LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ರಾಜ್ಯದ ಜನರು ಬಿಜೆಪಿ-ಜೆಡಿಎಸ್ ಮೈತ್ರಿಯನ್ನ ಜನ ತಿರಸ್ಕರಿಸಿದ್ದಾರೆ: ಶಾಸಕಬಸವರಾಜು ವಿ ಶಿವಗಂಗಾ.!

ದಾವಣಗೆರೆ : ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವನ್ನು ಜನರು ಮೆಚ್ಚಿದ್ದಾರೆ, ಐದು ಗ್ಯಾರಂಟಿಗಳನ್ನು ನೀಡಿದ ನಮ್ಮ ಸರ್ಕಾರಕ್ಕೆ ಜನರು ಬೆಂಬಲ ನೀಡಿ ಮೂರು ಕ್ಷೇತ್ರಗಳಲ್ಲಿ ಗೆಲ್ಲಿಸಿದ್ದಾರೆ ಎಂದು ಶಾಸಕರಾದ ಬಸವರಾಜು ವಿ ಶಿವಗಂಗಾ ತಿಳಿಸಿದರು.

ಚುನಾವಣೆ ಪೂರ್ವದಲ್ಲೇ ನಾನು ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ತಿಳಿಸಿದ್ದೆ. ಅದರಂತೆ ಎಲ್ಲಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಹಾಗೂ ಉಪ ಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ಅವರ ಜೋಡೆತ್ತಿನಂತ ಸಮಬಲ ಹೋರಾಟದ ಪ್ರತಿಫಲವೇ ಈ ಚುನಾವಣೆ ಫಲಿತಾಂಶ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನ ಸೋಲಿಸಲು ಬಿಜೆಪಿ  ಸಾಕಷ್ಟು ಆರೋಪಗಳನ್ನು ಮಾಡಿದರು ಜನರು ಮಾತ್ರ ಯಾವುದಕ್ಕೂ ಕಿವಿಗೂಡಲಿಲ್ಲ. ಐದು ಗ್ಯಾರಂಟಿಗಳನ್ನು ನೀಡಿ ನುಡಿದಂತೆ ನಡೆದ ನಮ್ಮ ಸರ್ಕಾರದ ಆಡಳಿತಕ್ಕೆ ಕರ್ನಾಟಕದ ಜನರು ಆಶೀರ್ವಾದ ಮಾಡಿದ್ದಾರೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್ ಅವರ ಪರವಾಗಿ ಇದ್ದೇವೆ ಎಂದು ಅಲ್ಲಿನ ಜನ ಬೆಂಬಲ ಸೂಚಿಸಿ ಸಿ.ಪಿ ಯೋಗೇಶ್ವರ್ ಅವರನ್ನ ಗೆಲ್ಲಿಸಿದ್ದಾರೆ.

ಇನ್ನೂ ಶಿಗ್ಗಾಂವ ಚುನಾವಣೆಯಲ್ಲೂ ಜನರು ಎನ್‍ಡಿಎ ಪಕ್ಷಕ್ಕೆ ಸೋಲುಣಿಸಿ ಬಿಸಿ  ಮುಟ್ಟಿಸಿದ್ದಾರೆ, ಉಳಿದಂತೆ ಸಂಡೂರು ಕ್ಷೇತ್ರದಲ್ಲೂ ನಮ್ಮ ಪಕ್ಷಕ್ಕೆ ಬೆಂಬಲ ನೀಡಿ ಕಾಂಗ್ರೆಸ್ ಪಕ್ಷ ದೊಡ್ಡ ಪಕ್ಷ ಎಂದು ಸಾಬೀತು ಮಾಡಿದ್ದಾರೆ ಎಂದರು. ನಾನು ಸಹ ಶಿಗ್ಗಾಂವ ಕ್ಷೇತ್ರದ ಶಿಶುವಿನಹಾಳು ಗ್ರಾಮ ಪಂಚಾಯ್ತಿ ಜವಾಬ್ದಾರಿ ಹೊತ್ತುಕೊಂಡು ಪಕ್ಷದ ಪರವಾಗಿ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಪ್ರಚಾರ ನಡೆಸಿದ್ದೇ, ನಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ಕಾರ್ಯಕರ್ತರು ಪಟ್ಟ ಶ್ರಮದಿಂದ ಗೆಲುವು ಸಾಧಿಸಿದ್ದೇವೆ, ಈ ಗೆಲವು ಪಕ್ಷದ ಕಾರ್ಯಕರ್ತರಿಗೆ ಸಲ್ಲುತ್ತದೆ.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತದೆ, ಉಳಿದ ಅಧಿಕಾರವಧಿಯಲ್ಲಿ ನಮ್ಮ ಸರ್ಕಾರ ಇನ್ನೂ ಉತ್ತಮ ಆಡಳಿತ ನೀಡುವ ಮೂಲಕ ಎನ್‍ಡಿಎ ಮೈತ್ರಿಗೆ ತಕ್ಕ ಪಾಠ ಕಲಿಸುತ್ತೇವೆ  ಎಂದು ಶಾಸಕರಾದ ಬಸವರಾಜು ವಿ ಶಿವಗಂಗಾ ತಿಳಿಸಿದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಳೆ ವರಮಹಾಲಕ್ಷ್ಮಿ ಹಬ್ಬ ಯಾವ ಗಳಿಗೆಯಲ್ಲಿ ಪೂಜೆ ನೆರವೇರಿಸಿಬೇಕು.? ಪ್ರಸಾದ ತಯಾರಿ ಹೀಗಿರಲಿ.!ಖಾಸಗಿ ಸುದ್ದಿವಾಹಿನಿ ತಂಡದ ಮೇಲೆ ಹಲ್ಲೆ ಪ್ರಕರಣ; ಮಹೇಶ್‌ ಶೆಟ್ಟಿ ತಿಮರೋಡಿ, ಗಿರೀಶ್‌ ಮಟ್ಟಣ್ಣನವರ್‌, ಸಮೀರ್‌ ಎಂ.ಡಿ ವಿರುದ್ಧ ಎಫ್‌ಐಆರ್ ದಾಖಲು..!ಸಾಲಗಾರರ ಕಿರುಕುಳಕ್ಕೆ ಬೇಸತ್ತು ಯುವಕ ನೇಣಿಗೆ ಶರಣು.!ಗ್ರಹ ದೋಷಗಳನ್ನು ನಿವಾರಿಸಿ, ಸರ್ವ ಕಾರ್ಯ ಸಿದ್ಧಿಸುವ ಶ್ರೀ ಪ್ರತ್ಯಂಗಿರಾ ದೇವಿ ಯಂತ್ರ ಪೂಜೆ.!ಧರ್ಮಸ್ಥಳ ದೇವಾಲಯಕ್ಕೆ ಬಾಂಬ್ ಇರಿಸಿ ಸ್ಫೋಟಿಸಲು ಶಂಕಿತ ಉಗ್ರನ ಸಂಚು: ಇ.ಡಿ.ತನಿಖೆಯಲ್ಲಿ ಬಯಲುಬಾಳೆಬರೆ ಘಾಟ್‌ನಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಕೋಚಿಂಗ್ ಇಲ್ಲದೆ ಯುಪಿಎಸ್‌ಸಿ ಪರೀಕ್ಷೆ ಪಾಸಾದ ನಿವೇದಿತಾ ಶೆಟ್ಟಿದಿನದ ಮಂಡಕ್ಕಿ ಒಗ್ಗರಣೆ –ಮಿರ್ಚಿ..! 07-08-2025ವಚನ: -ಘಟ್ಟಿವಾಳಯ್ಯ .!ಧರ್ಮಸ್ಥಳದಲ್ಲಿ ಹೊಡೆದಾಟ : ನೇತ್ರಾವತಿ ಪಾಂಗಾಳ ಸಮೀಪ ಯೂಟ್ಯೂಬರ್ಸ್ ಮೇಲೆ ಹಲ್ಲೆ