LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕುವೆಂಪು ವಿವಿ: ಜ್ಞಾನ ಸಂಪಾದಿಸಲು ಶ್ರಮವಹಿಸಿ: ಕುಲಸಚಿವ ರುದ್ರೇಶ್

 

ಶಂಕರಘಟ್ಟ:  ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹೆಚ್ಚಿನ ದಕ್ಷತೆಯಿಂದ ಕಲಿಕೆ, ಜ್ಞಾನ ಸಂಪಾದನೆಯಲ್ಲಿ ತೊಡಗಿ ಪೋಷಕರ ಶ್ರಮ, ನಿರೀಕ್ಷೆಗಳಿಗೆ ನ್ಯಾಯ ಒದಗಿಸಿಗಬೇಕು ಎಂದು ಕುವೆಂಪು ವಿವಿಯ ಹಳೆಯ ವಿದ್ಯಾರ್ಥಿ ಮತ್ತು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಕುಲಸಚಿವ ಎಸ್ ಎನ್ ರುದ್ರೇಶ್ ಅಭಿಪ್ರಾಯಪಟ್ಟರು.

ಕುವೆಂಪು ವಿವಿಯ ಪಠ್ಯೇತರ ಚಟುವಟಿಕೆ ವಿಭಾಗದ ವತಿಯಿಂದ ವಿವಿಯ ಬಸವ ಸಭಾಭವನದಲ್ಲಿ ಡಿ.02ರಂದು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ "ಪರಸ್ಪರ" ಹಾಗೂ ಅಂತರ್ ವಿಭಾಗಗಳ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ "ಸಹ್ಯಾದ್ರಿ ಸಿರಿಗಂಧ" ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಪರಸ್ಪರ ಕಾರ್ಯಕ್ರಮವನ್ನು ಉದ್ಘಾಟಿಸಿ ಎಸ್ ಎನ್ ರುದ್ರೇಶ್ ಮಾತನಾಡಿದರು. ಸೆಮಿಸ್ಟರ್ ಪದ್ಧತಿಯಿಂದಾಗಿ ತರಗತಿಗಳಲ್ಲಿ, ಕಲಿಕೆಯಲ್ಲಿ ಸಾಕಷ್ಟು ವ್ಯತ್ಯಯವಾಗುತ್ತಿದೆ. ಪಠ್ಯದ ಆಚೆಗೂ ಹೆಚ್ಚು ಓದಬೇಕು. ಜ್ಞಾನವನ್ನು ಕಾಯಕವಾಗಿಸಬೇಕು. ಇಲ್ಲವಾದರೆ ಜ್ಞಾನ ವ್ಯರ್ಥ್ಯವಾಗುತ್ತದೆ, ಇದಕ್ಕಾಗಿ ಮೊದಲು ಸ್ವಾಭಿಮಾನಿಗಳಾಗಿ ಎಂದರು.

ವಿದ್ಯಾರ್ಥಿಗಳಿಗೆ ಕುವೆಂಪು ಅವರ ಬರಹಗಳಿಂದ ಆರಂಭಿಸಿ ಇಂದಿನ ಹಲವು ಸಂಪನ್ಮೂಲ ವ್ಯಕ್ತಿಗಳ ಮೂಲಕ ಶಿಕ್ಷಣದ ಮೌಲ್ಯಗಳು ದೊರೆಯುತ್ತಿವೆ. ಇವುಗಳನ್ನು ಪಾಲಿಸುತ್ತಲೇ ದಾಟಿಸುವ ಬದ್ಧತೆಯನ್ನು ನಾವು ತೋರಬೇಕು. ಹೊಸ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಕೇವಲ ಬೋಧನೆ ಕೇಳುವವರಾಗಿ ಉಳಿದಿಲ್ಲ. ಗ್ರಂಥಾಲಯ, ಆನ್ಲೈನ್ ಪುಸ್ತಕಗಳ ಮೂಲಕ ಪಟ್ಯಗಳನ್ನು ಓದಿಕೊಂಡು ತರಗತಿಗೆ ಬರಬೇಕು, ಪ್ರಶ್ನಾ ಮನೋಭಾವ ಹೆಚ್ಚಿಸಿಕೊಳ್ಳಬೇಕು. ಶಿಕ್ಷಕರು ಕಲಿಸುತ್ತಾ, ಕಲಿಯುತ್ತಾ ಬೆಳೆಯಬೇಕು, ಬೆಳಸಬೇಕು ಎಂದು ಕುವೆಂಪು ವಿವಿಯ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಸಲಹೆಯಿತ್ತರು.

ವಿಶ್ವದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ವಿವಿಯ ಗಣಿತಶಾಸ್ತ್ರ ಪ್ರಾಧ್ಯಾಪಕ ಪ್ರೊ. ಬಿ ಜೆ ಗಿರೀಶ್ ಮತ್ತು ಔದ್ಯೋಗಿಕ ರಸಾಯನಶಾಸ್ತ್ರದ ಪ್ರೊ. ಬಿ ಈ ಕುಮಾರಸ್ವಾಮಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕುವೆಂಪು ವಿವಿಯ ಕುಲಸಚಿವ ಏ ಎಲ್ ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್ ಎಂ ಗೋಪಿನಾಥ್, ಹಣಕಾಸು ಅಧಿಕಾರಿ ಹೆಚ್ ಎನ್ ರಮೇಶ್, ವಿದ್ಯಾರ್ಥಿ ಕ್ಷೇಮಾಪಲನ ಅಧಿಕಾರಿ ಪ್ರೊ. ಪ್ರಶಾಂತ್ ನಾಯ್ಕ, ಪಠ್ಯೇತರ ಚಟುವಟಿಕೆ ವಿಭಾಗದ ಸಂಚಾಲಕ ಡಾಕ್ಟರ್ ನೆಲ್ಲಿಕಟ್ಟೆ ಸಿದ್ದೇಶ್ ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಯ ವಿವಿಧ ವಿಭಾಗಗಳ ಅಧ್ಯಾಪಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.

 

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST