ಬೆಳಗಾವಿ : ಜೀವನದಲ್ಲಿ ಗುರುವಿಗೆ ವಿಶಿಷ್ಟವಾದ ಪ್ರಾಮುಖ್ಯತೆ ಇದೆ. ಆದ್ದರಿಂದಲೇ ಪ್ರತಿಯೊಬ್ಬರು ಗುರುವಿನ ಮಾರ್ಗದರ್ಶನ ಪಡೆದು ಯಶಸ್ಸಿನ ಶಿಖರವನ್ನೇರಬೇಕು ಎಂದು ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಕಿರಣ ಜಾಧವ ಹೇಳಿದರು.
ಗಣಾಚಾರಿ ಗಲ್ಲಿಯ ಶ್ರೀ ದತ್ತ ಮಂದಿರದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿ ಮಾತನಾಡಿದರು.
ಗುರು ಪೂರ್ಣಿಮೆ ನಿಮಿತ್ತ ಶ್ರೀ ದತ್ತ ದೇವಸ್ಥಾನದಲ್ಲಿ ಪೂಜೆ, ಮಹಾ ಆರತಿ ನೆರವೇರಿಸಲಾಯಿತು.
ಮಿತ್ರ ಮಂಡಲದ ಸಂಸ್ಥಾಪಕ ಅಧ್ಯಕ್ಷ ಬಬನ್ ಬೋಬೆ,ಸೌರಭ್ ಕುಲಕರ್ಣಿ, ಸಾಮಾಜಿಕ ಹೋರಾಟಗಾರರಾದ ಸಂಜಯ್ ಕಡೋಲ್ಕರ್, ಲಕ್ಷ್ಮಣ ಪವಾರ, ಮಿತ್ರ ಮಂಡಳಿಯ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.