ಬಿಹಾರದ ಖರ್ಹತ್ ಟೋಲ್ ಪ್ಲಾಜಾ ಬಳಿ ಶುಕ್ರವಾರ ಮದ್ಯ ಸಾಗಿಸುತ್ತಿದ್ದ ಮಿನಿ ಲಾರಿಯೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದ್ದು, ಇದರ ಬೆನ್ನಲ್ಲೇ ಸ್ಥಳದಲ್ಲಿ ರೋಚಕ ಹಾಗೂ ಅನಿರೀಕ್ಷಿತ ದೃಶ್ಯ ಕಂಡುಬಂದಿದೆ. ಲಾರಿಯಲ್ಲಿ ಮದ್ಯದ ಬಾಟಲಿಗಳಿವೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಸ್ಥಳೀಯರು ಸ್ಥಳಕ್ಕೆ ಧಾವಿಸಿ, ವಾಹನದಲ್ಲಿದ್ದ ಮದ್ಯದ ಬಾಟಲಿಗಳು ಹಾಗೂ ಪೆಟ್ಟಿಗೆಗಳನ್ನು ಲೂಟಿ ಮಾಡಿದ್ದಾರೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಅಪಘಾತಕ್ಕೀಡಾದ ಲಾರಿಯತ್ತ ಜನ ಮುಗಿಬಿದ್ದು ಬಾಟಲಿಗಳನ್ನು ಎತ್ತಿಕೊಂಡು ಹೋಗುತ್ತಿರುವುದು ಅದರಲ್ಲಿ ಸೆರೆಯಾಗಿದೆ. ಕೆಲವರು ಇಡೀ ಪೆಟ್ಟಿಗೆಗಳನ್ನೇ ಹೊತ್ತಕೊಂಡು ಹೋಗುತ್ತಿದ್ದರೆ, ಮಹಿಳೆಯರು ಹಾಗೂ ಮಕ್ಕಳು ಕೂಡ ಈ ನೂಕುನುಗ್ಗಲಿನಲ್ಲಿ ಪಾಲ್ಗೊಂಡು ಸಿಕ್ಕ ಸಿಕ್ಕ ಮದ್ಯದ ಬಾಟಲಿಗಳನ್ನು ಬಾಚಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಅಪಘಾತದ ಬೆನ್ನಲ್ಲೇ ಲಾರಿಯ ಚಾಲಕ ಹಾಗೂ ಕ್ಲೀನರ್ ಅಲ್ಲಿಂದ ಪರಾರಿಯಾಗಿದ್ದಾರೆ.
ಬಿಹಾರ ರಾಜ್ಯದಲ್ಲಿ 2016 ರಿಂದಲೂ ಮದ್ಯಪಾನ ನಿಷೇಧವಿದ್ದು (ಸಂಪೂರ್ಣ ಮದ್ಯಬಂಧ), ರಾಜ್ಯದಲ್ಲಿ ಮದ್ಯ ಸೇವನೆ, ಸಾಗಾಟ ಮತ್ತು ಮಾರಾಟ ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ. ಹೀಗಿರುವಾಗ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಲಾರಿ ಅಪಘಾತಕ್ಕೀಡಾಗಿರುವುದು ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ವಿಡಿಯೋ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನು ಕಳುಹಿಸಲಾಯಿತು. ಆದರೆ ಪೊಲೀಸರು ಸ್ಥಳ ತಲುಪುವಷ್ಟರಲ್ಲಿ ಕಂಟೈನರ್ನಲ್ಲಿದ್ದ ಮದ್ಯ ಸಂಪೂರ್ಣವಾಗಿ ಖಾಲಿಯಾಗಿತ್ತು.
ಲೂಟಿಯಲ್ಲಿ ಭಾಗಿಯಾದ ಎಲ್ಲರನ್ನೂ ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಸದಾರ ಎಸ್ಡಿಪಿಒ ಸುಶೀಲ್ ಕುಮಾರ್ ತಿಳಿಸಿದ್ದು, ಪರಾರಿಯಾಗಿರುವ ಲಾರಿ ಚಾಲಕನಿಗಾಗಿ ಹುಡುಕಾಟ ಮುಂದುವರಿದಿದೆ. ರಾಣಿಗಂಜ್ ಪೊಲೀಸರು ವಾಹನವನ್ನು ವಶಕ್ಕೆ ಪಡೆದಿದ್ದು, ವಾಹನದ ಮಾಲೀಕ ಯಾರು ಮತ್ತು ಈ ಅಕ್ರಮ ಮದ್ಯದ ಜಾಲದ ಹಿಂದೆ ಯಾರಿದ್ದಾರೆ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ. ಈ ಕಂಟೈನರ್ ಅಸ್ಸಾಂ ಅಥವಾ ಪಶ್ಚಿಮ ಬಂಗಾಲದಿಂದ ಬಿಹಾರದ ಸೀಮಾಂಚಲ ಪ್ರದೇಶಕ್ಕೆ ಸಾಗಣೆಯಾಗುತ್ತಿತ್ತೇ ಎಂಬುದರ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
VIDEO | Bihar: Liquor-laden truck crashes in Araria, locals loot bottles; police probe underway
— Press Trust of India (@PTI_News) October 2, 2026
Bihar has been a dry state since April 2016, when the government imposed a complete ban on the manufacture, sale and consumption of alcohol under the Bihar Excise (Amendment) Act.… pic.twitter.com/8aMTXabL8u