LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಪುರುಷ ಪ್ರಯಾಣಿಕರಿಗೆ ಸೀಟು ಬಿಟ್ಟುಕೊಡಿ - ಕೆಎಸ್​ಆರ್​ಟಿಸಿ ಹೊಸ ಆದೇಶ!

ಮೈಸೂರು : ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಸಾರಿಗೆ ವ್ಯವಸ್ಥೆ ಆರಂಭವಾದ ನಂತರ, ಬಸ್ಸುಗಳಲ್ಲಿ ಪುರುಷ ಪ್ರಯಾಣಿಕರಿಗೆ ಸ್ಥಳ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸಂಬಂಧಿಸಿದಂತೆ, ಇತ್ತೀಚೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಮೈಸೂರಿನಲ್ಲಿ ಹೊಸ ಆದೇಶವನ್ನು ಹೊರಡಿಸಿದೆ.

ಈ ಆದೇಶದ ಪ್ರಕಾರ, ಈಗಿನಿಂದ ಪುರುಷರಿಗೆ ಮೀಸಲಾದ ಸೀಟುಗಳಲ್ಲಿ ಮಹಿಳಾ ಪ್ರಯಾಣಿಕರು ಕುಳಿತುಕೊಳ್ಳದಂತೆ ಗಮನ ಹರಿಸಲು ಮತ್ತು ಪುರುಷ ಪ್ರಯಾಣಿಕರಿಗೆ ಮೀಸಲಾದ ಸೀಟುಗಳನ್ನು ನೀಡಲು ಎಲ್ಲ ಚಾಲಕರಿಗೆ ಸೂಚನೆ ನೀಡಲಾಗಿದೆ. ಮೈಸೂರಿನ ಸ್ಥಳೀಯ ವಾಹನಗಳಲ್ಲಿ ಮಹಿಳಾ ಪ್ರಯಾಣಿಕರು ಪುರುಷರಿಗೆ ಮೀಸಲಾದ ಸೀಟುಗಳಲ್ಲಿ ಪ್ರಯಾಣಿಸುತ್ತಿರುವುದನ್ನು ಕಂಡು, ಇದರ ಬಗ್ಗೆ ಕೆಎಸ್‌ಆರ್‌ಟಿಸಿ ಮೈಸೂರಿನ ನಿಯಂತ್ರಣಾಧಿಕಾರಿಯಿಂದ ಅಧಿಕೃತವಾಗಿ ಆದೇಶ ಹೊರಡಿಸಲಾಗಿದೆ.

ಈ ಕುರಿತು ವಿಷ್ಣುವರ್ಧನ.ಎಸ್ ಅವರು ಕೇಂದ್ರ ಕಚೇರಿಗೆ ದೂರು ಸಲ್ಲಿಸಿದ್ದು, ಅದರ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ, ಇತ್ತೀಚೆಗೆ ಮಹಿಳಾ ಪ್ರಯಾಣಿಕರಿಗೆ ಹೆಚ್ಚಾದ ಸಂಖ್ಯೆಯಲ್ಲಿ ಉಚಿತ ಪ್ರಯಾಣ ಸೌಲಭ್ಯ ದೊರಕಿದ್ದರಿಂದ, ಪುರುಷ ಪ್ರಯಾಣಿಕರಿಗೆ ಸೀಟು ನೀಡುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
4ನೇ ಬಾರಿಗೆ ಯುಪಿಎಸ್‌ಸಿ ಬರೆದು ಉತ್ತೀರ್ಣರಾದ ಐಎಎಸ್ ಅಧಿಕಾರಿ ಸೌಮ್ಯಾ ಮಿಶ್ರಾಇಂದಿನಿಂದ ಕರ್ನಾಟಕ, ತಮಿಳುನಾಡಿಗೆ ಕೇರಳ ಟೂರಿಸ್ಟ್ ಬಸ್ ಸೇವೆ ಸ್ಥಗಿತಕಳೆದ ತಿಂಗಳು ಗುಜರಿ ಮಾರಿ 800 ಕೋಟಿ ರೂಪಾಯಿ ಗಳಿಸಿದ ಕೇಂದ್ರ!ರಾತ್ರಿ ಮಲಗುವ ಮುನ್ನ ಇದನ್ನ ಮುಖಕ್ಕೆ ಹಚ್ಚಿದರೆ 10 ವರ್ಷ ವಯಸ್ಸು ಕಡಿಮೆಯಾಗುತ್ತೆಆತ್ಮಗಳು ಎಲ್ಲಿ ವಾಸವಾಗಿರುತ್ತದೆ ಹಾಗೂ ಯಾರಿಗೆ ತೊಂದರೆ ಕೊಡುತ್ತದೆ ಎಂಬುದು ತಿಳಿದಿದೆಯೇ ನಿಮಗೆ ?ಹಿರೆಮದಕರಿನಾಯಕರ ಧರ್ಮಪತ್ನಿ ಗಂಡೋಬಳವ್ವ ನಾಗತಿ ಅವರ ಚಿತ್ರ ಅನಾವರಣ.!ವಚನ.: -ಕನ್ನಡಿಕಾಯಕದ ಅಮ್ಮಿದೇವಯ್ಯRSS ನೋಂದಣಿ ಯಾಕಾಗಿಲ್ಲ? ಖಡಕ್​ ಉತ್ತರ ಕೊಟ್ರು ಮೋಹನ್ ಭಾಗವತ್ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ – ಹುಬ್ಬಳ್ಳಿ ಜಂಕ್ಷನ್‌ಗೆ ಗಿನ್ನೆಸ್ ದಾಖಲೆ ಗೌರವ!ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನ; ಕೊಲೆ ಆರೋಪಿಯ ಕಾಲಿಗೆ ಗುಂಡೇಟು