ಅಂಗವಿಕಲರಿಗೆ ಪ್ರತಿವರ್ಷ ಇಪ್ಪತ್ತು ಲಕ್ಷ ಅನುದಾನ: ಶಾಸಕ ಕೆ.ಸಿ.ವೀರೇಂದ್ರಪಪ್ಪಿ.!
ಚಿತ್ರದುರ್ಗ : ಅಂಗವಿಕಲರಿಗೆ ಪ್ರತಿ ವರ್ಷವೂ ನನ್ನ ಅನುದಾನದಲ್ಲಿ ಇಪ್ಪತ್ತು ಲಕ್ಷ ರೂ.ಗಳನ್ನು ಈ ಕ್ಷಣದಿಂದಲೆ ಮೀಸಲಿಡುತ್ತೇನೆಂದು ಶಾಸಕ ಕೆ.ಸಿ.ವೀರೇಂದ್ರಪಪ್ಪಿ ವಾಗ್ದಾನ ಮಾಡಿದರು.
ಜಿಲ್ಲಾ ಅಂಗವಿಕಲರ ಕ್ಷೇಮಾಭ್ಯುದಯ ಸಂಘ, ಎಂ.ಆರ್.ಡಬ್ಯ್ಲೂ, ಯು.ಆರ್.ಡಬ್ಯು, ವಿ.ಆರ್.ಡಬ್ಯು. ವತಿಯಿಂದ ಐ.ಎಂ.ಎ.ಹಾಲ್ನಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಸಮಾವೇಶ ಉದ್ಗಾಟಿಸಿ ಮಾತನಾಡಿದರು.
ವಸತಿ ನಿಗಮಗಳ ಯೋಜನೆಯಲ್ಲಿ ಮೀಸಲಾತಿ, ಗ್ರಾಮ ಪಂಚಾಯಿತಿಯಲ್ಲಿ ಶೇ.5 ರಷ್ಟು ಅನುದಾನ ಮೀಸಲಿಡುತ್ತೇನೆ. ಸರ್ಕಾರ ನಿಮ್ಮ ಜೊತೆಗಿದೆ. ವಿಕಲಚೇತನರೆಂಬ
ಕೀಳರಿಮೆ ತೊರೆದು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಅಂಗವಿಕಲರಿಗೆ ಕರೆ ನೀಡಿದರು.
ಪ್ರತಿ ಮತ ಕ್ಷೇತ್ರದಲ್ಲಿ ಶೇ. 5 ರಷ್ಟು ವಿಕಲಚೇತನರಿದ್ದಾರೆ. ಆದಾರ್ ಯೋಜನೆಯಲ್ಲಿ ಒಂದು ಲಕ್ಷ ರೂ.ಸಾಲ ಸಿಗುತ್ತದೆ. ಅದರಲ್ಲಿ ಐವತ್ತು ಸಾವಿರ ರೂ.ಸಬ್ಸಡಿ.
ಲ್ಯಾಪ್ಟಾಪ್, ಹೊಲಿಗೆ ಯಂತ್ರ, ಅಂಧರಿಗೆ ಸ್ಮಾರ್ಟ್ ಫೋನ್ಗಳನ್ನು ನೀಡಲಾಗುತ್ತಿದೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸ್ವ-ಉದ್ಯೋಗಿಗಳಾಗಿ. ಹೆಸರಾಂತ ನಾಟಕಕಾರ ಶೇಕ್ಸ್ಪಿಯರ್ ಹಾಗೂ ವಾಸ್ಕೋಡಿಗಾಮ ಇವರುಗಳು ಅಂಗವಿಕಲರಾಗಿದ್ದರು. ನೂನ್ಯತೆ ಮರೆತು ಎಲ್ಲರಂತೆ ಬದುಕಿ. ನಿಮ್ಮ ಏನೆ ಸಮಸ್ಯೆಗಳಿದ್ದರೂ ನೇರವಾಗಿ ನನ್ನ ಗಮನಕ್ಕೆ ತನ್ನಿ. ನನ್ನ ಹಂತದಲ್ಲಿ ಆಗುವುದನ್ನು ಬಗೆಹರಿಸುತ್ತೇನೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ವಿಕಲಚೇತನರಿಗೆ ಸಮುದಾಯ ಭವನ ಕಟ್ಟಿಸಿಕೊಡುತ್ತೇನೆ. ಮಾಳಪ್ಪನಹಟ್ಟಿಯಲ್ಲಿರುವ ಅಂಧರ ಶಾಲೆಯಲ್ಲಿ ಪ್ರತಿ ವರ್ಷವೂ ನನ್ನ ಹುಟ್ಟುಹಬ್ಬ ಆಚರಿಸಿಕೊಂಡು ಅವರೊಟ್ಟಿಗೆ ಕೆಲವು ಕಾಲ ಕಳೆಯುತ್ತೇನೆ. ಭಿಕ್ಷಾಟನೆ ಮಾಡುವುದನ್ನು ಬಿಟ್ಟು ಸಮಾಜದೊಂದಿಗೆ ಎಲ್ಲರೊಡನೆ ಬೆರೆತು ಸ್ವಂತ ಕಾಲ ಮೇಲೆ ನಿಲ್ಲುವಂತಾಗಿ ಎಂದು ವಿಕಲಚೇತನರಿಗೆ ತಿಳಿಸಿದರು.
ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್ಪೀರ್ ಮಾತನಾಡಿ ಅಂಗವಿಕಲರಿಗೆ ಅನುಕಂಪ ಬೇಡ. ಅವಕಾಶ ಸಿಗಬೇಕು. ಸಾಮಾನ್ಯರಿಗಿಂತ ವಿಕಲಚೇತನರಲ್ಲಿ ವಿಶೇಷವಾದ ಸಾಮಥ್ರ್ಯವಿರುತ್ತದೆ. ಅಂಗವಿಕಲರಿಗೆ ಕೇವಲ ಸರ್ಕಾರದ ಸಹಾಯ ಸಿಕ್ಕರೆ ಸಾಲದು. ಸಾರ್ವಜನಿಕರು, ವಿವಿಧ ಸಂಘಟನೆಗಳ ಜವಾಬ್ದಾರಿಯೂ ಇದೆ.
ಸಬ್ಸಡಿ ಜೊತೆ ಬ್ಯಾಂಕ್ಗಳಲ್ಲಿ ಅಂಗವಿಕಲರಿಗೆ ಸಾಲ ಸಿಗುವ ವ್ಯವಸ್ಥೆ ಮಾಡುವಂತೆ ಶಾಸಕರಲ್ಲಿ ಮನವಿ ಮಾಡಿದರು.
ದಲಿತ ಮುಖಂಡ ಬಿ.ರಾಜಣ್ಣ ,ಲೇಖಕ ಹೆಚ್.ಆನಂದಕುಮಾರ್ ಮಾತನಾಡಿ ಸೆಲ್ಕೋ ಪೌಂಡೇಶನ್ನ ಮಂಜುನಾಥ್ ಭಾಗವತ್ , ಜಿಲ್ಲಾ ಅಂಗವಿಕಲರ ಕ್ಷೇಮಾಭ್ಯುದಯ ಸಂಘದ ಜಿಲ್ಲಾಧ್ಯಕ್ಷ ನಾಗರಾಜ್ ಟಿ. ಪ್ರಧಾನ ಕಾರ್ಯದರ್ಶಿ ಎಂ.ಎಸ್.ಪಾಪಣ್ಣ, ಕಾರ್ಯದರ್ಶಿ ಕೆ.ಆನಂದ್, ಎನ್.ಮೈಲಾರಪ್ಪ ಟಿ.ಕೆ.ವೆಂಕಟೇಶ್, ಭಾನುಕಿರಣ್, ಅಜ್ಜಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ನ್ಯಾಯವಾದಿ ಪ್ರತಾಪ್ಜೋಗಿ, ಬಡಗಿ ಕೆಲಸಗಾರರ ಸಂಘದ
ಅಧ್ಯಕ್ಷ ಎ.ಜಾಕಿರ್ಹುಸೇನ್, ವಾಗೀಶ್, ಜಾನಪದ ಜಾಗೃತಿ ಪರಿಷತ್ ಅಧ್ಯಕ್ಷ ಹೆಚ್.ಪ್ಯಾರೆಜಾನ್ ವೇದಿಕೆಯಲ್ಲಿದ್ದರು. ವಿಕಲಚೇತನರಿಗೆ ವಿವಿಧ ಸಲಕರಣೆಗಳನ್ನು ವಿತರಿಸಲಾಯಿತು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.