LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜಿಬಿಎ ವ್ಯಾಪ್ತಿಯಲ್ಲಿ ಮತ್ತಷ್ಟು ಜೈವಿಕ ಅನಿಲ ಘಟಕಗಳ ಸ್ಥಾಪನೆಗೆ ಕ್ರಮ : ಮಹೇಶ್ವರ್ ರಾವ್

ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ ಮತ್ತಷ್ಟು ಜೈವಿಕ ಅನಿಲ ಘಟಕಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದೆಂದು ಜಿಬಿಎ ಮುಖ್ಯ ಆಯುಕ್ತರಾದ ಶ್ರೀ ಮಹೇಶ್ವರ್ ರಾವ್* ರವರು ತಿಳಿಸಿದರು.

ಜಿಬಿಎ ವ್ಯಾಪ್ತಿಯ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಕೋರಮಂಗಲದಲ್ಲಿರುವ ಕಸ-ರಸ ಘಟಕಕ್ಕೆ ಇಂದು ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಹಸಿ ಕಸದಿಂದ ಜೈವಿಕ ಅನಿಕ ಉತ್ಪತ್ತಿ ಮಾಡುವ ಸಲುವಾಗಿ ಸಮಗ್ರವಾಗಿ ಅಧ್ಯಯನ ನಡೆಸಿ, ಜಿಬಿಎ ನಗರ ಪಾಲಿಕೆಗಳಲ್ಲಿ ಜೈವಿಕ ಅನಿಲ ಘಟಕಗಳನ್ನು ಸ್ಥಾಪಿಸಲು ಕ್ರಮ ವಹಿಸಲಾಗುವುದೆಂದು ಹೇಳಿದರು.

ನಗರದಲ್ಲಿ ವೀಕೇಂದ್ರಿಕೃತ ಕೇಂದ್ರಗಳನ್ನು ಸ್ಥಾಪಿಸಬೇಕಾದರೆ ಆಯಾ ನಗರ ಪಾಲಿಕೆಗಳಲ್ಲಿ 2/3 ಎಕರೆ ಜಾಗ ಬೇಕಾಗುತ್ತದೆ. ಕಡಿಮೆ ಅವಧಿಯಲ್ಲಿ ಪ್ರಸ್ತುತ ಇರುವಂತಹ ಘಟಗಳನ್ನು ಉನ್ನತೀಕಣಗೊಳಿಸಿ ಅಲ್ಲಿ ಬಯೋ ಗ್ಯಾಸ್ ಉತ್ಪತ್ತಿ ಮಾಡಿ, ಸ್ಥಳೀಯ ಹೋಟೆಲ್ ಗಳಿಗೆ ವಿತರಣೆ ಮಾಡಲು ಕ್ರಮ ವಹಿಸಲಾಗುವುದೆಂದು ತಿಳಿಸಿದರು.

ಸ್ಥಳೀಯವಾಗಿ ಹಸಿ ಹಾಗೂ ಒಣ ತ್ಯಾಜ್ಯ ವಿಂಗಡಣೆಯಾದರೆ ಸಾಕಷ್ಟು ಅನುಕೂಲವಾಗಲಿದೆ. ಅದಕ್ಕೆ ನಾಗರೀಕರ ಸಹಕಾರ ಪ್ರಮುಖ‌ ಪಾತ್ರ ವಹಿಸಲಿದ್ದು, ನಾಗರಿಕರು ತ್ಯಾಜ್ಯವನ್ನು ವಿಂಗಡಿಸಿ ಕೊಡಲು ಮನವಿ ಮಾಡಿದರು.

ಕಸ-ರಸ ಘಟಕದಲ್ಲಿ 10 ಟನ್ ನಿಂದ ಬಯೋ ಗ್ಯಾಸ್ ಉತ್ಪತ್ತಿಸಿ, ಹತ್ತಿರದ ಹೋಟೆಲ್ ಗೆ ವಿತರಣೆ ಮಾಡಲಾಗುತ್ತಿದ್ದು, ಆ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲು ಕ್ರಮವಹಿಸಲಾಗುತ್ತದೆ. ಈ ಸ್ಥಳದಲ್ಲಿರುವ ಹೈ ಟೆನ್ಷನ್ ಲೈನ್ ಲೈನ್ ಬದಲಾಯಿಸಿದರೆ, ಬೃಹತ್ ಪ್ರಮಾಣದಲ್ಲಿ ಬಯೋಗ್ಯಾಸ್ ಉತ್ಪತ್ತಿಸಬಹುದಾಗಿದ್ದು, ಆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ‌ ನೀಡಲಾಗಿದೆ ಎಂದು ಹೇಳಿದರು.

*ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಕರೀಗೌಡ* ರವರು ಮಾತನಾಡಿ, ಹಸಿ ಘನತ್ಯಾಜ್ಯದ ವ್ಯವಸ್ಥಿತ ಹಾಗೂ ವೈಜ್ಞಾನಿಕ ಸಂಸ್ಕರಣೆ ಘನತ್ಯಾಜ್ಯ ನಿರ್ವಹಣೆಯ ಪ್ರಮುಖ ಅಂಶವಾಗಿದೆ. ಈ ನಿಟ್ಟಿನಲ್ಲಿ ಬಿಎಸ್‌ಡಬ್ಲ್ಯೂಎಂಎಲ್ ವತಿಯಿಂದ ಹಸಿ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದಿಸಲು ವಿವಿಧ ಬಯೋಮೆಥನೈಸೇಷನ್ ಘಟಕಗಳನ್ನು ನಿರ್ಮಿಸಿ ನಿರ್ವಹಿಸಲಾಗುತ್ತಿದೆ ಎಂದರು.

ಈ ಹಿಂದೆ ಬಿಬಿಎಂಪಿ ವತಿಯಿಂದ ನಿರ್ಮಾಣಗೊಂಡ 12 ಬಯೋಗ್ಯಾಸ್ ಘಟಕಗಳಲ್ಲಿ 6 ಘಟಕಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ಘಟಕದಲ್ಲಿ ದಿನಕ್ಕೆ 5 ಟನ್ ಹಸಿ ತ್ಯಾಜ್ಯ ಸಂಸ್ಕರಿಸಿ ಒಟ್ಟಾರೆ ಸುಮಾರು 30 ಟನ್ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದಿಸಲಾಗುತ್ತಿದೆ. ಉಳಿದ 6 ಘಟಕಗಳನ್ನು ನವೀಕರಣಗೊಳಿಸುವ ಕಾಮಗಾರಿಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಬಯೋಗ್ಯಾಸ್ ಘಟಕಗಳಲ್ಲಿ ಪ್ರತಿ ಟನ್ ಹಸಿ ತ್ಯಾಜ್ಯದಿಂದ ಸುಮಾರು 30 ರಿಂದ 50 ಕೆಜಿ ಬಯೋಗ್ಯಾಸ್ ಉತ್ಪಾದನೆ ಸಾಧ್ಯವಾಗುತ್ತದೆ. ಅದರಂತೆ ಪ್ರತಿ ಘಟಕದಲ್ಲಿ ದಿನಕ್ಕೆ ಸುಮಾರು 200 ಕೆಜಿ ಗ್ಯಾಸ್ ಉತ್ಪಾದನೆ ನಡೆಯುತ್ತಿದೆ. ಉತ್ಪಾದನೆಯಾಗುವ ಬಯೋಗ್ಯಾಸ್ ಅನ್ನು ಘಟಕಗಳ ಒಳಾಂಗಣ ಬಳಕೆಗೆ ಬಳಸಲಾಗುತ್ತಿದ್ದು, ಹೆಚ್ಚುವರಿ ಗ್ಯಾಸ್ ಮೂಲಕ ಜನರೇಟರ್ ಮೂಲಕ ವಿದ್ಯುತ್ ಉತ್ಪಾದಿಸಿ ಸಮೀಪದ ಉದ್ಯಾನವನಗಳಲ್ಲಿ ದೀಪಗಳನ್ನು ಬೆಳಗಿಸಲಾಗುತ್ತಿದೆ.

*ಹೋಟೆಲ್ ಗೆ ಬಯೋಗ್ಯಾಸ್ ಸರಬರಾಜು:*

ಕೋರಮಂಗಲದಲ್ಲಿರುವ 8.5 ಟನ್ ಸಾಮರ್ಥ್ಯದ ಬಯೋಗ್ಯಾಸ್ ಘಟಕದಿಂದ ಸಮೀಪದ ಹೋಟೆಲ್‌ಗೆ ಪ್ರತಿದಿನ ಸುಮಾರು 120 ಕೆಜಿ ಬಯೋಗ್ಯಾಸ್ ಸರಬರಾಜು ಮಾಡಲಾಗುತ್ತಿದ್ದು, ಪ್ರತಿ ಕೆಜಿಗೆ ರೂ.70ರಂತೆ ದಿನಕ್ಕೆ ಸುಮಾರು ರೂ.8,400 ಆದಾಯ ಲಭ್ಯವಾಗುತ್ತಿದೆ. ಇದರ ಮೂಲಕ ಹಸಿ ತ್ಯಾಜ್ಯದಿಂದ ಉತ್ಪತ್ತಿಯಾಗುವ ಜೈವಿಕ ಅನಿಲವನ್ನು ಅಡುಗೆ ಇಂಧನವಾಗಿ ಬಳಸಲಾಗುತ್ತಿದೆ.

*4 ವಿಕೇಂದ್ರೀಕೃತ ಬಯೋಮೆಥನೈಸೇಷನ್ ಘಟಕಗಳನ್ನು ನಿರ್ಮಾಣ:*

ಇದಲ್ಲದೆ ಹೊಸದಾಗಿ ನಾಲ್ಕು ವಿಕೇಂದ್ರೀಕೃತ ಬಯೋಮೆಥನೈಸೇಷನ್ ಘಟಕಗಳನ್ನು ನಿರ್ಮಿಸಲು ಕ್ರಮವಹಿಸಲಾಗಿದ್ದು, ಅವುಗಳಲ್ಲಿ ಎರಡು ಘಟಕಗಳು (ವಾರ್ಡ್ 151 ಹಾಗೂ 27) ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಕಾರ್ಯಾರಂಭಗೊಳ್ಳಲಿವೆ. ಉಳಿದ ಎರಡು ಘಟಕಗಳ (ವಾರ್ಡ್ 196 ಹಾಗೂ 56) ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

*2 ಬೃಹತ್ ಬಯೋಗ್ಯಾಸ್ ಘಟಕ ಸ್ಥಾಪನೆ:*

ಗೇಲ್ ಗ್ಯಾಸ್ ಇಂಡಿಯಾ ಕಂಪನಿಯ ಸಹಯೋಗದೊಂದಿಗೆ ದಿನಕ್ಕೆ ಸುಮಾರು 300 ಟನ್ ಹಸಿ ತ್ಯಾಜ್ಯ ಸಂಸ್ಕರಿಸುವ ಸಾಮರ್ಥ್ಯದ ಹೊಸ ಬಯೋಗ್ಯಾಸ್ ಘಟಕ ನಿರ್ಮಾಣಕ್ಕೂ ಚಾಲನೆ ನೀಡಲಾಗಿದೆ. ಇದಲ್ಲದೆ ಕನ್ನಹಳ್ಳಿ ಪ್ರದೇಶದಲ್ಲಿ ಸುಮಾರು 1,000 ಟನ್ ಹಸಿ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದಿಸುವ ಘಟಕ ನಿರ್ಮಾಣಕ್ಕೆ ಮೆ. ಸಾತರಾಂ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಅನುಮೋದನೆ ನೀಡಲಾಗಿದೆ.

*ಬಯೋ-CNG ರೂಪದಲ್ಲಿ ಮಾರಾಟ:*

ಹೇರೋಹಳ್ಳಿ ಪ್ರದೇಶದಲ್ಲಿ ದಿನಕ್ಕೆ ಸುಮಾರು 50 ಟನ್ ತ್ಯಾಜ್ಯ ಸಂಸ್ಕರಣೆ ಮಾಡುವ ಘಟಕಕ್ಕೆ ವೆಂಡರ್ ಎಂಪ್ಯಾನಲ್ ಮಾಡಲಾಗಿದ್ದು, ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರಿಂದ ಸಂಗ್ರಹವಾಗುವ ಹಸಿ ತ್ಯಾಜ್ಯದಿಂದ ದಿನಕ್ಕೆ ಸುಮಾರು 1500 ಕೆಜಿ ಗ್ಯಾಸ್ ಉತ್ಪಾದನೆ ಮಾಡಲಾಗುತ್ತಿದೆ. ಉತ್ಪಾದನೆಯಾಗುವ ಗ್ಯಾಸ್ ಅನ್ನು ಬಯೋ-CNG ರೂಪದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಭವಿಷ್ಯದಲ್ಲಿ ಗ್ಯಾಸ್ ಪೈಪ್‌ ಲೈನ್ ಮೂಲಕ ಮನೆಮನೆಗೆ ತಲುಪಿಸುವ ಯೋಜನೆಯೂ ರೂಪಿಸಲಾಗುತ್ತಿದೆ.

*ತ್ಯಾಜ್ಯ ನಿವಾರಣೆಗಾಗಿ ಮುಂದಿನ ಯೋಜನೆ:*

ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಹಾಗೂ ಮುಂದಿನ ದಿನಗಳಲ್ಲಿ ಉತ್ಪತ್ತಿಯಾಗಬಹುದಾದ ಸುಮಾರು *3000 ಟನ್ ಹಸಿ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದನೆ* ಮಾಡುವ ಯೋಜನೆಯನ್ನು ಸಮಗ್ರ ಘನತ್ಯಾಜ್ಯ ನಿರ್ವಹಣಾ ಟೆಂಡರ್‌ನಲ್ಲಿ ಒಳಗೊಂಡಿದೆ.

ಈ ಕ್ರಮಗಳಿಂದ ಹಸಿ ತ್ಯಾಜ್ಯದ ವೈಜ್ಞಾನಿಕ ಸಂಸ್ಕರಣೆಯ ಮೂಲಕ ಇಂಧನ ಉತ್ಪಾದನೆ ಸಾಧ್ಯವಾಗುತ್ತಿದ್ದು, ಘಟಕಗಳಿಂದ ಹೊರಬರುವ ಸ್ಲಡ್ಜ್ ಅನ್ನು *ಲಿಕ್ವಿಡ್ ಫರ್ಟಿಲೈಸರ್* ಆಗಿ ರೈತರು ಬಳಸಬಹುದು.

*ಮನೆಮಟ್ಟದ ಘಟಕಗಳು ನಿರ್ಮಾಣ:*


• ಇಂತಹ ಘಟಕಗಳನ್ನು ಮನೆಮಟ್ಟದಲ್ಲಿಯೂ ಅಳವಡಿಸಬಹುದಾಗಿದೆ.
• ಘಟಕ ನಿರ್ಮಾಣಕ್ಕೆ ಸುಮಾರು *ರೂ.20,000/- ವೆಚ್ಚ* ವಾಗಬಹುದು.
• ಮನೆಯಲ್ಲೇ ಉತ್ಪತ್ತಿಯಾಗುವ ಹಸಿ ತ್ಯಾಜ್ಯದಿಂದ ಗ್ಯಾಸ್ ಉತ್ಪಾದಿಸಿ ಅಡುಗೆ ಇಂಧನವಾಗಿ ಬಳಸಬಹುದು.

*ಕಸ-ರಸ ಆವರಣದಲ್ಲಿರುವ ಘಟಕಗಳು:*

ಕಸರಸ ಆವರಣದಲ್ಲಿ ಒಣ ತ್ಯಾಜ್ಯದಿಂದ ಮರುಬಳಕೆ ವಸ್ತುಗಳನ್ನು ಬೇರ್ಪಡಿಸುವುದರ ಜೊತೆಗೆ ಹಸಿ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದನೆ ಮಾಡುವ ವ್ಯವಸ್ಥೆಯಿದೆ. ಪ್ರಸ್ತುತ ಕೆಳಕಂಡ ಘಟಕಗಳ ಮೂಲಕ ತ್ಯಾಜ್ಯ ಸಂಸ್ಕರಣೆ ಮತ್ತು ಮರುಬಳಕೆ ಕಾರ್ಯ ನಡೆಯುತ್ತಿದೆ.

1. *ಬಯೋಮೆಥನೈಸೇಷನ್ ಘಟಕದಿಂದ 8.5 ಟನ್ ಪ್ರತಿದಿನ ಸಂಸ್ಕರಣೆ ಮಾಡಿ ಹೋಟೆಲ್ ಗೆ ಗ್ಯಾಸ್ ವಿತರಣೆ*

2. *ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರ (DWCC)*

3. *ಥರ್ಮೋಕೋಲ್ ಪ್ರೊಸೆಸಿಂಗ್ ಘಟಕ*

4. *ಬಲ್ಕ್ ವೇಸ್ಟ್ ಮ್ಯಾನೇಜ್‌ ಮೆಂಟ್ ಕೇಂದ್ರ*

5. *ತರಬೇತಿ ಕೇಂದ್ರ*

*ಸಾರ್ವಜನಿಕರಿಗೆ ವಿನಂತಿ:*

ಪ್ರಸ್ತುತ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಹಾಗೂ ಹೋಟೆಲ್ ಮಾಲಿಕರು ತಮ್ಮ ಆವರಣದಲ್ಲಿಯೇ ವಿಕೇಂದ್ರೀಕೃತ ಬಯೋಗ್ಯಾಸ್ ಘಟಕಗಳನ್ನು ಸ್ಥಾಪಿಸಿಕೊಳ್ಳಲು ಮನವಿ ಮಾಡಲಾಗಿದೆ. ಬಿಎಸ್‌ಡಬ್ಲ್ಯೂಎಂಎಲ್ ವತಿಯಿಂದ ಕೈಗೊಳ್ಳಲಾದ ಕ್ರಮಗಳಿಂದ ಬಹುತೇಕ ಹಸಿ ತ್ಯಾಜ್ಯವನ್ನು ಬಯೋಗ್ಯಾಸ್ ರೂಪದಲ್ಲಿ ಮರುಬಳಕೆ ಮಾಡಲು ಸಾಧ್ಯವಾಗುತ್ತಿದೆ.

ಈ ಕ್ರಮಗಳಿಂದ ಹಸಿ ತ್ಯಾಜ್ಯವನ್ನು ಮರುಬಳಕೆಗೆ ಬಳಸಿಕೊಳ್ಳುವುದರೊಂದಿಗೆ ಪರಿಸರ ಸಂರಕ್ಷಣೆಯತ್ತ ಮಹತ್ವದ ಹೆಜ್ಜೆ ಇಡಲಾಗುತ್ತಿದೆ.

*ಕೋರಮಂಗಲದಲ್ಲಿ ವರ್ಗಾವಣೆ ಘಟಕ‌ ಪರಿಶೀಲನೆ:*

ಕೋರಮಂಗಲದಲ್ಲಿರುವ ದ್ವಿತೀಯ ಹಂತದ ಘನತ್ಯಾಜ್ಯ ವರ್ಗಾವಣೆ ಘಟಕ ಪರಿಶೀಲಿಸಿ, ಮಿಶ್ರ ತ್ಯಾಜ್ಯ ಬರುತ್ತಿರುವುದನ್ನು ಗಮನಿಸಿ ವಿಗಂಡಣೆ ಮಾಡಿ ಪಡೆಯುವಂತೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ದಕ್ಷಿಣ ನಗರ ಪಾಲಿಕೆ ಆಯುಕ್ತರಾದ ರಮೇಶ್ ಕೆ.ಎನ್, ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆಉಡಾನ್' ಯೋಜನೆ ಮೂಲಕ ಭಾರತದ ಭವಿಷ್ಯದ ವೈದ್ಯಕೀಯ ಕಾರ್ಯಪಡೆಯನ್ನು ನಿರ್ಮಿಸುವ ಬದ್ಧತೆಯನ್ನು ಸಾರಿದ ನಾರಾಯಣ ಹೆಲ್ತ್ಮೆಟ್ರೋ ಟಿಕೆಟ್ ದರ: ಕೇಂದ್ರದತ್ತ ಬೊಟ್ಟು ಮಾಡಿದ ರಾಜ್ಯ ಸರ್ಕಾರಕ್ಕೆ ದಾಖಲೆ ಸಮೇತ ಟಾಂಗ್ ಕೊಟ್ಟ ನಿಖಿಲ್ಬಿಜೆಪಿ ಜಾಹೀರಾತಿನ ವಿರುದ್ಧ ಎಎಪಿ ದೂರುಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ, 20 ವರ್ಷ ಕಳೆದರೂ ರೈತರಿಗೆ ಸಿಗತ ಪರಿಹಾರಕಾಂಗ್ರೆಸ್ ಪಕ್ಷ ಪಾರ್ಕಿಂಗ್ ವಿಚಾರದಲ್ಲಿ ಅಂದಾ ದರ್ಬಾರ್ ಮಾಡಲು ಹೊರಟಿದೆ