LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬಡವರ ಮನೆಯ ಹಣ ಪಡೆಯುವಷ್ಟು ದರಿದ್ರ ನನಗೆ ಬಂದಿಲ್ಲ: ಸಚಿವ ಜಮೀರ್

ಬೆಂಗಳೂರು: ಭ್ರಷ್ಟಾಚಾರದಲ್ಲಿ ನನ್ನ ಕೈವಾಡ ಇದ್ದರೆ ನೂರಕ್ಕೆ ನೂರರಷ್ಟು ರಾಜೀನಾಮೆ ನೀಡುತ್ತೇನೆ. ಬಡವರ ಮನೆಯ ಹಣ ಪಡೆಯುವಷ್ಟು ದರಿದ್ರ ನನಗೆ ಬಂದಿಲ್ಲ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಸ್ಪಷ್ಟಪಡಿಸಿದರು.

ಇಂದು ಸರ್ಕಾರಿ ನಿವಾಸದ ಬಳಿ ಮಾತನಾಡಿದ ಅವರು, ಬಿ.ಆರ್.ಪಾಟೀಲ್ ನನ್ನ ‌ಮೇಲೆ ಆರೋಪ ಮಾಡಿಲ್ಲ. ನಾನು‌ ಕೊಟ್ಟ ಪತ್ರಕ್ಕೆ ಮನೆ ಕೊಟ್ಟಿಲ್ಲ ಎಂದಿದ್ದಾರೆ. ಪಂಚಾಯತಿ ಮೇಲೆ ಆರೋಪ‌ ಮಾಡಿದ್ದಾರೆ. ಪ್ರತಿ ಪಂಚಾಯತಿಗೆ 900 ಮನೆ ನೀಡಲಾಗಿದೆ. ಎರಡು ಸಾವಿರ ಮನೆ ಕೇಳಿದ್ರೆ 900 ಮನೆ ನೀಡಲಾಗಿದೆ. ಶಾಸಕರು ಕೊಟ್ಟ ಮನವಿ ನಮ್ಮ ಬಳಿ ಇವೆ. ಬಿ.ಆರ್.ಪಾಟೀಲ್ ಹಿರಿಯರಿದ್ದಾರೆ. ಯಾಕೆ ಆರೋಪ ಮಾಡಿದ್ರೋ ಗೊತ್ತಿಲ್ಲ ಎಂದರು.

ದುಡ್ಡು ಪಡೆದು ಮನೆ ಕೊಟ್ಟರೆ ಹುಳ ಬಿದ್ದು ಸಾಯುತ್ತೇವೆ‌: ಬಿಜೆಪಿಗರು ಹೇಳುವುದೇ ಬೇಡ ನಾನೇ ರಾಜೀನಾಮೆ ‌ನೀಡುತ್ತೇನೆ. ಯಾರ ಬಳಿಯೂ ನಾವು ದುಡ್ಡು ಪಡೆದು ಮನೆ ಕೊಟ್ಟಿಲ್ಲ. ರಾಮನಗರಕ್ಕೆ ಕೂಡ ಮನೆ ಕೊಟ್ಟಿದ್ದೇವೆ. ಎಲ್ಲರಿಗೂ ಮನೆ ಕೊಟ್ಟಿದ್ದೇವೆ. ದುಡ್ಡು ಪಡೆದು ಮನೆ ಕೊಟ್ಟರೆ ಹುಳ ಬಿದ್ದು ಸಾಯುತ್ತೇವೆ‌. ಬಡವರ ಹಣ ಪಡೆದ್ರೆ ನಮ್ಮ ಮಕ್ಕಳಿಗೆ ಒಳ್ಳೆಯದಾಗುತ್ತಾ?. ಯಾರು ಹಣ ಪಡೆದಿದ್ದಾರೆ ಎಂದು ಪಾಟೀಲ್ ಹೇಳಲಿ. ಅವರ ಮೇಲೆ ಕ್ರಮ ತೆಗೆದುಕೊಳ್ಳೋಣ ಎಂದು ತಿಳಿಸಿದರು.

ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿ ಕೇಂದ್ರ ಸರ್ಕಾರ 1.50 ಲಕ್ಷ ರೂ. ಮಾತ್ರ ನೀಡುತ್ತೆ. ರಾಜ್ಯ ಸರ್ಕಾರ ಕೂಡ ಒಂದೂವರೆ ಲಕ್ಷ ಕೊಡುತ್ತದೆ. ಇದಕ್ಕೆ ಕೇಂದ್ರ ಸರ್ಕಾರ ಜಿಎಸ್​​ಟಿ ಹಾಕಿದೆ. ಜಿಎಸ್​ಟಿ ಬಿಡುವಂತೆ ಕೇಂದ್ರ ಸರ್ಕಾರಕ್ಕೆ ಕೇಳಿದ್ದೆವು. ಬಾಕಿ ಹಣ ಫಲಾನುಭವಿಗಳು ನೀಡಬೇಕು. ಆದ್ರೆ ಫಲಾನುಭವಿಗಳ ಹಣ ಸಮರ್ಪಕವಾಗಿ ಬಂದಿಲ್ಲ. ಹೀಗಾಗಿ ಮನೆಗಳು ಕಂಪ್ಲೀಟ್ ಆಗಿಲ್ಲ. ಸರ್ಕಾರವೇ ದುಡ್ಡು ಹಾಕಿ ಮನೆ ಕಂಪ್ಲೀಟ್ ಮಾಡಲಾಗುತ್ತಿದೆ. ಮುಂದಿನ ತಿಂಗಳು 42 ಸಾವಿರ ಮನೆಗನ್ನು ಕೋಡುತ್ತೇವೆ ಎಂದರು.

ನಾಲ್ಕು ವರ್ಷಗಳಿಂದ ಹೊಸ ಮನೆಗಳನ್ನು ಕೊಟ್ಟಿಲ್ಲ: ಈಗ 9 ಲಕ್ಷ ಮನೆಗಳ ನಿರ್ಮಾಣ ಆಗುತ್ತಿದೆ. ನಾಲ್ಕು ವರ್ಷಗಳಿಂದ ಹೊಸ ಮನೆಗಳನ್ನು ಕೊಟ್ಟಿಲ್ಲ. ನಾನು ಈ ಬಗ್ಗೆ ಸಿಎಂ ಅವರ ಗಮನಕ್ಕೆ ತಂದೆ. ಬಜೆಟ್​​ನಲ್ಲಿ ಘೋಷಣೆ ಮಾಡಲು‌ ಮನವಿ ಮಾಡಿದ್ದೆ. ಸಿಎಂ ಅವರು ಕೂಡ ಒಪ್ಪಿದ್ರು. ಆದ್ರೆ ಆರ್ಥಿಕ ಇಲಾಖೆ ಬೇಡ ಅಂತ ಹೇಳಿತು. ಸದ್ಯ 9 ಲಕ್ಷ ಮನೆಗಳ ಕೆಲಸ ನಡೆಯುತ್ತಿದೆ. ಅವು ಮುಗಿಯುವವರೆಗೂ ಹೊಸ ಮನೆ ಘೋಷಣೆ ಮಾಡುವುದು ಬೇಡ ಎಂದುಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.

ಸಿಬಿಐ ತನಿಖೆಯಾಗಲಿ: ಬಿಜೆಪಿಯವರು ಸಾಬೀತು ಮಾಡಲಿ. ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ನಾನು ಬಂದ ಮೇಲೆ ಮನೆ ಹಂಚಿಕೆ ಮಾಡುತ್ತಿದ್ದೇನೆ. ಇವತ್ತು ಬಿಜೆಪಿಗರು ಮಾತನಾಡುತ್ತಿದ್ದಾರೆ. ಬಡವರ ಮೇಲೆ ಬಿಜೆಪಿಗರಿಗೆ ಕಾಳಜಿ ಇಲ್ಲ. ಯಾರು ದುಡ್ಡು ಪಡೆದು ಮನೆ ಕೊಟ್ಟಿದ್ದಾರೆ ಅಂತ ಹೇಳಬೇಕು. ಈ ಬಗ್ಗೆ ತನಿಖೆಯಾಗಬೇಕು. ಸಿಎಂ ಅವರಿಗೆ ಪತ್ರ ಬರೆಯಲಿ. ಸಿಬಿಐ ತನಿಖೆಯಾಗಲಿ ಎಂದು ಒತ್ತಾಯಿಸಿದರು.

ಯಾವ ಪಂಚಾಯತಿ ಅಂತ ಹೇಳಬೇಕು. ಪಂಚಾಯತಿ ಭ್ರಷ್ಟಾಚಾರ ನಮಗೆ ಹೇಗೆ ಗೊತ್ತಾಗುತ್ತದೆ. ಅವರ ಕ್ಷೇತ್ರದ ಪಂಚಾಯತಿ ಬಗ್ಗೆ ಪಾಟೀಲ್ ಅವರೇ ಹೇಳಬೇಕು. ನಾನು ಸತ್ಯಹರಿಶ್ಚಂದ್ರ ಅಂತ ಹೇಳ್ತಿಲ್ಲ. ಈ ಬಡವರ ಮನೆ ವಿಚಾರವಾಗಿ ನಾನು ಹಣ ಪಡೆದ್ರೆ, ಮಕ್ಕಳಿಗೆ ಶಾಪ ತಟ್ಟಲಿ. ನಾನು ಈಗಾಗಲೇ ಇಲಾಖಾ ತನಿಖೆ ಮಾಡಿಸುತ್ತಿದ್ದೇನೆ ಎಂದು ತಿಳಿಸಿದರು
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026