
ನಗರದ ಭನಶಂಕರಿ 2ನೇ ಹಂತದಲ್ಲಿನ ಶ್ರೀ ಗಂಗಾಪರಮೇಶ್ವರಿ ದೇವಾಲಯದ ಆವರಣದಲ್ಲಿ ಹಾಗೂ ಶ್ರೀ ಕೃಷ್ಣ ಸಮುದಾಯ ಭವನದಲ್ಲಿ ದಸರಾ ಮಹೋತ್ಸವದ ಶರನ್ನವರಾತ್ರಿ ಮಹೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ಸೇರಿದಂತೆ 9 ದಿನಗಳ ಕಾಲ ವಿಶೇಷವಾದಂತಹ ಕಾರ್ಯಕ್ರಮಗಳನ್ನು ಸಂಘದ ವತಿಯಿಂದ ಆಯೋಜನೆ ಮಾಡಿಕೊಂಡು ಬರಲಾಗಿತ್ತು.
ಚಾಮುಂಡೇಶ್ವರಿಗೆ ಒಂಬತ್ತು ದಿನಗಳ ಕಾಲವೂ ಸಹ ವಿಶೇಷವಾದಂತಹ ಅಲಂಕಾರವನ್ನು ಮಾಡುತ್ತ ಪೂಜಾ ಪೂಜೆಗಳನ್ನು ನಡೆಸಿಕೊಂಡು ವಿವಿಧ ಚಟುವಟಿಕೆಗಳನ್ನು ಸಹ ಮಾಡಿಕೊಂಡು ಬರಲಾಗಿತ್ತು. ಸೆಪ್ಟಂಬರ್ 22 ರಿಂದ ಇಂದಿನ ತನಕ ಸಹ ವಿವಿಧ ಕಾರ್ಯಕ್ರಮಗಳನ್ನು ದೇವಾಲಯದಲ್ಲಿ ಆಚರಣೆಗಳನ್ನು ಮಾಡಿಕೊಂಡು ನಿತ್ಯ ಹೋಮ ಹವನ ಪೂಜೆ ಕೈಕಾರಿಗಳು ಸಂಘವಾಗಿ ನಡೆದವು, ಅಲ್ಲದೆ ಗಂಗಾ ಪರಮೇಶ್ವರಿ ದೇವಾಲಯವನ್ನು ವಿಭಿನ್ನ ವಿಷಯವಾಗಿ ಅಲಂಕಾರ ಮಾಡಲಾಯಿತು.
ಕಾರ್ಯಕ್ರಮದ ವಿವರಗಳು
ಸೆಪ್ಟಂಬರ್ 28ರಂದು ಗಂಗಾ ಯಾದವ ಸಂಘ ಗಂಗಾ ಪರಮೇಶ್ವರಿ ದೇವಸ್ಥಾನ ಶ್ರೀ ಕೃಷ್ಣ ಪ್ರವಚನ ಮಂದಿರದಲ್ಲಿ ಕೃಷ್ಣ ಜಯಂತೋತ್ಸವ ಹಾಗೂ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ 85ಕ್ಕಿಂತ ಅಧಿಕ ಅಂಕಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಅಂದು ಬೆಳಿಗ್ಗೆ 7:00 ಯಿಂದ ಪ್ರಾರಂಭವಾದ ಕಾರ್ಯಕ್ರಮಗಳು ಸಂಜೆ 8:30ರ ತನಕ 10 ಹಲವು ಕಾರ್ಯಕ್ರಮಗಳನ್ನು ಮಾಡಿಕೊಂಡು ಇಡೀ ಸಮುದಾಯಕ್ಕೆ ಅಚ್ಚರಿ ಪಡುವಂತೆ ಮಾಡಲಾಯಿತು. ಅಂದು ಬೆಳಗ್ಗೆ 7:00ಗೆ ಶ್ರೀ ಕೃಷ್ಣ ಜಯಂತೋತ್ಸವ, ಗಂಗಾಪರಮೇಶ್ವರಿ ದೇವಾಲಯದಲ್ಲಿ ವಿಶೇಷವಾದಂತಹ ಅಲಂಕಾರ ಮಾಡಲಾಗಿತ್ತು ಪೂಜಾ ಕೈಂಕರ್ಯಗಳು ದೇವಾಲಯದಲ್ಲಿ ನಡೆಸಲಾಯಿತು. ಅದೇ ರೀತಿ 8:00ಗೆ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗವನ್ನು ಮಾಡಲಾಯಿತು. ಇನ್ನು ಎಂಟು ಮೂವತ್ತರ ವೇಳೆಗೆ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಸಮುದಾಯದ ಅನೇಕ ಜನರು ದೇವಸ್ಥಾನದ ಮುಂಭಾಗದಲ್ಲಿರುವ ರಸ್ತೆಯಲ್ಲಿ ತರಹಹೆವಾರಿ ರಂಗೋಲಿ ಬಿಡಿಸುವ ಮೂಲಕ ತಾವು ಕಲೆಯಲ್ಲಿ ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ತೋರಿಸಿಕೊಟ್ಟರು.
11:00ಕ್ಕೆ ಹುಟ್ಟು ಹೊಡೆಯುವ ಕಾರ್ಯಕ್ರಮವನ್ನು ಸಹ ಮಾಡಲಾಯಿತು. 2:00ಗೆ ರಾಧಾಕೃಷ್ಣ ವೇಷಭೂಷಣ ಸ್ಪರ್ಧೆ ಇನ್ನು ಏರ್ಪಡಿಸಲಾಯಿತು, ಸಮುದಾಯದ ಚಿಕ್ಕ ಚಿಕ್ಕ ಮಕ್ಕಳು ಪುಟಾಣಿಗಳು, ಮುದ್ದು ಮಕ್ಕಳು ಶ್ರೀಕೃಷ್ಣ ಹಾಗೂ ರಾಧೆಯ ವೇಷಗಳನ್ನು ಹಾಕಿಕೊಂಡು ವೇದಿಕೆ ಮೇಲೆ ತಮ್ಮದೇ ಆದಂತಹ ನೃತ್ಯಗಳನ್ನು ಮಾಡಿದರು, ಅಲ್ಲದೆ ಸಂಗೀತವನ್ನು ಸಹ ಬುಡಪಡಿಸಿದರು, ಅಲ್ಲದೆ ನೆರೆದಿದ್ದವರಿಗೆ ಸಾಕಷ್ಟು ಮನೋರಂಜನೆಯು ಸಹ ನೀಡಿದ್ದು ನೋಡಬಹುದಾಗಿದೆ.
ಇನ್ನು ಮಧ್ಯಾಹ್ನ 3 ಗಂಟೆಗೆ 2024 -25 ನೇ ಶೈಕ್ಷಣಿಕ ವರ್ಷದಲ್ಲಿ 85ಕ್ಕಿಂತ ಅಧಿಕ ಅಂಕಗಳಿಸಿದ ಯಾದವ ಜನಾಂಗಕ್ಕೆ ಸೇರಿದ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಸುಮಾರು 30 ಕ್ಕಿಂತ ಹೆಚ್ಚು ಜನರಿಗೆ ನೀಡಲಾಯಿತು. ಸಂಜೆ 4 ಗಂಟೆಗೆ ರಾಧಾಕೃಷ್ಣ ವೇಶಭೂಷಣ ಮತ್ತು ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹಾಗೂ ಭಾಗವಹಿಸಿದ ಅಭ್ಯರ್ಥಿಗಳಿಗೆ ಬಹುಮಾನ ವಿತರಣೆಯನ್ನು ಸಹ ಮಾಡಲಾಯಿತು. ಇದರ ಜೊತೆಗೆ ಕೊನೆಯಲ್ಲಿ ಸಮುದಾಯದ ಕ್ರಿಯಾಶೀಲ ಮಕ್ಕಳಿಂದ ಹಾಗೂ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾಂಗವಾಗಿ ನಡೆದವು. ತಮ್ಮ ಪ್ರತಿಭೆಗಳನ್ನು ಹಂಚಿಕೊಳ್ಳುವ ಒಂದು ವ್ಯವಸ್ಥೆಯನ್ನು ಸಹ ಈ ವೇದಿಕೆ ಮೇಲೆ ಮಾಡಲಾಯಿತು.

ಯಾದವ ಸಮುದಾಯಕ್ಕೆ ಸೇರಿದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರದ ಜೊತೆಗೆ ನಗದು ಬಹುಮಾನವನ್ನು ನೀಡಿ ಗೌರವಿಸಲಾಯಿತು.
ಇನ್ನು ಕಾರ್ಯಕ್ರಮದ ಕುರಿತು ಸಂಘದ ಅಧ್ಯಕ್ಷರಾದ ಲಕ್ಷ್ಮಿಪತಿ ಬಿಎಸ್ ಅವರು ಮಾತನಾಡಿ, ಸಂಘ ಬೆಳೆಯಬೇಕಾದರೆ ಸಮುದಾಯ ಬಹಳ ಮುಖ್ಯವಾಗಿ ಇರಬೇಕು, ಅದರ ಜೊತೆಗೆ ಸಂಘಕ್ಕೆ ಸಹಾಯ ಮಾಡುವರ ಆದ್ಯತೆಯೂ ಸಹ ಪ್ರಾಮುಖ್ಯವಾಗಿರುತ್ತದೆ, ಅದರಲ್ಲಿ ಪ್ರಮುಖರಾದ ಗೋಪಾಲಕೃಷ್ಣ ಅವರು ನಮ್ಮ ಸಮುದಾಯಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ, ಅವರು ಉದ್ಯಮಿಯಾಗಿದ್ದು ನಮ್ಮ ಸಂಘಕ್ಕೆ ತನು ಮನ ಧನ ಸಹಾಯವನ್ನು ಇಂದಿಗೂ ನಮ್ಮನ್ನು ಕಡೆಗಣಿಸದೆ ಯಾವಾಗಲೂ ಸಹಾಯವನ್ನು ಮಾಡಿಕೊಂಡು ಬರುತ್ತಿದ್ದಾರೆ ಎಂದರು.

ವರ್ಷದಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ದೊಡ್ಡ ಮಟ್ಟದಲ್ಲಿ ಮಾಡಿಕೊಂಡು ಬರುತ್ತಿದ್ದೇವೆ. ಅದಕ್ಕೆ ಲಕ್ಷಾಂತರ ರೂಪಾಯಿ ಹಣವು ಸಹ ಖರ್ಚಾಗುತ್ತದೆ, ಅದಕ್ಕೆ ಸಮುದಾಯದ ಉದ್ದಿಮೆ ದಂತಹ ಗೋಪಾಲಕೃಷ್ಣ ಅವರು ಮುಂದೆ ಬರುತ್ತಿರುವುದು ನಮಗೆ ಹೆಗ್ಗಳಿಕೆಯ ವಿಚಾರವಾಗಿದೆ. ಅದೇ ರೀತಿ ನಮ್ಮ ಸಮುದಾಯದ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಬೇಕು ಹೀಗಾಗಿ ಅವರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಪುರಸ್ಕರಿಸಲಾಗುತ್ತದೆ ಎಂದರು.
ಹೀಗೆ ಸಂಘವು ದೊಡ್ಡ ಮಟ್ಟದಲ್ಲಿ ಬೆಳೆಯಬೇಕು ಸಮಾಜಕ್ಕೆ ಉಪಯೋಗ ಆಗಬೇಕು ಅದರಿಂದ ಜನರಿಗೆ ಅನುಕೂಲವಾಗಬೇಕು, ಸಂಘ ಮಾಡಿದಕ್ಕೂ ಪ್ರಯೋಜನವಾಗುತ್ತದೆ ಎಂದರು. ಅದಕ್ಕೆ ಸಮುದಾಯದವರ ಸಹಕಾರ ಬಹಳ ಮುಖ್ಯವಾಗಿ ಬೇಕಾಗುತ್ತದೆ ಎಂದು ಮನವಿ ಮಾಡಿಕೊಂಡರು.
ಇನ್ನು ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿಯಾದ ಜಿ ಬಾಬು, ಖಜಾಂಚಿಯಾದ ನರಸಿಂಹಲು, ಸಹ ಕಾರ್ಯದರ್ಶಿ ಎಂ ಆರ್ ರಾಜೇಶ್, ಎನ್ ರುದ್ರರಾಜು, ಗಂಗಾಧರ್, ನಿರ್ದೇಶಕರಾದ ದಾಮೋದರ್, ಬಿಎಸ್ ನರಸಿಂಹ, ಕೆ ಭಾಸ್ಕರ್, ಬಿ ಅಶೋಕ್, ಕೆಸಿ ಸುಬ್ರಹ್ಮಣ್ಯ, ಸೇರಿದಂತೆ ಸಂಗತ ಕಾರ್ಯಕಾರಿ ಸಮಿತಿ ಸದಸ್ಯರು ಪದಾಧಿಕಾರಿಗಳು ಮಹಿಳಾ ಅಧ್ಯಕ್ಷರು ಸದಸ್ಯರು ಇದೇ ವೇಳೆ ಸಮುದಾಯದ ಸಕಲ ಜನಸ್ಥಾಮವು ಒಂದು ಕಾರ್ಯಕ್ರಮದಲ್ಲಿ ಸೇರಲಾಗಿತ್ತು.