ಅಮೀನಗಡ ; ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಪತ್ರಕರ್ತರ ಸಂಘ ಜಿಲ್ಲಾ ಘಟಕ ಹಾಗೂ ಬಿಬಿ ನ್ಯೂಸ್ ಡಿಜಿಟಲ್ ಚಾನಲ್ ಸಹಯೋಗದೊಂದಿಗೆ ವಕೀಲರ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಾಸ್ತಾವಿಕ ನುಡಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ಡಿ ಬಿ ವಿಜಯಶಂಕರ್ ಡಾ: ರಾಜೇಂದ್ರ ಪ್ರಸಾದ್ ಅವರು ಈ ದೇಶದ ಪ್ರಥಮ ರಾಷ್ಟ್ರಪತಿಗಳಾಗಿದ್ದರು, ಅವರು ಬಿಹಾರ ಮತ್ತು ಓಡಿಸಾ ರಾಜ್ಯದಲ್ಲಿ ಪ್ರಸಿದ್ದ ವಕೀಲರಾಗಿ ಕಾನೂನು ಸೇವೆ ಮಾಡುತ್ತಿದ್ದರು. ಹಾಗೂ ಅವರು ಖ್ಯಾತ ಪತ್ರಕರ್ತರು, ಸ್ವತಂತ್ರ ಹೋರಾಟಗಾರು ಆಗಿದ್ದರು ಅವರ 1884 ಡಿಸೆಂಬರ್ 3 ರಂದು ಅವರ ಜನ್ಮ ದಿನವನ್ನು ವಕೀಲರ ದಿನಾಚರಣೆ ಎಂದು ಆಚರಿಸಲಾಗುತ್ತದೆ. ನಾವು ಈ ಸಮಾಜದಲ್ಲಿ ಎಲ್ಲಾ ಸೇವಾ ಕರ್ತರ ಅನೇಕ ದಿನಾಚರಣೆಗಳು ಇವೆ, ನಾವು ಒಬ್ಬರನ್ನೊಬ್ಬರು ಗೌರವಯುತವಾಗಿ ಆಚರಿಸಿ ಅವರನ್ನು ಗೌರವಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ ಹೀಗಾಗಿ ನಾವು ಅವರನ್ನು ಗೌರವಿಸಿ ಶುಭ ಕೋರುತಗತಿದ್ದೇವೆ, ಎಂದರು.
ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಮಾಧವ ದೇಶಪಾಂಡಿ ಮಾತನಾಡಿ ಈ ಸಮಾಜದಲ್ಲಿ ನನ್ನ ವಕೀಲ ವೃತ್ತಿಯಲ್ಲಿ ಬೇರೆ ಅವರು ಈ ತರ ನಮ್ಮ ದಿನಾಚರಣೆಯನ್ನು ಗೌರವಯುತವಾಗಿ ಆಚರಿಸಿ ನಮ್ಮನು ಕರೆದು ಸನ್ಮಾಸಿದ್ದು ಬಹಳ ಖುಷಿಯಾಗಿದೆ. ಸಮಾಜದಲ್ಲಿ ನಮ್ಮ ನಮ್ಮ ದಿನಾಚರಣೆ ನಾವೇ ಆಚರಿಸಿಕೊಂಡು ಸಂಭ್ರಮಿಸಿದರೆ ಅದಕ್ಕೆ ಆಗುವ ಖುಷಿಗಿಂತ ಬೇರೆಯವರು ಈ ತರ ಗೌರವಿಸಿ ಆ ದಿನಾಚರಣೆ ಆಚರಿಸಿದರೆ ,ಇದಕ್ಕೆ ಪೂರ್ಣ ಅರ್ಥವಿರುತ್ತದೆ. ಡಾ, ರಾಜೇಂದ್ರ ಪ್ರಸಾದ ಅವರ ಜನ್ಮ ದಿನವನ್ನು ಈ ವಕೀಲರ ದಿನಾಚಣೆ ಎಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ನಮ್ಮನ್ನು ಕರೆದು ಗೌರವಿಸಿ ಶುಭ ಕೋರಿದಕ್ಕೆ ನಮ್ಮ ವಕೀಲರ ಸಂಃದಿಂದ ಧನ್ಯವಾದ ಎಂದರು. ಮುಖ್ಯ ಅಥಿತಿಗಳಾಗಿ ಮಾತನಾಡಿದ ನ್ಯಾಯವಾದಿ ರವಿಕುಮಾರ್ ಪಟ್ಟದಕಲ್ಲು ಮಾತನಾಡಿ ವಿಜಯಶಂಕರ್ ಅವರು ಈ ದಿನ ನಮ್ಮ ನ್ನು ಕರೆದು ಗೌರವಿಸಿ ಸನ್ಮಾಸಿ ಅರ್ಥ ಪೂರ್ಣವಾಗಿ ಈ ದಿನ ವಕೀಲರ ದಿನಾಚಣೆ ಮೂಲಕ ಈ ಸಮಾಜದಲ್ಲಿ ನಾವೆಲ್ಲರು ಒಬ್ಬರನ್ನೊಬ್ಬರು ಗೌರವಯುತವಾಗಿ ಕಾಣಬೇಕು ಎಂಬ ಸಂದೇಶವನ್ನು ಈ ಕರ್ನಾಟಕ ಪತ್ರಕರ್ತರ ಸಂಘ ಮಾಡಿ ತೋರಿಸಿದೆ, ಜಿಲ್ಲಾ ಹಾಗೂ ತಾಲೂಕು ಘಟಕದ ಎಲ್ಲಾ ಸಂಘದ ಮಾಧ್ಯಮ ಸ್ನೇಹಿತರಿಗೆ ಅಭಿನಂದಿಸುತ್ತೇನೆ. ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನ್ಯಾಯವಾದಿ ಜಗದೇಶ ಬಿಸಲದಿನ್ನಿ ಅಮೀನಗಡ ನಗರದಲ್ಲಿ ವರ್ಷದಲ್ಲಿ ಅತೀ ಹೆಚ್ಚು ಇಂತಹ ಸಾಮಾಜಿಕ ಕಳಕಳಿ ಕಾರ್ಯಕ್ರಮಗಳನ್ನು ಮಾಡುತ್ತಾ ಒನ್ ಮ್ಯಾನ್ ಶೋ ಆಗಿ ಯಾರ ಪ್ರೋತ್ಸಾಹ ಇಲ್ಲದೆ. ಮಾಧ್ಯಮ ರಂಗದಲ್ಲಿ ಹೋರಾಟ ಮಾಡುವ ವಿಜಯಶಂಕರ್ ಅವರ ಸಾನಾಜಿಕ ಕಳಕಳಿ ಮೆಚ್ಚುತ್ತೇನೆ. ಈ ದಿನ ತಮ್ಮ ಕರ್ನಾಟಕ ಪತ್ರಕರ್ತರ ಸಂಘದಿಂದ ನಮ್ಮನ್ನು ಕರೆದು ಗೌರವಿಸಿ ,ಅಭಿನಂದಿಸಿಸ್ದಕ್ಕೆ ಧನ್ಯವಾದಗಳು ನಾವು ನೀವು ಒಂದೆ ಮಹಖದ ನಾಣ್ಯದ ಹಾಗೆ ಈ ಸಮಾಜದಲ್ಲಿ ಒಬ್ಬರನ್ನೊಬ್ಬರು ಗೌರವಯುತವಾಗಿ ಬಾಳಿ,ಬೆಳೆಸಲು ಕೈ ಜೊಡಿಸೋಣ ಎಂದರು. ಈ ಸಂದರ್ಭದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಡಿ ಬಿ ವಿಜಯಶಂಕರ್ , ವಕೀಲರ ಸಂಘದ ತಾಲೂಕು ಅಧ್ಯಕ್ಷ ಮಾಧವ ದೇಶೊಅಂಡೆ, ಅಮೀನಗಡ ಕ್ರೈಂ ಪಿ,ಎಸ್,ಐ ಶ್ರೀ ವಾಯ್ ,ಎಚ್, ಪಠಾನ್ , ಹಿರಿಯ ನ್ಯಾಯವಾದಿ ರವಿಕುಮಾರ್ ಪಟ್ಟದಕಲ್ಲು, ಎ,ಎಸ್,ಐ ಶ್ರೀ ವಾಯ್,ವಾಯ್ ಪಾಟೀಲ್ ನ್ಯಾಯವಾದಿ ಈಶ್ವರ ಕಮ್ಮಾರ, ಸಮಾಜದ ಮುಖಂಡ ಅಶೋಕ ಚಿಕ್ಕಗಳೆ ,ಜಿಲ್ಲಾ ಕೆ,ಪಿ,ಎಸ್, ಕಾರ್ಯದರ್ಶಿ ಶ್ರೀ ಕಿರಣರಾಜ್ ಕಾಳಗಿ ಉಪಸ್ಥಿತಿ ಇದ್ದರು