LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮೈಕ್ರೋ ಫೈನಾನ್ಸ್ ಕಿರುಕುಳ: ಬಲವಂತವಾಗಿ ಸಾಲ ವಸೂಲಿಗೆ ಬಂದ್ರೆ ಸಾಲಾ ಮನ್ನಾ.!

 

ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಕರ್ನಾಟಕ ಕಿರು ಸಾಲ(ಮೈಕ್ರೋ) ಮತ್ತು ಸಣ್ಣ ಸಾಲ ವಸೂಲಾತಿ ಬಲವಂತದ ಕ್ರಮಗಳ ಪ್ರತಿಬಂಧಕ ವಿಧೇಯಕ-2025 ಗುರುವಾರದಂದು ವಿಧಾನಸಭೆಯಲ್ಲಿ ಮಂಡನೆಯಾಗಿದೆ. ಈ ವಿಧೇಯಕದಂತೆ ಇನ್ಮುಂದೆ ಬಲವಂತವಾಗಿ ಸಾಲ ವಸೂಲಿಗೆ ಇಳಿದ್ರೇ ಸಾಲ ಮನ್ನಾ ಮಾಡುವಂತ ನಿರ್ಧಾರವನ್ನು ಸರ್ಕಾರ ಕೈಗೊಳ್ಳೋದಕ್ಕೆ ಅವಕಾಶವಿದೆ.

ಈ ವಿಧೇಯಕದಡಿ ಅನಧಿಕೃತ ಹಾಗೂ ನೋಂದಾಯಿತವಲ್ಲದ ಮೈಕ್ರೋ ಫೈನಾನ್ಸ್ ಅಥವಾ ಲೇವಾದೇವಿದಾರರು ಸಾಲಗಾರನಿಂದ ಬಲವಂತದ ವಸೂಲಿಗೆ ಪ್ರಯತ್ನಿಸೋದನ್ನು ನಿಷೇಧಿಸಲಾಗಿದೆ. ಒಂದೊಮ್ಮೆ ಸಾಲ ಪಡೆದಿರುವ ಸಮಾಜದ ದುರ್ಬಲ ವರ್ಗದವರ ಬಲಿ ಬಲವಂತ ಮಾಡಿ ಸಾಲಗಾರ ಪಡೆದಿರುವ ಸಾಲ ಹಾಗೂ ಬಡ್ಡಿ ಮನ್ನಾ ಆಗಿದೆ ಎಂದು ಭಾವಿಸಬೇಕು ಎಂಬ ಮಹತ್ವದ ಅಂಶವನ್ನು ವಿಧೇಯಕ ಒಳಗೊಂಡಿದೆ.

ಇದಷ್ಟೇ ಅಲ್ಲದೇ ಇಂಥಹ ಸಂಸ್ಥೆ ಅಥವಾ ಲೇವಾದೇವಿದಾರ ಸಾಲ, ಬಡ್ಡಿ ವಸೂಲಿಗೆ ಹೂಡುವ ಯಾವುದೇ ದಾವೆ ಅಥವಾ ವ್ಯವಹಾರವನ್ನು ನ್ಯಾಯಾಲಯಗಳು ಪುರಸ್ಕರಿಸಬಾರದು. ಸಾಲಗಾರ ಅಥವಾ ಆತನೊಂದಿಗೆ ಯಾರ ವಿರುದ್ಧವಾದರೂ ಜಂಟಿಯಾಗಿ ದಾವೆ ಹೂಡಿದ್ದರೇ ತಕ್ಷಣದಿಂದ ರದ್ದಾಗಬೇಕು. ಇನ್ನೂ ಯಾವುದೇ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಕಿರುಸಾಲಕ್ಕೆ ಅಡಮಾನ ಇಟ್ಟುಕೊಂಡಿದ್ದರೇ ಅಂತಹ ಆಸ್ತಿ, ವಸ್ತುಗಳನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂಬುದಾಗಿ ಸ್ಪಷ್ಟ ಪಡಿಸಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಾಲ ತೀರುತ್ತಿಲ್ಲ, ಸಾಲದಿಂದ ಮುಕ್ತಿ ಬೇಕು ಎಂದರೆ ಕಪ್ಪು ದಾರದಿಂದ ಈ ಉಪಾಯವನ್ನು ಮಾಡಿ08-01-2026 ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ.!ಇಂದಿನ ವಚನ : ವಚನ ಭಂಡಾರಿ ಶಾಂತರಸ !ಅಳಿವಿನಂಚಿನಲ್ಲಿರುವ 15 ಭಾರತೀಯ ರಣಹದ್ದುಗಳ ಬಿಡುಗಡೆರಾಜ್ಯಾದ್ಯಂತ ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್‌ಗಳನ್ನು ಒದಗಿಸಲು ಮುಂದಾದ ಸರ್ಕಾರರೈಲ್ವೆ ಇಲಾಖೆ ಮಹತ್ವದ ನಿರ್ಧಾರ - ಆನ್‌ಲೈನ್ ಟಿಕೆಟ್ ಬುಕಿಂಗ್‌ಗೆ ಆಧಾರ್ ಲಿಂಕ್ ಕಡ್ಡಾಯಸಿಂಹ ರಾಶಿ ವರ್ಷ ಭವಿಷ್ಯ 2026: ಈ ವರ್ಷ ಸಿಂಹ ರಾಶಿಗೆ ಅದೃಷ್ಟದ ಮಳೆ!ಕಾರು ಪಲ್ಟಿ: ಕಾರು ಸಹಿತ ಇಬ್ಬರ ದಹನ22 ವರ್ಷಕ್ಕೆ ಯುಪಿಎಸ್‌ಸಿ ಪಾಸ್‌, ಮೋನಿಕಾ ಯಾದವ್ ಅವರ ಸ್ಫೂರ್ತಿದಾಯಕ ಕಥೆರೈತರಿಗೆ ಗುಡ್ ನ್ಯೂಸ್ .! ನಿಮ್ಮ ಜಮೀನಿನ ಇ-ಖಾತಾವನ್ನು ಮನೆಯಲ್ಲಿ ಪಡೆಯಿರಿ.! ಹೇಗೆ ಅಂತೀರ.?