E-PAPER
17 Nov 2026, 12:18:09 AM|
Gold₹13462/gGold24K ₹13,462/g - 22K ₹12,329/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಲಿಂಗಾಯತವು ಸ್ವತಂತ್ರ ಧರ್ಮದ ಮಾನ್ಯತೆ ಹೊಂದುವ ಅರ್ಹತೆ ಹೊಂದಿದೆ; ಡಾ.ಗುರುಪಾದ ಮರಿಗುದ್ದಿ

ಬೆಳಗಾವಿ-೦೯: ಭಾರತದಲ್ಲಿ ಜೈನ ಮತ್ತು ಬೌದ್ಧ ಧರ್ಮ ಸ್ವತಂತ್ರ ಧರ್ಮ ಎಂದು ಘೋಷಣೆ ಮಾಡಲಾಗಿದೆ. ಅದರಂತೆ ಲಿಂಗಾಯತ ಧರ್ಮ ಕೂಡಾ ಸ್ವತಂತ್ರ ಧರ್ಮದ ಮಾನ್ಯತೆಯನ್ನು ಪಡೆಯುವ ಎಲ್ಲಾ ಆಧಾರ ಸಹಿತವಾದ ಅರ್ಹತೆಗಳನ್ನು ಹೊಂದಿದೆ ಎಂದು ನಿವೃತ್ತ ಕನ್ನಡ  ಉಪನ್ಯಾಸಕ  ಡಾ. ಗುರುಪಾದ ಮರಿಗುದ್ದಿ ಹೇಳಿದರು.

ಅವರು  ಜಾಗತಿಕ ಲಿಂಗಾಯತ ಮಹಾಸಭಾ ಬೆಳಗಾವಿ ಜಿಲ್ಲಾ ಘಟಕ  ಆಯೋಜಿಸಿದ್ದ ಮಾಸಿಕ ಅನುಭಾವ ಗೋಷ್ಠಿ ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ "ಬಸವಣ್ಣ ಸಾಂಸ್ಕೃತಿಕ ನಾಯಕ- ವಿವೇಚನೆ ಎಂಬ ವಿಷಯ ಕುರಿತು ಮಾತನಾಡಿದರು.

ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಸಿಗುವದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ  ಕೆಲವು ಭಿನ್ನಾಭಿಪ್ರಾಯಗಳಿವೆ ಅವನ್ನು ಪರಿಹರಿಸಿಕೊಳ್ಳಬೇಕಾಗಿದೆ. ಕರ್ನಾಟಕ ಸರಕಾರ ಬಸವಣ್ಣನವರನ್ನು " ಸಾಂಸ್ಕೃತಿಕ ನಾಯಕ " ಎಂದು ಘೋಷಣೆ ಮಾಡಿದ್ದು ಸ್ತುತ್ಯಾರ್ಹ. ಜಗತ್ತಿನಲ್ಲಿ ಯಾರಾದರೂ ಸಾಂಸ್ಕೃತಿಕ ನಾಯಕ ಅಂತಾ ಇದ್ದಾರೋ ಇಲ್ಲವೋ ಎಂಬುದನ್ನು ತಿಳಿದುಕೊಂಡಾಗ ಸಿಮಿತ ವಿಷಯಾಧಾರಿತ ಸಂಪಾದನೋತ್ಸವಗಳನ್ನು ಪರಿಗಣಿಸಿ ಸಾಂಸ್ಕೃತಿಕ ನಾಯಕ ಅಂತಾ ಕೆಲವರನ್ನು ಘೋಷಣೆ ಮಾಡಿದ್ದು ತಿಳಿದು ಬರುತ್ತದೆ.ಆದರೆ ಬಸವಣ್ಣನವರು ಮೇಲ್ವರ್ಗದ ಜನರಿಂದ ಕೆಳಸ್ಥರದ ಜನರ ಆತ್ಮೋದ್ಧಾರಕ್ಕೆ ಶ್ರಮಿಸಿ, ವರ್ಗರಹಿತ ವರ್ಣರಹಿತ ಸಮಾಜದ ನಿರ್ಮಾಣದ ರೂವಾರಗಳಾಗಿದ್ದರು.ಅವರು ಸಾಮಾನ್ಯ ಜನರನ್ನು ಕೇಂದ್ರವಾಗಿ ಇಟ್ಟುಕೊಂಡು ತಮ್ಮ ಎಲ್ಲಾ ಚಿಂತನೆಗಳನ್ನು ನಡೆಸಿದರು. ಹಾಗಾಗಿ ಅದು ಜನಪರವಾದ ಕ್ರಾಂತಿಯಾಗಿತ್ತು.ಇತಿಹಾಸದಲ್ಲಿ ರಾಜ್ಯ ವಿಸ್ತಾರಕ್ಕೆ ಅಧಿಕಾರಕ್ಕಾಗಿ ಕೆಲವು ಹೋರಾಟಗಳು ನಡೆದಿವೆ.ಆದರೆ ಬಸವಣ್ಣನವರು ಹಾಗೆ ಮಾಡಲಿಲ್ಲ ಎಂದರು.

ಅದ್ಯಕ್ಷತೆ ವಹಿಸಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅದ್ಯಕ್ಷರಾದ ಬಸವರಾಜ ರೊಟ್ಟಿ ನ್ಯಾಯವಾದಿಗಳು ಇದೇ ತಿಂಗಳ  ೧೭,೧೮,ಹಾಗೂ ೧೯ರಂದು ಜರುಗಲಿರುವ ಬಸವ ಜಯಂತಿಯ ಕಾರ್ಯಕ್ರಮದ ವಿವರ ಗಳನ್ನು ವಿವರಿಸಿದರು ಅಲ್ಲದೆ ಸರ್ವರೂ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು. ಲಿಂಗಾಯತ ಸ್ವತಂತ್ರ ಧರ್ಮದ ಸಾಂವಿಧಾನಿಕ ಮಾನ್ಯತೆಯ ಹೋರಾಟ ನಿರಂತರವಾಗಿರುತ್ತದೆ ಅಂತಾ ಹೇಳಿದರು.

ಇಂದಿನ ಪ್ರಸಾದ ದಾಸೋಹಿಗಳಾದ ಶರಣೆ ಅನಸೂಯ ಮತ್ತು ಫಕೀರಗೌಡಾ ಪಾಟೀಲ ದಂಪತಿ ಷಟ್ ಸ್ಥಲ್ ಧ್ವಜಾರೋಹನ ನೆರವೇರಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ  ಕಾರ್ಯದರ್ಶಿ  ಅಶೋಕ ಮಳಗಲಿ ಅವರು ಸರ್ವರನ್ನು ಸ್ವಾಗತಿಸಿ ಅತಿಥಿಗಳ ಪರಿಚಯ ಮಾಡಿದರು.

ನಗರ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಬೂದಿಹಾಳ ಅವರು ಕಾರ್ಯಕ್ರಮ ನಿರೂಪಿಸಿದರು.ಶರಣ ಈರಣ್ಣ ಚಿನಗುಡಿ ಶರಣು ಸಮರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಸುಜಾತಾ ಮತ್ತಿಕಟ್ಟಿ,ರತ್ನಕ್ಕಾ ಬೆಣಚಮರ್ಡಿ,ಅನ್ನಪೂರ್ಣಾ ಮಳಗಲಿ,ಸುಧಾ ರೊಟ್ಟಿ,ಮಂಜುಳಾ,ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ,ಮುರಿಗೆಪ್ಪ ಬಾಳಿ,ಮೋಹನ ಗುಂಡ್ಲೂರ,ಮೋಹನ ಪಾಟೀಲ,ಗೌಡಪ್ಪನವರ, ಎಸ್ ಜಿ ಸಿದ್ನಾಳ,ಪ್ರೊ.ಎಸ್ ವಾಯ್ ಚೋಬಾರಿ,ಶಂಕರ ಶೆಟ್ಟಿ,ಸಂಕೇಶ್ವರ ವಕೀಲರು,ಕುಂದ್ರಾಳ ವಿ.ಎಸ್. ಡಾ. ಅಡಿವೇಶ ಇಟಗಿ. ಪ್ರದೀಪ ಚಿಕಲಿ ವಿವಿಧ ಬಡಾವಣೆಗಳ ಬಸವ ಅನುಯಾಯಿಗಳು ಉಪಸ್ಥಿತರಿದ್ದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆಮಹಾದೇವ ಭಾಂದುರ್ಗೆ ನಿಧನಸಮಾಜಕ್ಕೆ ಉತ್ತಮ ಸಂದೇಶ ನೀಡುವ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಲಿ : ಮಾಜಿ ಶಾಸಕ ವಿ.ಐ. ಪಾಟೀಲ್ನಿನ್ನೆ ನಡೆದ  ಗೋಕಾಕ್ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರಬೆಳಗಾವಿ ಮಹಾನಗರ ಪಾಲಿಕೆಯ ಸ್ವಚ್ಛತಾ ವಾಹನಗಳ ಚಾಲಕರ ಪ್ರತಿಭಟನೆಕೋಡಿಹಳ್ಳಿ ಚಂದ್ರಶೇಖರ್ ಸುದ್ದಿ ಗೋಷ್ಠಿಬೆಳಗಾವಿಯಲ್ಲಿ ಅಲ್ಪಾವಯೊಲೆಟ್‌ನ 10ನೇ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭಕೆಎಸ್ಐಐಡಿಸಿ ರಾಜ್ಯ ನಿರ್ದೇಶಕರಾಗಿ ಮಲ್ಲೇಶ್ ಚೌಗುಲೆ ನೇಮಕಕಷ್ಟ-ಸುಖಗಳಲ್ಲೂ ಸಮಭಾವ ಕಂಡುಕೊಳ್ಳಬೇಕು. ಯುವಜನತೆ ಬದುಕಿನ ಸಾರ್ಥಕತೆ ಅರಿತು ಶ್ರೇಷ್ಠ ಸಾಧಕರಾಗಲಿ: ಬಸವರಾಜ ಬೊಮ್ಮಾಯಿ.