ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರ ಆಯ್ಕೆ ಪಟ್ಟಿ ಪ್ರಕಟ
ದಾವಣಗೆರೆ : ಪ್ರಸಕ್ತ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಸತಿಶಾಲೆ, ಕಾಲೇಜು ಮತ್ತು ಮಾದರಿಶಾಲೆ, ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕ ಹುದ್ದೆಯ 1:2 ಆಯ್ಕೆ ಪಟ್ಟಿಯನ್ನು ಜಿಲ್ಲಾ ಕಚೇರಿಯ ನಾಮಫಲಕದಲ್ಲಿ ಪ್ರಕಟಿಸಲಾಗಿರುತ್ತದೆ.
ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಜೂನ್ 12 ರಂದು ಅತಿಥಿ ಶಿಕ್ಷಕರು ಮತ್ತು ಜೂನ್ 13 ಬೆಳಿಗ್ಗೆ 10 ಗಂಟೆಗೆ ಅತಿಥಿ ಉಪನ್ಯಾಸಕರ (1:2 ಆಯ್ಕೆಯಾದ)ಆಯ್ಕೆ ಅಭ್ಯರ್ಥಿಗಳು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆ, ಹೊಸಕುಂದುವಾಡ, ದಾವಣಗೆರೆ ಟೌನ್ ಇಲ್ಲಿ ನಡೆಯುವ ಪ್ರತ್ಯಾಕ್ಷಿಕೆ ತರಗತಿ((Demo Class))ಗಳಿಗೆ ಮೂಲ ಅಂಕಪಟ್ಟಿ ಹಾಗೂ ದಾಖಲಾತಿಗಳೊಂದಿಗೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08192-250022 ಸಂಪರ್ಕಿಸಬೇಕು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.