Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Politics News

ಮಾಧ್ಯಮಗೋಷ್ಠಿ

ಸುದ್ದಿಮೂಲ ವಾರ್ತೆ

ಬೆಂಗಳೂರು,ಮೇ.5: ರಾಜ್ಯಕ್ಕೆ ಬರುವ ಆದಾಯವನ್ನು ಹೆಚ್ಚಳ ಮಾಡಿಕೊಂಡು, ಅದನ್ನು ಹಂಚಿಕೆ ಮಾಡಿ ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ, ಸರ್ಕಾರದ ಖರ್ಚು ವೆಚ್ಚಗಳನ್ನು ಉಳಿಸಿಕೊಳ್ಳುವ ಮೂಲಕ ಕಾಂಗ್ರೆಸ್‌ ಗ್ಯಾರಂಟಿ ಅನ್ನು ಅನುಷ್ಠಾನ ಮಾಡುತ್ತೇವೆ.

ಈ ರಾಜ್ಯದಲ್ಲಿ ಭ್ರಷ್ಟಾಚಾರ ಎಷ್ಟರವರೆಗೆ ಮೀತಿಮೀರಿದೆ ಅಂದರೆ ದೇಶದ ಮತ್ತು ರಾಜ್ಯದ ಆಸ್ತಿ, ಸಂಪತ್ತುಗಳನ್ನು ಮನಸೋ ಇಚ್ಛೇ, ಕೆಲವೇ ಕೆಲವು ವ್ಯಕ್ತಿಗಳ ಜೇಬಿಗೆ ಹೋಗುತ್ತ ಇದೆ. ಸರ್ಕಾರದ ಹಣ ಅದು ಜನರ ಹಣ,ಅದನ್ನು ದಾರಿತಪ್ಪಿಸಿ, ಅದನ್ನು ಖಾಸಗಿಯಾಗಿ ಕೆಲವು ವ್ಯಕ್ತಿಗಳಿಗೆ ಅದರಲ್ಲೂ ಬಿಜೆಪಿ ಮುಖಂಡರಿಗೆ ಮತ್ತು ಬೆಂಬಲಿರಿಗೆ ಹಣ ಸೇರುವ ರೀತಿಯಲ್ಲಿ ಆಗುತ್ತ ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಅದಕ್ಕಾಗಿ ಬಿಜೆಪಿ ಅವರ ಭ್ರಷ್ಟಾಚಾರದ ಲೂಟಿ ಸುಮಾರು 150,000 ಲಕ್ಷ ಕೋಟಿ ಆಗಿದೆ. ಪ್ರತಿಯೊಂದರಲ್ಲೂ 40%, 50%, 60% ಕಮಿಷನ್‌ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದೆ. ಹಾಗಾಗಿ ಇದರಲ್ಲಿ ಶೇ. 50% ರಷ್ಟು ಇಳಿಸಿದರೂ ನಮ್ಮ ಕಾಂಗ್ರೆಸ್‌ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರಲು ಸಾಧ್ಯವಿದೆ.

ಕೆಎಸ್.ಡಿ.ಎಲ್ ನೇಮಕಾತಿಯಲ್ಲಿ 5 ಕೋಟಿ ರಿಂದ 15 ಕೋಟಿ, ಇಂಜಿನಿಯರ್‌ ನೇಮಕಾತಿಯಲ್ಲಿ 1 ಕೋಟಿಯಿಂದ 5 ಕೋಟಿಯವರೆಗೆ, ಸಬ್‌ ರಿಜಿಸ್ಟ್ರಾರ್‌ 50 ಲಕ್ಷದಿಂದ 5 ಕೋಟಿ, ಬೆಸ್ಕಾಂ 1 ಕೋಟಿ, ಪಿಎಸೈ 80 ಲಕ್ಷ, ಕೆಪಿಎಸ್ಸಿ ಅಧ್ಯಕ್ಷ 5 ಕೋಟಿಯಿಂದ 15 ಕೋಟಿ, ಡಿಸಿ ಮತ್ತು ಎಸ್ಪಿ 5 ಕೋಟಿಯಿಂದ 15 ಕೋಟಿ, ಉಪ ಕುಲಪತಿ 5 ಕೋಟಿಯಿಂದ 10 ಕೋಟಿ ಈ ರೀತಿಯ ಹಗರಣದ ಮೂಲಕ ಹೆಚ್ಚು ಹಣ ಲೂಟಿ ಮಾಡಿದೆ. ಮಠದ ಸ್ವಾಮೀಜಿಯೋರ್ವರು ಹೇಳಿದ್ರು, ನಮ್ಮ ಅನುದಾನಕ್ಕೆ ದುಡ್ಡು ಕೊಡಬೇಕು, ಪೊಲೀಸ್‌ ಠಾಣಾಧಿಕಾರಿಯೊರ್ವ ಮೃತಪಟ್ಟಗ ರಾಜ್ಯದ ಸಚಿವರೊಬ್ಬರು ಹೇಳಿದ್ರು ಅವನು ಹಣಕೊಟ್ಟು ಬಂದಿದ್ದಾನೆ ಅಂತ. ಮಂತ್ರಿಗಳೆ ಸ್ವತಃ ಬಿಜೆಪಿ ಶಾಸಕರೇ ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡಿದ್ದಾರೆ. ಗುತ್ತಿಗೆದಾರರ ಸಂಘದ ಪತ್ರ, ಆತ್ಮಹತ್ಯೆ ಮಾಡಿಕೊಂಡಿರುವವರು ಆರೋಪ, ಸಾರ್ವಜನಿಕವಾಗಿಯೂ ಇಂದು ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಠಾಚಾರ, ಕಮಿಷನ್‌ ಬಗ್ಗೆ ಮಾತನಾಡುವಂತಾಗಿದೆ.

ಈ ಸರ್ಕಾರದಲ್ಲಿ ಗುತ್ತಿಗೆದಾರರು ಬೀದಿಪಾಲಾಗಿದ್ದಾರೆ. ಈ ಪರಿಸ್ಥಿತಿ ರಾಜ್ಯದಲ್ಲಿ ಎಂದಿಗೂ ಇರಲ್ಲಿಲ್ಲ. ಇಂತಹ ಪರಿಸ್ಥಿತಿ ರಾಜ್ಯ ಹೊರಬರಬೇಕಾಗುತ್ತದೆ. ನಾವು ಈ ರೀಪೋಟರ್ಟ್‌ ಕಾರ್ಡನ್ನು ಸ್ಪಷ್ಟ ಮಾಹಿತಿಯ ಆಧಾರದಲ್ಲಿ ನಾವು ಹೇಳಿದ್ದೇವೆ. ಇದೇನು ಕಪೋಲಕಲ್ಪಿತ ಸುದ್ದಿ ಅಲ್ಲ. ಮಂತ್ರಿ ಆಗಬೇಕಾದರೂ ದುಡ್ಡು ಕೊಡಬೇಕು. ಇಡೀ ರಾಜ್ಯವನ್ನೇ ಮಾರಾಟಕ್ಕೆ ಇಟ್ಟು ಬಿಟ್ಟಿದ್ದಾರೆ.

ರಾಜ್ಯದ ಜನರು ತೀರ್ಮಾನ ಮಾಡಿದ್ದಾರೆ ಈ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯಬೇಕೆಂದು ಜನ ಬಯಸುತ್ತಾ ಇದ್ದಾರೆ. ಬೆಂಗಳೂರಿನ 28 ಮತಕ್ಷೇತ್ರದಲ್ಲೂ ಕಾಂಗ್ರೆಸ್‌ ಪಕ್ಷಕ್ಕೆ ಉತ್ತಮ ವಾತವರಣವಿದೆ. ಜನರೇ ಬದಲಾವಣೆ ಬಯಸಿ ಕಾಂಗ್ರೆಸ್‌ ಪರ ನಿಂತಿದ್ದಾರೆ. ನಗರದ ಬಹುತೇಕ ಎಲ್ಲ ಮತಕ್ಷೇತ್ರದಲ್ಲೂ ಜನರ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಬಿಜೆಪಿ ಪಾಬ್ರಲ್ಯವಿರುವ ಕ್ಷೇತ್ರದಲ್ಲೂ ಕಾಂಗ್ರೆಸ್‌ ಪರ ಸಾರ್ವಜನಿಕರ ಕೂಗು ಕೇಳಿ ಬರುತ್ತಿದೆ. ಹಾಗಾಗಿ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಇಂದು ಪತ್ರಿಕೆಯಲ್ಲಿ ಬಿಜೆಪಿಯ ರೀಪೋರ್ಟ್‌ ಕಾರ್ಡ್‌ ಅನ್ನು ಪ್ರಕಟಿಸಿದೆ. ಜಾಹೀರಾತು ಮೂಲಕ ಸ್ಪಷ್ಟವಾಗಿ ಇಂದು ಕಾಂಗ್ರೆಸ್‌ ಪಕ್ಷ ರಾಜ್ಯದ ಜನತೆಗೆ ತಿಳಿಸಿದೆ.

ಮುಂದೆ ರಾಜ್ಯದಲ್ಲಿ ರಾಜ್ಯದ ಸುಭದ್ರ ಮತ್ತು ನಾಡಿನ ಪ್ರಗತಿಗೆ ಕಾಂಗ್ರೆಸ್‌ ಪಕ್ಷ ಕಟ್ಟಿಬದ್ಧವಾಗಿದ್ದು, ಹಾಗಾಗಿ ಖಂಡಿತವಾಗಿಯೂ ಅಧಿಕಾರಕ್ಕೆ ಬಂದಲ್ಲಿ, ಭ್ರಷ್ಟಾಚಾರ ರಹಿತ, ಜನಪರ, ಸುಭದ್ರ,ಜನರ ಸರ್ವತೋಮುಖ ಅಭುದ್ಯಯಕ್ಕೆ ಕಾಂಗ್ರೆಸ್‌ ಪಕ್ಷ ಶ್ರಮ ವಹಿಸಲಿದೆ.

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಸೇರಿದಂತೆ ಮಾಧ್ಯಮ ಕ್ಷೇತ್ರದಲ್ಲೂ ಭ್ರಷ್ಟಾಚಾರವಿದೆ ಅದು ಒಂದು ಕ್ಯಾನ್ಸರ್‌ ವಿದ್ದಂತೆ. ಅದನ್ನು ನಿವಾರಣೆ ಮಾಡುಬೇಕಲ್ವ. ಅದಕ್ಕಾಗಿ ಯುಪಿಎ ಸರ್ಕಾರವಿದ್ದಾಗ ಮಾಹಿತಿ ಹಕ್ಕು ಕಾಯ್ದೆಯನ್ನು ತಂದಿದ್ದೇವೆ, ಅದಕ್ಕಾಗಿಯೇ ನಾವು ಆಧಾರ್‌ ತಂದಿದ್ದೇವೆ, ಕಾಂಗ್ರೆಸ್‌ ನವರಿಗೆ ಯಾವುದೇ ಭಯಭೀತಿಯಿಲ್ಲ. ವ್ಯವಸ್ಥೆಯನ್ನು ಸರಿಪಡಿಸಿವುದು ನಮ್ಮ ಬಧ್ಧತೆ. ಆದರೆ ಇಂದು ಬಿಜೆಪಿಯಲ್ಲಿ ಜನರ ಹಣವನ್ನು ಲೂಟಿ ಮಾಡಿ, ಇಂದು ನಗ್ನರಾಗಿದ್ದಾರೆ. ಒಂದು ಸರ್ಕಾರದಲ್ಲಿ 40% ಕಮಿಷನ್‌ ಹೆಸರು ಇದ್ದ ಮೇಲೆ ಎಲ್ಲರೂ ಈ ಸರ್ಕಾರದಲ್ಲಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಅಂತ ಅರ್ಥ.

‘ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿದಷ್ಟೂ ಕಾಂಗ್ರೆಸ್ಗೆ ಅನುಕೂಲವಾಗುತ್ತೆ. ಹಾಗಾಗಿ, ಇಲ್ಲಿಯೇ ಪ್ರಧಾನಿ ಮನೆ ಮಾಡುವುದು ಉತ್ತಮ’ ಪ್ರಧಾನಿ ರಾಜ್ಯಕ್ಕೆ ಬಂದಷ್ಟೂ ಬಿಜೆಪಿಗೆ ಲಾಭವಾಗುತ್ತಿಲ್ಲ. ಬದಲಿಗೆ ಡ್ಯಾಮೇಜ್ ಆಗುತ್ತಿದೆ. ಪ್ರತಿಯಾಗಿ ನಮಗೆ ಪ್ಲಸ್ ಆಗುತ್ತಿದೆ. ಯಾಕೆಂದರೆ, ಅವರು ಹೀಗೆ ಬೀದಿ ಬೀದಿ ಸುತ್ತುತ್ತಿರುವ ಬಗ್ಗೆ ಜನರಲ್ಲಿ ನಕಾರಾತ್ಮಕ ಭಾವ ಮೂಡುತ್ತಿದೆ. ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಗಡಿ, ಕೆಲವು ರಾಜ್ಯಗಳಲ್ಲಿನ ಸಂಘರ್ಷ ಸೇರಿದಂತೆ ಅನೇಕ ವಿಚಾರಗಳಿವೆ. ಅವೆಲ್ಲವುಗಳನ್ನು ಬಿಟ್ಟು ಹೀಗೆ ಬೀದಿ ಬೀದಿ ಅಲೆಯುವ ಮೂಲಕ ಸ್ವತಃ ಮೋದಿ ಅವರು ಕೂಡ ಪ್ರಧಾನಿ ಹುದ್ದೆಗೆ ಅಪಮಾನ ಮಾಡುತ್ತಿದ್ದಾರೆ. ಜನ ಕೂಡ ಕೇಳ್ತಾ ಇದ್ದಾರೆ ಯಾಕೆ ಪದೇ ಬರುತ್ತಿದ್ದಾರೆ. ಇವರು ಮತ್ತಷ್ಟು ಬಂದಷು ಕಾಂಗ್ರೆಸ್‌ ಗೆ ಇನ್ನೂ ಬಲ ಬರುತ್ತಿದೆ. ಬಿಜೆಪಿಗೆ ಹತಾಶೆ ಬಂದಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋಗೆ ಅಡ್ಡಿಪಡಿಸಲು ಕಾಂಗ್ರೆಸ್ ಷಡ್ಯಂತ್ರ ಮಾಡುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಆ್ಯಂಬುಲೆನ್ಸ್ ಗಳನ್ನು ರೋಡ್ ಶೋ ಮಾರ್ಗದಲ್ಲಿ ಓಡಿಸುವುದಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಆರೋಪದ ಬಗ್ಗೆ ಉತ್ತರಿಸಿದ ಅವರು, ಬಹುಷಃ ಅವರು ಇದೆಲ್ಲವನ್ನು ಈ ಹಿಂದೆ ಮಾಡಿದ ಅನುಭವವಿರಬೇಕು. ಇದು ಬಿಜೆಪಿ ಮತ್ತು ಆರೆಸ್ಸೆಸ್‌ ಸ್ಟ್ರಾಟ್ರಜಿಯಿರಬೇಕು. ಇ ತರಹ ಮಾಡಿ ಅನುಭವವಿರಬೇಕು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ