Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಪಶು ಸಖಿಯರು ನಿಸ್ವಾರ್ಥ ಭಾವನೆಯಿಂದ ಕೆಲಸ ಮಾಡಲಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ

 

ಬೆಳಗಾವಿ: 'ಪಶು ಸಖಿ' ಎನ್ನುವುದು ರಾಜ್ಯ ಸರಕಾರದ ವಿನೂತನ ಮತ್ತು ಅತ್ಯಂತ ಉಪಯುಕ್ತ ಯೋಜನೆಗಳಲ್ಲಿ ಒಂದಾಗಿದ್ದು, ಪ್ರತಿ ಮನೆ ಮನೆಗೆ ತೆರಳಿ ಜಾನುವಾರುಗಳನ್ನು ಸಾಕಿದವರಿಗೆ ಸರಕಾರದ ಸೌಲಭ್ಯಗಳನ್ನು ತಲುಪಿಸುವ, ಅಗತ್ಯವಾದ ಮಾಹಿತಿಗಳನ್ನು ಒದಗಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕರು ಮತ್ತು ವಿಶೇಷಚೇತನರ ಸಬಲೀಕರಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ಅವರು ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ನಗರದ ಪಶು ಆಸ್ಪತ್ರೆಯ ಆವರಣದಲ್ಲಿರುವ ರೈತ ಭವನದಲ್ಲಿ ಆಯೋಜಿಸಿದ್ದ ಪಶುಸಖಿಯರಿಗೆ ತರಬೇತಿ ಕಾರ್ಯಾಗಾರದಲ್ಲಿ ಪ್ರಥಮ ಚಿಕಿತ್ಸಾ ಕಿಟ್ ವಿತರಿಸಿ ಮಾತನಾಡಿದರು.

"ಸರಕಾರದ ಯೋಜನೆಗಳು ಪಶು ಸಾಕಾಣಿಕೆ ಮಾಡುವವರಿಗೆ ಸರಿಯಾಗಿ ಮತ್ತು ಸರಿಯಾದ ಸಮಯಕ್ಕೆ ತಲುಪುತ್ತಿಲ್ಲ ಎನ್ನುವ ಕಾರಣಕ್ಕೆ ಪಶು ಸಖಿಯರು ಎನ್ನುವ ಹೊಸ ಪರಿಕಲ್ಪನೆ ರೂಪಿಸಲಾಗಿದೆ. ಪಶು ಸಂಗೋಪನೆ ಗ್ರಾಮೀಣ ಜನರ ಜೀವನಾಡಿ. ಕೃಷಿಯಷ್ಟೇ ಪಶು ಸಂಗೋಪನೆಯೂ ಮಹತ್ವವಾದ ಉದ್ಯೋಗ. ಬಹಳಷ್ಟು ಕುಟುಂಬಗಳು ಪಶುಸಂಗೋಪನೆಯ ಮೇಲೆಯೇ ಅವಲಂಭಿತವಾಗಿವೆ.ಅಂತಹ ಸಂದರ್ಭದಲ್ಲಿ ಆಕಸ್ಮಿಕವಾಗಿ ಜಾನುವಾರುಗಳು ಮೃತಪಟ್ಟರೆ ಅವರ ಬದುಕೇ ಅತಂತ್ರವಾಗುತ್ತದೆಹಾಗಾಗಿ ಜಾನುವಾರುಗಳಿಗೆ ರೋಗ ಬಾರದಂತೆ ಮುಂಜಾಗ್ರತೆ ತಿಳಿವಳಿಕೆ ನೀಡುವುದು, ರೋಗ ಬಂದರೆ ತಕ್ಷಣ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದು ಪಶು ಸಖಿಯರ ಜವಾಬ್ದಾರಿ" ಎಂದರು.

"ಪಶು ಸಖಿಯರಿಗೆ ಸರಕಾರ ಕೊಡುವುದು ಅತ್ಯಲ್ಪ ಗೌರವಧನವಾದರೂ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರಂತೆ ನಿಮ್ಮ ಸೇವೆ ಕೂಡ ದೇವರ ಕೆಲಸ ಎಂದೇ ಭಾವಿಸುತ್ತೇನೆ. ಹೀಗಾಗಿ ನಿಸ್ವಾರ್ಥವಾಗಿ ಸೇವೆ ಮಾಡಿ" ಎಂದು ಸಲಹೆ ನೀಡಿದರು.

"ರೈತರಿಗೆ ಹೊಸ ಹೊಸ ತಂತ್ರಜ್ಞಾನಗಳನ್ನು ತಲುಪಿಸುವ ಕೆಲಸ ಮಾಡಬೇಕು, ಸುಧಾರಿತ ಮೇವಿನ ಬೆಳೆಗಳ ಮತ್ತು ಜಾನುವಾರು ಆಹಾರ ಪದ್ಧತಿಗಳ ಕುರಿತು ಮಾಹಿತಿಯನ್ನು ನೀಡಬೇಕು, ಜಾನುವಾರುಗಳಲ್ಲಿ ರೋಗ ಕಂಡುಬಂದಾಗ ತಕ್ಷಣ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ಜಾನುವಾರುಗಳ ಕೃತಕ ಗರ್ಭಧಾರಣೆ ಮತ್ತು ತಳಿ ಅಭಿವೃದ್ಧಿ, ಜಂತುನಾಶಕ ವಿತರಣೆ, ಲಸಿಕಾ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಜಾರಿಗೊಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ ರೈತರು ಮತ್ತು ಇಲಾಖೆಯ ಮಧ್ಯೆ ಕೊಂಡಿಯಾಗಿ ಕೆಲಸ ಮಾಡಬೇಕು" ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

"ಕಳೆದ ವರ್ಷ ಜಾನುವಾರುಗಳಿಗೆ ದೊಡ್ಡ ಪ್ರಮಾಣದಲ್ಲಿ ರೋಗ ಬಂದು ಬಹಳಷ್ಟು ಜಾನುವಾರುಗಳು ಮೃತಪಟ್ಟಾಗ ನಾನೇ ಅಂದಿನ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿ ರೋಗದಿಂದ ಮೃತಪಟ್ಟ ಜಾನುವಾರುಗಳಿಗೆ ಹಣ ಕೊಡಿಸುವ ವ್ಯವಸ್ಥೆ ಮಾಡಿದ್ದೆ. ಹಿಂದೆ ಕಾಂಗ್ರೆಸ್ ಸರಕಾರವಿದ್ದಾಗ ಇದ್ದ ಯೋಜನೆ ನಂತರದಲ್ಲಿ ನಿಂತು ಹೋಗಿತ್ತು. ಮತ್ತೆ ನಾನೇ ಒತ್ತಾಯಿಸಿ ಜಾರಿಯಾಗುವಂತೆ ಮಾಡಿದ್ದೆ. ಅವುಗಳಲ್ಲಿ ಇನ್ನೂ ಕೆಲವು ಪ್ರಕರಣಗಳಿಗೆ ಹಣ ಕೊಡುವುದು ಜಿಲ್ಲೆಯಲ್ಲಿ ಬಾಕಿ ಇದೆ ಎಂದು ಕೇಳಿದ್ದೇನೆ. ಆದಷ್ಟು ಬೇಗ ಎಲ್ಲ ಪ್ರಕರಣಗಳನ್ನು ಇತ್ಯರ್ಥಪಡಿಸಿ, ಸರಕಾರದಿಂದ ಏನಾದರೂ ಹಣ ಬಿಡುಗಡೆಯಾಗಬೇಕಾದದ್ದು ಇದ್ದರೆ ಮಾಹಿತಿ ಕೊಡಿ, ಸಂಬಂಧಿಸಿದ ಸಚಿವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು" ಎಂದು ಅವರು ಭರವಸೆ ನೀಡಿದರು.

"ನಮ್ಮ ರೈತರನ್ನು, ಪಶುಸಂಗೋಪನೆ ಮಾಡುವವರನ್ನು ಯಾವುದೇ ಕಾರಣಕ್ಕೆ ಸತಾಯಿಸಬೇಡಿ. ಅವರಿಗೆ ಸರಕಾರದ ಸೌಲಭ್ಯಗಳನ್ನು ವಿಳಂಬವಿಲ್ಲದೆ ತಲುಪಿಸುವ ಜವಾಬ್ದಾರಿಯನ್ನು ಇಲಾಖೆಯವರು ನಿರ್ವಹಿಸಬೇಕು. ಈ ಕೆಲಸದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ. ನಿಷ್ಠೆ, ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿ" ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ. ರಾಜೀವ್ ಕೊಲೇರ್, ಮುಖ್ಯ ಪಶು ವೈದ್ಯಾಧಿಕಾರಿ ಡಾ. ಆನಂದ ಪಾಟೀಲ, ಡಾ. ಎಂ ಬಿ. ಪಾಟೀಲ, ಭಾಗ್ಯಶ್ರೀ ಬಿ. ಎಚ್, ಮಹೇಶ ಮತ್ತಿತರರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ