಯಂತ ಮಹತ್ವದ್ದಾಗಿದೆ. ಒಬ್ಬ ಆಟಗಾರನಾಗಿ ಮತ್ತು ನಂತರ ಬ್ಯಾಟಿಂಗ್ ಕೋಚ್ ಆಗಿ ಈ ಪಯಣವನ್ನು ಅನುಭವಿಸಿರುವುದರಿಂದ, ಮುಂಬೈ ಇಂಡಿಯನ್ಸ್‌ನ ಮೌಲ್ಯಗಳೇನು ಮತ್ತು 'ನೀಲಿ ಮತ್ತು ಚಿನ್ನದ' (Blue and Gold) ಬಣ್ಣದ ಜೆರ್ಸಿಯನ್ನು ಧರಿಸಿ ತಂಡವನ್ನು ಪ್ರತಿನಿಧಿಸುವುದರಲ್ಲಿ ಇರುವ ಜವಾಬ್ದಾರಿ ಏನು ಎಂಬುದು ನನಗೆ ಚೆನ್ನಾಗಿ ತಿಳಿದಿದೆ. ನನ್ನ ಮೇಲೆ ನಂಬಿಕೆ ಇಟ್ಟಿರುವುದ್ದಕ್ಕಾಗಿ ನೀತಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಇಡೀ ಮುಂಬೈ ಇಂಡಿಯನ್ಸ್ ಕುಟುಂಬಕ್ಕೆ ನಾನು ಕೃತಜ್ಞನಾಗಿದ್ದೇನೆ. ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ನಿಕಟವಾಗಿ ಕೆಲಸ ಮಾಡಲು, ತಂಡದ ಪರಂಪರೆಯನ್ನು ಮತ್ತಷ್ಟು ಬೆಳೆಸಲು, ಪ್ರತಿಭಾವಂತ ಆಟಗಾರರ ಬೆಳವಣಿಗೆಗೆ ಸಹಾಯ ಮಾಡಲು ಹಾಗೂ ತಂಡದ ಅಭಿಮಾನಿ ಬಳಗವಾದ 'ಪಲ್ಟಾನ್'ಗೆ ಸಂಭ್ರಮಿಸಲು ಇನ್ನೂ ಅನೇಕ ಕಾರಣಗಳನ್ನು ಒದಗಿಸಲು ನಾನು ಉತ್ಸುಕನಾಗಿದ್ದೇನೆ" ಎಂದು  ಮುಂಬೈ ಇಂಡಿಯನ್ಸ್‌ನ ಹೊಸ ಮುಖ್ಯ ಕೋಚ್ ಕೀರನ್ ಪೊಲಾರ್ಡ್ ಹೇಳಿದ್ದಾರೆ.

ಪೊಲಾರ್ಡ್ ಅವರ ಈ ನೇಮಕಾತಿಯು, ತಂಡದ ಪರಂಪರೆಯನ್ನು ಮುಂದುವರಿಸುವ, ಪ್ರತಿಭೆಗಳನ್ನು ಪೋಷಿಸುವ, ತಂಡದ ಸಂಸ್ಕೃತಿಯನ್ನು ಬಲಪಡಿಸುವ ಹಾಗೂ ಮೈದಾನದ ಒಳಗೆ ಮತ್ತು ಹೊರಗೆ ಶ್ರೇಷ್ಠತೆಯನ್ನು ಸಾಧಿಸುವ ಮುಂಬೈ ಇಂಡಿಯನ್ಸ್‌ನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಮುಂಬೈ ಇಂಡಿಯನ್ಸ್‌ನ ಅತ್ಯಂತ ಯಶಸ್ವಿ ವರ್ಷಗಳಲ್ಲಿ ತಂಡದ ಪ್ರಮುಖ ಭಾಗವಾಗಿದ್ದ ಅನುಭವ ಮತ್ತು ತಂಡದ ಮುಂದಿನ ಅಧ್ಯಾಯವನ್ನು ರೂಪಿಸುವ ಮಹತ್ವಾಕಾಂಕ್ಷೆ - ಇವೆರಡರ ಆಧಾರದ ಮೇಲೆ ಅವರ ಮಾರ್ಗದರ್ಶನ ರೂಪುಗೊಳ್ಳಲಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಜಯೇಂದ್ರ ಸಾರಥ್ಯದಲ್ಲೇ ಮುಂದಿನ ವಿಧಾನಸಭಾ ಚುನಾವಣೆ: ಬಿಜೆಪಿ ಹೈಕಮಾಂಡ್ ಮೆಗಾ ಪ್ಲಾನ್ಮದ್ದೂರಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ; ಗ್ರಾಮಸ್ಥರು ನಿಟ್ಟುಸಿರುಸಾಗರ ತಾಲ್ಲೂಕು ಅಂತಿಮ ಮತದಾರರ ಪಟ್ಟಿ ಪ್ರಕಟ: 1.94 ಲಕ್ಷಕ್ಕೆ ಇಳಿದ ಮತದಾರರ ಸಂಖ್ಯೆಮಲ್ಲಿಕಾರ್ಜುನ ಖರ್ಗೆ ವಿರುದ್ಧದ ವೈಯಕ್ತಿಕ ದಾಳಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ: ಮಾಜಿ MLC ರಮೇಶ್ ಬಾಬು ಆಕ್ಷೇಪಮಹರ್ಷಿ ವಾಲ್ಮೀಕಿ ಆದರ್ಶಗಳು ಇಂದಿನ ಯಾಂತ್ರಿಕ ಜಗತ್ತಿಗೆ ಪ್ರಸ್ತುತ: ಮದ್ದೂರು ತಹಶೀಲ್ದಾರ್ ಶಿವಕುಮಾರ್ ಬಿರಾದಾರ್10 ಎಕರೆಯಲ್ಲಿ ಕೆಎಆರ್ ಫ್ಯೂಚರ್ ಅಕಾಡೆಮಿ ಕ್ಯಾಂಪಸ್: ನೇಗಿಲಯೋಗಿ ರೈತ ಮಾರಾಟ ಕೇಂದ್ರದ ಸ್ಥಾಪಕ ಯೋಗೇಶ್ ಅಪ್ಪಾಜಿಸ್ವ-ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ಉಚಿತ ಅಣಬೆ ಬೇಸಾಯ ತರಬೇತಿಗೆ ಅರ್ಜಿ ಆಹ್ವಾನBREAKING : ಕಲ್ಬುರ್ಗಿಯಲ್ಲಿ ತಡರಾತ್ರಿ ದರೋಡೆಗೆ ಬಂದಿದ್ದ ಗ್ಯಾಂಗ್ ನಿಂದ ಫೈರಿಂಗ್ : ಇಬ್ಬರು ಅರೆಸ್ಟ್!ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್ : ಗಣಿ ಗುತ್ತಿಗೆ ಪ್ರಕರಣದ PIL ವಜಾಗೊಳಿಸಿದ ಹೈಕೋರ್ಟ್SHOCKING : ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!