Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Politics News

ಬಿಜೆಪಿ ಟಿಕೆಟ್ ನನಗೆ ಫಿಕ್ಸ್ , ವರಿಷ್ಠರಿಂದ ಗ್ರೀನ್ ಸಿಗ್ನಲ್ - ಶಾಸಕ ಬಸವರಾಜ

ಸುದ್ದಿಮೂಲವಾರ್ತೆ

ಕಾರಟಗಿ,ಏ.೩- ಕನಕಗಿರಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನನಗೇ ನೀಡಲು ಈಗಾಗಲೇ ಪಕ್ಷದ ರಾಜ್ಯ ಮತ್ತು ಕೇಂದ್ರ ಮಟ್ಟದ ವರಿಷ್ಠರು ಹಸಿರು ನಿಶಾನೆ ತೋರಿಸಿದ್ದಾರೆ ಎಂದು ಶಾಸಕ ಬಸವರಾಜ ದಢೇಸೂಗೂರು ತಿಳಿಸಿದ್ದಾರೆ.

ತಾಲೂಕಿನ ಲಕ್ಮೀ ಕ್ಯಾಂಪ್  ಸೋಮವಾರ ನಡೆಸಿದ ಪಕ್ಷದ ಸಭೆಯಲ್ಲಿ ಭಾಗವಹಿಸಿ ಶಾಸಕರು ಮಾತನಾಡಿದರು.

ರಾಷ್ಟ್ರ ಹಾಗೂ ರಾಜ್ಯ ನಾಯಕರು ನನ್ನ ಮೇಲೆ ಬಹಳಷ್ಟು ಒಲವು ತೋರಿ ಪ್ರೀತಿ ವಿಶ್ವಾಸದ ಮೂಲಕ ಬಿಜೆಪಿ ಬೀಪಾರಂ ಕೂಡ ನನಗೆ ನೀಡುವ ಖಚಿತ ಭರವಸೆ ನೀಡಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆಯಲ್ಲಿ ಕಾರ್ಯಕರ್ತರಲ್ಲಿ ಗೊಂದಲ ಬೇಡ. ಕ್ಷೇತ್ರದಲ್ಲಿ ಹರಿದಾಡುತ್ತಿರುವ ಗಾಳಿ ಸುದ್ದಿಗೆ ಕಾರ್ಯಕರ್ತರು ಕಿವಿಗೊಡಬಾರದು. ಕ್ಷೇತ್ರದ ಮತದಾರ ದೇವರು ಕೂಡ ನನಗೆ ಆಶೀರ್ವಾದ ಮಾಡುತ್ತಾರೆ. ಇದರಲ್ಲಿ ಎರಡು ಮಾತಿಲ್ಲ.  ವಿರೋಧಿಗಳ ಹೇಳಿಕೆಗೆ ನಾನು ಈಗ ಉತ್ತರಿಸಲಾರೆ. ಟಿಕೇಟ್ ಜತೆಗೆ ಬೀಪಾರಂ ತಂದು ನಂತರ ಉತ್ತರಿಸುವೆ ಎಂದರು.

ಈಗಾಲೇ ಜರುಗಿದ ಜಿಲ್ಲಾ ಕೋರ್ ಕಮೀಟಿ ರಾಜ್ಯ ಕೋರ್ ಕಮೀಟಿ ಸಭೆಗಳಲ್ಲಿ ಮುಖಂಡರು ನನಗೆ ಟಿಕೇಟ್ ನೀಡಲು ನಿರ್ಧರಿಸಿದ್ದಾರೆ. ರಾಷ್ಠç ಹಾಗೂ ರಾಜ್ಯ ನಾಯಕರು ನನಗೆ ಆಶಿರ್ವದಿಸಿದ್ದಾರೆ ಟಿಕೇಟ್ ನನ್ನದೆ ಗೆಲುವು ಕೂಡ ನನ್ನದೆ. ಕ್ಷೇತ್ರದಲ್ಲೂ ಕೂಡ ನಾನು ಅಬಿವೃದ್ಧಿ ಕಾರ್ಯಗಳನ್ನು ಮಾಡಿದ ತೃಪ್ತಿ ನನಗಿದೆ.

ಕ್ಷೇತ್ರದಾದ್ಯಂತ  ನಿರಂತರವಾಗಿ ಮತದಾರರ ಸಂಪರ್ಕದಲ್ಲಿದ್ದೇನೆ. ಪಕ್ಷದಲ್ಲಿ ಯಾವೊಬ್ಬ ಕಾರ್ಯಕರ್ತರು, ಮುಖಂಡರು ಮುನಿಸಿಕೊಂಡಿಲ್ಲ. ಎಲ್ಲರೂ ಪಕ್ಷದ ತತ್ವ ಸಿದ್ದಾಂತಕ್ಕೆ ಬದ್ಧರಾಗಿದ್ದಾರೆ. ಸಣ್ಣ ಪುಟ್ಟ ವಿಷಯಗಳಿಗಾಗಿ ಕೆಲವು ಕಾರ್ಯಕರ್ತರಲ್ಲಿ ವೈಮನಸ್ಸು ಬಂದಿರಬಹುದು ಅದನ್ನೆಲ್ಲಾ ಸರಿಪಡಿಸಿದ್ದೆನೆ. ಕ್ಷೇತ್ರzಲ್ಲಿÀ ಬಿಜೆಪಿ ಮುಖಂಡರು, ಕಾರ್ಯಕರ್ತರು, ವಿವಿಧ ಘಟಕದ ಪದಾಧಿಕಾರಿಗಳು ಪಕ್ಷದ ತತ್ವ ಸಿದ್ದಾಂತದಡಿ ಪಕ್ಷ ವಹಿಸಿದ ಕೆಲಸಕಾರ್ಯಗಳನ್ನು ಚಾಚು ತಪ್ಪದೆ ಮಾಡುವ ಮೂಲಕ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿದ್ದಾರೆ.

ಯರಡೋಣಾ ಗ್ರಾ.ಪಂ. ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ, ಮುಖಂಡರಾದ ಶರಣಪ್ಪ ಗದ್ದಿ, ಮಂಜುನಾಥ ಮಾಲಿಪಾಟೀಲ್, ರವಿ ಸಿಂಗ್ ವಕೀಲರು, ವಿರುಪಾಕ್ಷಿ ಗುಂಡೂರು, ಶಿವಶರಣಪ್ಪ, ಅಂಬಣ್ಣ, ತಿಮ್ಮಣ್ಣ, ಹುಲ್ಲೇಶಪ್ಪ, ಮಾರೆಪ್ಪ, ಪರಶುರಾಮ, ವೀರೇಶ, ವೀರೇಶಪ್ಪ ಅನೇಕರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ