LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮಂಗಳೂರು:  ಮೀನು ವ್ಯಾಪಾರಿಯ ಹತ್ಯೆ ಯತ್ನ ಪ್ರಕರಣದಲ್ಲಿ ಕೋಡಿಕೆರೆ ಲೋಕು ಅರೆಸ್ಟ್..!

ಮಂಗಳೂರು: ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಮೀನು ವ್ಯಾಪಾರಿ ಲುಕ್ಮಾನ್ ಎಂಬುವವರನ್ನು ಕೊಲ್ಲಲು ಯತ್ನಿಸಿದ ಪ್ರಕರಣದಲ್ಲಿ ಕುಖ್ಯಾತ ರೌಡಿಶೀಟರ್ ಕೋಡಿಕೆರೆ ಲೋಕೇಶ್ (ಲೋಕು) ನನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.

ಘಟನೆ ಕುವೆಂಪು ನಗರ ಠಾಣಾ ವ್ಯಾಪ್ತಿಯ ಕುಂಟಿಕಾನದ ಬಳಿ ನಡೆದಿದ್ದು, ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದ ಸಮಯದಲ್ಲಿ ಲುಕ್ಮಾನ್ ನನ್ನು ದುಷ್ಕರ್ಮಿಗಳು ಕಾರಿನಲ್ಲಿ ಅಟ್ಟಾಡಿಸಿಕೊಂಡು ಹೋಗಿ, ಕಲ್ಲಿನಿಂದ ಹೊಡೆದು ಕೊಲ್ಲಲು ಯತ್ನಿಸಿದ್ದರು. ಆದರೆ, ಸ್ಥಳದಲ್ಲಿದ್ದ ಮೀನು ಮಾರಾಟ ಮಾಡುವ ಮಹಿಳೆಯ ಸಮಯ ಪ್ರಜ್ಞೆ ಮತ್ತು ಚಾತುರ್ಯದಿಂದ ಲುಕ್ಮಾನ್ ಬಚವಾಗಿದ್ದಾನೆ.

ಈ ಬಗ್ಗೆ ತಕ್ಷಣವೇ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದ ಬಳಿಕ ಕೋಡಿಕೆರೆ ಲೋಕು ಎಂಬ ಭಯಾನಕ ರೌಡಿಶೀಟರ್‌ನ ಬಂಧನ ಸಾಧ್ಯವಾಯಿತು. ಲೋಕು ಹಾಗೂ ಇತರ ಆರೋಪಿಗಳು ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಈ ದಾಳಿ ನಡೆಸಿದ್ದರೇ ಎಂದು ಶಂಕಿಸಲಾಗುತ್ತಿದೆ.

ಗಮನಾರ್ಹ ಸಂಗತಿಯೆಂದರೆ, ಹತ್ಯೆಯಾದ ಸುಹಾಸ್ ಶೆಟ್ಟಿ ಕೂಡ ಕೋಡಿಕೆರೆ ಗ್ಯಾಂಗ್‌ನ ಸದಸ್ಯನಾಗಿದ್ದ. ಇದೀಗ ಜೈಲಿನಲ್ಲಿರುವ ಲೋಕು ಮೇಲೆ ಹಲವಾರು ಗಂಭೀರ ಪ್ರಕರಣಗಳು ದಾಖಲಾಗಿದ್ದು, ಪೊಲೀಸ್ ನಿಗಾವಳಿ ಹೆಚ್ಚಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 06-01-2026 .!ಇಂದಿನ ವಚನ - -ಗಾವುದಿ ಮಾಚಯ್ಯ  !ದಾವಣಗೆರೆ ; ನಾಳೆ  ಈ ಭಾಗಗಳಲ್ಲಿ ವಿದ್ಯುತ್ ಇರಲ್ಲ.!ಜಿಲ್ಲಾ ಉಸ್ತುವಾರಿ ಸಚಿವ, ಸಂಸದರ ಹೆಸರಿಲ್ಲ ಕಾಂಗ್ರೆಸ್​​ ಕಾರ್ಯಕರ್ತ ರೋಶಾ.!ಸಜ್ಜನಕೆರೆ : ಹೆಣ್ಣು ನಿಜವಾದ ಆರ್ಥಿಕ ತಜ್ಞೆ : ಈಶ್ವರಾನಂದಪುರಿ ಶ್ರೀ ಬಣ್ಣನೆಬಿ.ವಿಮಲಾಕ್ಷಿಗೆ “ದಕ್ಷಿಣ ಭಾರತದ ಸಾವಿತ್ರಿಬಾಯಿ ಫುಲೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ” ಪ್ರದಾನಸ್ವ ಉದ್ಯೋಗ ನೆರವಿಗೆ ಉಚಿತ ಹೊಲಿಗೆ ತರಬೇತಿಗೆ ಅರ್ಜಿ ಅಹ್ವಾನ..!ಈ ಶಕ್ತಿಶಾಲಿಯಾದ ಮಂತ್ರವನ್ನು 11 ಬಾರಿ ಪಟನೆ ಮಾಡುವುದರಿಂದ ನೀವು ಪ್ರೀತಿಸಿದವರು ಮೊದಲಿನಂತೆ ಸರಿಯಾಗುತ್ತಾರೆಕನ್ನಡದ ‘ ತಿಥಿ’ ಸಿನಿಮಾದಲ್ಲಿ ಅಭಿನಯಸಿದ್ದ  ‘ಸೆಂಚೂರಿ ಗೌಡ’ನಿಧನ.!ಓಂ ಶಕ್ತಿ ಮಾಲಾಧಾರಿಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ..! ಕೆಲ ಕಾಲ ಉದ್ವಿಗ್ನ.!