ಬೆಳಗಾವಿ: ಬೆಳಗಾವಿಯ ಹನುಮಾನ ನಗರದಲ್ಲಿ ವಾಸವಾಗಿದ್ದ ಕುಮಾರಗೌಡ ವೀರಗೌಡ ಪಾಟೀಲ ಅವರು ಕಳೆದ 18 ರಂದು ನಿಧನರಾಗಿದ್ದಾರೆ.
ಕೆಲ ಕಾಲದಿಂದ ಅಸ್ವಸ್ಥರಾಗಿದ್ದ ಅವರಿಗೆ ನಿಧನ ಕಾಲಕ್ಕೆ 55 ವರ್ಷವಾಗಿತ್ತು.
ಅವರು ತಮ್ಮ ಹಿಂದೆ ಇಬ್ಬರೂ ಗಂಡು ಮಕ್ಕಳು, ಇಬ್ಬರು ಸಹೋದರಿಯರು ಮತ್ತು ಒಬ್ಬ ಸಹೋದರ ಹಾಗೂ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಅವರ ಪತ್ನಿ 8 ವರ್ಷಗಳ ಹಿಂದೆ ನಿಧನರಾಗಿದ್ದರು.