E-PAPER
16 Nov 2026, 02:19:42 AM|
Gold₹13605/gGold24K ₹13,605/g - 22K ₹12,460/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಗುರು ಕೃಪೆ ಇಲ್ಲದೆ ಯಾವ ಸಾಧನೆಯನ್ನು ಮಾಡಲಾಗದು : ಮಲ್ಲಿಕಾರ್ಜುನ ಮಹಾಸ್ವಾಮಿಗಳು

ಬೆಳಗಾವಿ; ಗುರುವಿನ ಪಾತ್ರ ಮತ್ತು ಮಹತ್ವ ಅದ್ಭುತವಾದದ್ದು ಗುರು ಕೃಪೆ ಇಲ್ಲದೆ ಯಾವ ಸಾಧನೆಯನ್ನು ಮಾಡಲಾಗದು ಎಂದು ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ನುಡಿದರು.
ಅವರು ಬೆಳಗಾವಿಯಲ್ಲಿ ನಾಗನೂರು ರುದ್ರಾಕ್ಷಿ ಮಠ, ಪ್ರಭುದೇವ ಪ್ರತಿಷ್ಠಾನ ಮಾತೃ ಮಂಡಳಿ ಆಯೋಜಿಸಿದ್ದ ಗುರು ಪೂರ್ಣಿಮೆ ನಿಮಿತ್ತ ಗುರುವಂದನೆ ಮತ್ತು ಶ್ರೀಮತಿ ನೀಲವ್ವ ಬೆಂಡಿಗೇರಿ ಹಾಗೂ ವಿಶಾಲ್ ಹೆರಕರ ಇವರ ಸ್ಮರಣೆಯ ದತ್ತಿನಿಧಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಭಾರತೀಯ ಪರಂಪರೆಯಲ್ಲಿ ಅಷ್ಟೇ ಅಲ್ಲ ಇಡೀ ವಿಶ್ವದಲ್ಲಿ ಗುರುವಿನ ಪಾತ್ರ ಮತ್ತು ಗುರುವಿಗೆ ಇರುವ ಮಹತ್ವ ಅದ್ವಿತೀಯವಾದದ್ದು. ರಾಮಕೃಷ್ಣ ಪರಮಹಂಸರಂಥ ಗುರುವಿನಿಂದಾಗಿ ಸ್ವಾಮಿ ವಿವೇಕಾನಂದರು ಬೆಳಗಿದರು, ಜಗತ್ತನ್ನೇ ಗೆದ್ದ ಅಲೆಕ್ಸಾಂಡರ್ ಕೂಡ ಗುರು ಅರಿಸ್ಟಾಟಲರಿಂದ ಸಾಧನೆ ಮಾಡುವಂತಾಯಿತು. ಗುರುವಿಲ್ಲ ಎಂದಾದರೆ ದೇವರೇ ಇಲ್ಲ ಏಕೆಂದರೆ ದೇವರನ್ನು ತೋರಿಸಿದ್ದೆ ಗುರು ಅದಕ್ಕೆಂದೆ ಶರಣರು ಹೇಳುತ್ತಾರೆ ಶಿವಪಥವನರಿಯಲು ಗುರುಪಥವೇ ಮೊದಲು ಎಂದು,ಮೈಲಾರ ಶರಣರು ಹೇಳುತ್ತಾರೆ ಶಿವನ ಸಾನಿಧ್ಯದಲ್ಲಿದ್ದವಗೆ ಹುಟ್ಟು ಸಾವುಗಳು ಉಂಟು ಆದರೆ ಗುರು ಸಾನಿಧ್ಯದಲ್ಲಿದ್ದವಗೆ ಹುಟ್ಟು ಸಾವುಗಳಿಲ್ಲ ಎಂದು ಹೀಗಾಗಿ ಹರನಿಗಿಂತ ಗುರು ದೊಡ್ಡವನೆಂದು ಗುರುವಿಗೆ ಅತ್ಯಂತ ಮಹತ್ತರವಾದ ಸ್ಥಾನವನ್ನು ನೀಡಲಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಥಣಿ ಮೋಟಗಿ ಮಠದ ಶ್ರೀ. ಪ್ರಭು ಚನ್ನಬಸವ ಮಹಾಸ್ವಾಮಿಗಳು ವಹಿಸಿ ಯುವಜನತೆ ಮಠಗಳತ್ತ ಬರುವಂತಾಗಬೇಕು ಮೊಬೈಲ್ ಗಿಳಿನಿಂದ ಹೊರಬಂದು ಗುರು ಪರಂಪರೆಯನ್ನು ಗೌರವಿಸುವ ವಾತಾವರಣವನ್ನು ಮುಂದುವರಿಸಬೇಕು ಎಂದರು. ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಶ್ರೀ. ಅಲ್ಲಮಪ್ರಭು ಮಹಾಸ್ವಾಮಿಗಳು ನೇತ್ರತ್ವ ವಹಿಸಿದ್ದರು. ಧಾರವಾಡ ಮುರುಘಾ ಮಠದ ಡಾ.ಮಲ್ಲಿಕಾರ್ಜುನ ಮಹಾ ಸ್ವಾಮಿಗಳಿಗೆ ಗುರುವಂದನೆ ಸಲ್ಲಿಸಲಾಯಿತು.
ಡಾ.ಶಿವಬಸವ ಸ್ವಾಮಿಜಿಯವರ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ಮಲ್ಲನಕೆರೆ  ಶ್ರೀ.ವಿರಕ್ತಮಠದ ಶ್ರೀ.ಚನ್ನಬಸವ ಮಹಾ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ಧಾರವಾಡ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಂಗಮನಾಥ ಲೋಕಾಪುರ ಅವರಿಗೆ ಗೌರವ ಸಮ್ಮಾನ ನೀಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶದ ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕದ ಏಕೀಕರಣ ಚಳುವಳಿಗಳಲ್ಲಿ ಭಾಗವಹಿಸಿದ ಶರಣ ತತ್ವದ ಪ್ರತಿಪಾದಕ ಏಕೈಕ ಸಂತರೆಂದರೆ ಅದು ಲಿಂಗೈಕ್ಯ ಡಾ.ಶಿವಬಸವ ಮಹಾಸ್ವಾಮಿಗಳು ಅದರಿಂದಾಗಿಯೇ ಭಾರತದ ಭೂಪಟದಲ್ಲಿ ನಾಗನೂರಿನ ಹೆಸರು ವಜ್ರಾಕ್ಷರಗಳಲ್ಲಿ ದಾಖಲಾಯಿತು ಎಂದರು. ಜಾಗತಿಕ ಲಿಂಗಾಯತ ಮಹಾಸಭೆಯ ಪರವಾಗಿ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಉಪಾಧ್ಯಕ್ಷರುಗಳಾದ ಎ.ವಾಯ್.ಬೆಂಡಿಗೇರಿ ಮತ್ತು ಮುರುಗೇಶ್ ಶಿವಪೂಜಿ,  ನಗರ ಘಟಕದ  ಉಪಾಧ್ಯಕ್ಷ ಮೋಹನ್ ಗುಂಡ್ಲುರ್ , ಪ್ರಧಾನ ಕಾರ್ಯದರ್ಶಿ ಸಿ.ಎಂ. ಬೂದಿಹಾಳ, ಇವರುಗಳು ಸ್ವಾಮೀಜಿಗಳನ್ನು ಗೌರವಿಸುವ ಮೂಲಕ ಗುರುವಂದನೆ ಸಲ್ಲಿಸಿದರು. ಸರಕಾರಿ ಐಟಿಐ ಕಾಲೇಜಿನ ಪ್ರಾಂಶುಪಾಲ ಚಿದಾನಂದ ಬಾಕೆ ಅವರನ್ನು ಗೌರವಿಸಲಾಯಿತು. ಪ್ರಾಚಾರ್ಯ ಎ.ಎಲ್. ಪಾಟೀಲ್ ಸ್ವಾಗತಿಸಿದರು. ಬೆಳಗಾವಿ ವಿಜ್ಞಾನ ಕೇಂದ್ರದ ನಿರ್ದೇಶಕ ರಾಜಶೇಖರ್ ಪಾಟೀಲ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಶ್ರೀ.ಮಠದ ಕಾರ್ಯದರ್ಶಿ ಎಸ್.ಪಿ.ಹಿರೇಮಠ, ಎಸ್ ಜಿಬಿಐಟಿ ಇಂಜಿನಿಯರಿಂಗ್ ಕಾಲೇಜ್ ಚೇರಮನ್, ಡಾ.ಎಫ್.ವಿ.ಮಾನವಿ, ಪ್ರಾಚಾರ್ಯ ಶ್ರೀ. ಪಟಗುಂದಿ, ಪ್ರೊ. ಮಂಜುನಾಥ ಶರಣಪ್ಪನವರ, ದತ್ತಿದಾನಿ ಶ್ರೀಮತಿ.ಸರಳಾ ಹೇರೆಕರ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಐಟಿಐ ಕಾಲೇಜಿನ 17 ವಿದ್ಯಾರ್ಥಿಗಳಿಗೆ  ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಪ್ರಭುದೇವ ಪ್ರತಿಷ್ಠಾನ ಮಾತೃಮಂಡಳಿ ಮತ್ತು ಪ್ರಸಾದ ನಿಲಯದ ವಿದ್ಯಾರ್ಥಿಗಳಿಂದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ ಜಿನದತ್ತ ದೇಸಾಯಿಯವರ ಬದುಕು ಬರಹ ನಮಗೆಲ್ಲ ಮಾದರಿ- ಪ್ರಾ ಬಿ ಎಸ್ ಗವಿಮಠ CCEA ಮತ್ತು ಜೈನ್ ಕಾಲೇಜ್ ಆಫ್ ಎಂಜಿನಿಯರಿಂಗ್ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿಅಂಜುಮನ್ ಪದವಿ ಕಾಲೇಜಿಗೆ ಚಾಂಪಿಯನಶಿಪ್‌ ಪ್ರಶಸ್ತಿಉತ್ತರ ಕರ್ನಾಟಕದ ಹಿರಿಯ ರಾಜಕೀಯ ಮುತ್ಸದ್ದಿ , ಮಾಜಿ ಸಚಿವ, ಶಿವಾನಂದ ಕೌಜಲಗಿ ಲಿಂಗೈಕ್ಯರಾಗಾಆವಿವಿ, ವಿಧಾನಸೌಧ ಸೇರಿದಂತೆ ಪ್ರಮುಖ ಸರ್ಕಾರಿ ಹಾಗೂ ಐತಿಹಾಸಿಕ ಕಟ್ಟಡಗಳಿಗೆ ಪಿಂಕ್ ಲೈಟಿಂಗ್ : ಕುಲಪತಿ ಡಾ.ಭಗವಾನ್ ಬಿ.ಸಿಬೆಳಗಾವಿಯಲ್ಲಿ ಹೊಸ ಶೋರೂಮ್ ಮೂಲಕ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ವಿಸ್ತರಿಸಿದ PuREPowerರಾಜಾ ಲಖಮಗೌಡರು, ಶಿರಸಂಗಿ ಲಿಂಗರಾಜರು ಮತ್ತು  ಪಾಟೀಲ ಪುಟ್ಟಪ್ಪ ಭಾವ ಚಿತ್ರಗಳನ್ನು ಆಹ್ವಾನ ಪತ್ರಿಕೆಗಳಲ್ಲಿ ಮುದ್ರಿಸಬೇಕು ; ಡಾ.ಸರಜೂ ಕಾಟ್ಕರಭ್ರಷ್ಟಾಚಾರ ರಹಿತ ಸಮ ಸಮಾಜ ನಿರ್ಮಾಣ ಶರಣರ ತತ್ವಗಳಿಂದ ಮಾತ್ರ ಸಾಧ್ಯ ; ಡಾ.ಬಸವರಾಜ ಹುಲಮನಿನಿಯಮ ಉಲ್ಲಂಘಿಸುವ ಹೋಟೆಲ್, ಪಬ್, ಡಾಬಾಗಳ ವಿರುದ್ಧ ಕಠಿಣ ಕ್ರಮ: ಪೊಲೀಸ್ ಕಮಿಷನರ್ ನಿಕ್ಕಂ ಎಚ್ಚರಿಕೆಜೆಎಲ್ಎಂ ಕಚೇರಿಯಲ್ಲಿ ಗಾಂಧಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ