LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ದೃಷ್ಠಿ ಹೀನರಾಗಿದ್ದರೂ 2 ಬಾರಿ ಯುಪಿಎಸ್‌ಸಿ ಗೆದ್ದ ಕರ್ನಾಟಕದ ಮೇಘನಾ

ಬೆಂಗಳೂರು : ಕಣ್ಣು ಕಂಡರೂ ಸಹ ಪಿಎಸ್‌ಐ, ಪ್ರಥಮ ದರ್ಜೆ ಸಹಾಯಕ, ಎಸ್‌ಡಿಎ ಪರೀಕ್ಷೆ ಪಾಸ್‌ ಮಾಡಲು ಆಗದೇ ಅಕ್ರಮ ಮಾರ್ಗ ಹಿಡಿದು ಪರೀಕ್ಷೆಯಲ್ಲಿ ಕಾಪಿ ಮಾಡಲು ಪ್ರಯತ್ನಿಸಿದವರು ಕರ್ನಾಟಕದಲ್ಲಿ ಇದ್ದಾರೆ. ಆದರೆ ಇಂತಹವರ ಮಧ್ಯೆಯೇ ಇರುವ ಕರ್ನಾಟಕದ ಮೇಘನಾ ಕೆ ಟಿ ಕಣ್ಣು ಕಾಣದಿದ್ದರೂ ಸಹ ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವೆಗಳ ಪರೀಕ್ಷೆ ಬರೆದು ಪಾಸ್‌ ಮಾಡಿದ್ದಾರೆ. ಅದು ಸಹ ಒಂದು ಬಾರಿ ಅಲ್ಲ. ಎರಡೆರಡು ಬಾರಿ ಯುಪಿಎಸ್‌ಸಿ ಗೆದ್ದಿದ್ದಾರೆ.

ಮೂಲತಃ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕುಡುಕೂರು ಗ್ರಾಮ. ವಾಸವಿರುವುದು ಬೆಂಗಳೂರಿನ ಕೆಂಗೇರಿಯಲ್ಲಿ. ಇವರ ತಂದೆ ತಾಂಡವಮೂರ್ತಿ, ತಾಯಿ ನವನೀತ. ಮೇಘನಾ ಪೂರ್ಣ ಪ್ರಮಾಣದಲ್ಲಿ ದೃಷ್ಟಿ ಸಮಸ್ಯೆ ಎದುರಿಸುತ್ತಿದ್ದಾರೆ. 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವೇಳೆ ರೆಟಿನಾ ಸಮಸ್ಯೆ ಎದುರಾಗಿ, ಶೇಕಡ.70 ರಷ್ಟು ಕಣ್ಣಿನ ದೃಷ್ಠಿ ಕಳೆದುಕೊಂಡಿದ್ದರು. ಇದಕ್ಕೆ ಕುಗ್ಗದ ಮೇಘನಾ ತಮ್ಮ ವೈಕಲ್ಯವನ್ನು ಮೆಟ್ಟಿನಿಂತು ಎರಡು ಬಾರಿ ಯುಪಿಎಸ್‌ ಪರೀಕ್ಷೆ ಬರೆದಿದ್ದಾರೆ.

2021ನೇ ಸಾಲಿನ ಸಿಎಸ್‌ಇ ಪರೀಕ್ಷೆ ಬರೆದು 425ನೇ ರ‍್ಯಾಂಕ್ ಪಡೆದಿದ್ದಾರೆ . 2020ನೇ ಸಾಲಿನಲ್ಲಿ ಮೇಘನಾ 465ನೇ ರ‍್ಯಾಂಕ್ ಪಡೆದಿದ್ದರು.ಮೇಘನಾ ಶಾಲಾ-ಕಾಲೇಜು ಶಿಕ್ಷಣವನ್ನು ಬೆಂಗಳೂರಲ್ಲೇ ಪಡೆದರು. 2015 ಬ್ಯಾಚ್‌ನಲ್ಲಿ ಕೆಎಎಸ್ ಪರೀಕ್ಷೆಯಲ್ಲಿ 11ನೇ ರ‍್ಯಾಂಕ್ ಪಡೆದು ಪಾಸಾಗಿದ್ದರು. ಭಲೀಖ ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ಹಣಕಾಸು ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದರು. ಕೆಲಸದ ಜತೆಗೆ ಯುಪಿಎಸ್‌ಸಿಗೆ ತಯಾರಿ ನಡೆಸಿ ಸಾಧನೆ ಮಾಡಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026