Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಸರ್ಕಾರಿ ಶಾಲೆಗಳ ಉಳಿಸಲು ಪ್ರಯತ್ನಿಸಿ: ಕೆ.ಎನ್.ಆಂಜಿನಪ್ಪ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಗ್ರಾಮಾಂತರ ದೊಡ್ಡಬೆಳವಂಗಲ ಹೋಬಳಿ ಹುಲ್ಲಕುಂಟೆ
 ಸರ್ಕಾರಿ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ  ಹಾಗು ಹಳೆಯ ವಿದ್ಯಾರ್ಥಿಗಳು ಸ್ನೇಹ ಸಮ್ಮಿಲನ ಹಾಗು ರಕ್ತದಾನ  ಕಾರ್ಯಕ್ರಮ ಅಯೋಜನೆ ಮಾಡಲಾಯಿತು.

ಈ ಸಂದರ್ಭದಲ್ಲಿ  ಹುಲ್ಲುಕುಂಟೆ ಸರ್ಕಾರಿ ಶಾಲೆಯ ನಿವೃತ್ತ ಶಿಕ್ಷಕ ಕೆ.ಎನ್.ಆಂಜಿನಪ್ಪ ಮಾತನಾಡಿ ಸರ್ಕಾರಿ ಶಾಲೆ ಉಳಿಯಬೇಕಾದರೆ ದಾನಿಗಳು ಹಾಗು ಕನ್ನಡದ ಅಭಿಮಾನ ದಿಂದ ಸಾಧ್ಯ ಅನ್ಯ ಭಾಷೆಗಳಿಗೆ ಜೋತು ಬಿಳುವುದು ಬಿಟ್ಟು ಕನ್ನಡ ಭಾಷಾಭಿಮಾನವು ಕನ್ನಡ ಭಾಷೆಯನ್ನು ಪ್ರೀತಿಸುವ ಮತ್ತು ಗೌರವಿಸುವ ಮನೋಭಾವವಾಗಿದೆ.

ಇದು ಕನ್ನಡ ಭಾಷೆಯ ಬಗ್ಗೆ ಹೆಮ್ಮೆ ಪಡುವ, ಅದರ ಬಳಕೆಯನ್ನು ಉತ್ತೇಜಿಸುವ ಮತ್ತು ಉಳಿಸಿಕೊಳ್ಳುವ ಆಸಕ್ತಿಯನ್ನು ಒಳಗೊಂಡಿದೆ. ಉದಾಹರಣೆಗೆ, ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಪ್ರೋತ್ಸಾಹಿಸುವುದು, ಕನ್ನಡದಲ್ಲಿ ಆಡಳಿತವನ್ನು ಸುಧಾರಿಸುವುದು ಮತ್ತು ಕನ್ನಡವನ್ನು ದೈನಂದಿನ ಜೀವನದಲ್ಲಿ ಬಳಸುವುದನ್ನು ಬೆಂಬಲಿಸುವುದು ಭಾಷಾಭಿಮಾನವನ್ನು ಹೆಚ್ಚುಸುತ್ತೆ ಎಂದರು.

ನಂತರ   ನಿವೃತ್ತ ಶಿಕ್ಷಕ ಸರ್ದಾರ್ ಅಹಮದ್ ನಮ್ಮ ಶಾಲೆಯಲ್ಲಿ 1987ರಿಂದ ಇಲ್ಲಿಯವರೆಗೆ ಕರ್ತವ್ಯ ನಿರ್ವಹಿಸಿದ ಸುಮಾರು 50 ಕ್ಕೂ ಹೆಚ್ಚಿನ ಶಿಕ್ಷಕರನ್ನು ಗೌರವಿಸುವ ಕಾರ್ಯಕ್ರಮ ಶ್ಲಾಘನಾರ್ಹ ಎಂದು ತಿಳಿಸಿದರು.

ಈಗ ವಿದ್ಯಾಭ್ಯಾಸ ಮಾಡುತ್ತಿರುವ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ನಗರೂರು ಬಿ.ಜಿ.ಎಸ್ ಆಸ್ಪತ್ರೆಯ ವತಿಯಿಂದ  ಹಳೆಯ ವಿದ್ಯಾರ್ಥಿಗಳಿಂದ  ರಕ್ತದಾನ ಶಿಭಿರವನ್ನು ಆಯೋಜಿಸಿದ್ದು ಉತ್ತಮ ಬೆಳವಣೆಗೆ ಎಂದರು.

ಹಿರಿಯ ವಿದ್ಯಾರ್ಥಿ ಹಾಗೂ ಉದ್ಯಮಿ ಪ್ರಸನ್ನ ಕುಮಾರ್ ಮಾತನಾಡಿ, ನಗರೂರಿನ ಬಿ.ಜಿ.ಎಸ್ ಆಸ್ಪತ್ರೆಯ ವೈದ್ಯರು ಹುಲುಕುಂಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ 250 ಕ್ಕೂ ಹೆಚ್ಚಿನ ಜನರಿಗೆ ಆರೋಗ್ಯ ತಪಾಸಣೆ ಮಾಡಿ ಔಷದ ವಿತರಿಸಲಾಯಿತು.

ಹಳೆಯ ವಿದ್ಯಾರ್ಥಿಗಳಾದ ಅನುರಾಧ, ಗಂಗಮ್ಮ, ದಿನೇಶ, ಸುಧಾಮಣಿ, ಸುಜಾತ, ಚಿಕ್ಕಲಿಂಗಮ್ಮ, ಚಂದ್ರಾವತಿ, ಉಷಾದೇವಿ ರೇಣುಕಾ ಸೇರಿದಂತೆ 100 ಕ್ಕೂ ಹೆಚ್ಚು ಹೆಚ್ಚು ವಿದ್ಯರ್ಥಿಗಳು ಎಲ್ಲಾ ಶಿಕ್ಷಕರನ್ನೂ ಹುಲುಕುಕುಂಟೆ ಬಸ್ ನಿಲ್ದಾಣದಿಂದ ಬೇಟೆ ರಂಗನಾಥ ಸ್ವಾಮಿ ದೇವಸ್ಥಾನದವರೆಗೆ ಹಾಗೂ ಬೇಟೆ ರಂಗನಾಥ ಸ್ವಾಮಿ ದೇವಸ್ಥಾನದಿಂದ ಶಾಲಾ ಆವರಣದವರೆಗೆ ವೀರಗಾಸೆ ಮತ್ತು  ಕಲಾ ತಂಡದೊಂದಿಗೆ ಪೂರ್ಣ ಕುಂಭ ಸ್ವಾಗತ ಮಾಡಿ ಮೆರವಣಿಗೆ ಮೂಲಕ ಕರೆದೊಯ್ಯಲಾಯಿತು.

ಇದೇ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳು ತಾವು ಓದಿದ ಶಾಲೆಗೆ ಕೈಲಾದ ನೆರವನ್ನು ಪ್ರತಿವರ್ಷ ನೀಡಲು ನಿರ್ಣಯ ಮಾಡಿದ್ದೇವೆ ಎಂದರು. 

ಈ ಸಂದರ್ಭದಲ್ಲಿ ಬಿ.ಜಿ.ಎಸ್‌.ಆಸ್ಪತ್ರೆಯ ಸಾಮಾನ್ಯ ರೋಗ ತಜ್ಞರಾದ ಡಾ. ಕಾರ್ತಿಕ್, ಸ್ತ್ರೀರೋಗದ  ಡಾ. ಯೋಗಾಂಜನೇಯ, ಕೀಲು ಮೂಳೆ ತಜ್ಞ ಡಾ. ಕಲ್ಯಾಣ್, ನೇತ್ರ ಚಿಕಿತ್ಸಾ ತಜ್ಞ ಡಾ. ಸಂಜಯ್, ಸುನಿಲ್ , ಮಕ್ಕಳ ತಜ್ಞರು ಡಾ. ಪೂಜಾ, ಕಿವಿ ಮೂಗು ಗಂಟಲು ತಜ್ಞರು ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಹಾಸ್, ಸಂಜಯ್, ಗಂಗನರಸಯ್ಯ, ಮನು, ಶಿವರಾಜು ಮತ್ತು ಶುಶ್ರೂಷಕ ಸಂತೋಷ್ ಮತ್ತು ಮುಂತಾದವರು ಹಾಜರಿದ್ದರು.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು : ಜಿಲ್ಲಾ ಉಸ್ತುವಾರಿ ಸಚಿವರು ಟಿ ರಘುಮೂರ್ತಿಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಕಾಡುಗೊಲ್ಲರ ಬದುಕು - ಸಣ್ಣಚಿತ್ತಯ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಹಂದರಗಂಭ ಪೂಜೆನೂತನ ಬಸ್ ನಿಲ್ದಾಣ ಲೋಕಾರ್ಪಣೆ ನೆರವೇರಿಸಿದ ಸಚಿವ ಟಿ.ರಘುಮೂರ್ತಿ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳ ಉದ್ಘಾಟನೆಬೆಳೆ ಸಮೀಕ್ಷೆದಾರರ ಬೇಡಿಕೆ ಈಡೇರಿಕೆಗೆ ಕ್ರಮ: ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಚಿವ ರಘುಮೂರ್ತಿದೇವಾಲಯ ನಿರ್ಮಾಣ ಪವಿತ್ರ ಕಾರ್ಯ - ಟಿ. ರಘುಮೂರ್ತಿಡಾ.ಹೇಮಂತರಾಜು ರವರ ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನ ಲೋಕಾರ್ಪಣೆಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತದ ಶೂಟಿಂಗ್ ತಾರೆ ಮನು ಭಾಕರ್ಪ್ಯಾರಾ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಕೆ.ಎಸ್. ಶಿಲ್ಪಾ