Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Entertainment News

ಏಕಾಂಗಿಯಾಗಿ ಏಳುಸುತ್ತಿನ ಕೋಟೆ ರಕ್ಷಿಸಿದ ಕೀರ್ತಿ ಒನಕೆ ಓಬವ್ವಳದ್ದು: ಶಾಸಕ ರಘುಮೂರ್ತಿ

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಕಿತ್ತೂರುರಾಣಿಚನ್ನಮ್ಮ, ಕೆಳದಿಚನ್ನಮ್ಮ, ರಾಣಿಹಬ್ಬಕ್ಕರಂತೆ ಒನಕೆ ಓಬವ್ವಳ ಹೆಸರು ಎಂದಿಗೂ ಅಜರಾಮರ ಎಂದು ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.

ಅವರು, ಮಂಗಳವಾರ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಛಲವಾದಿಮಹಾಸಭಾ ಸಹಯೋಗದಲ್ಲಿ ನಡೆದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಪ್ಪನಮನಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

೧೫ನೇ ಶತಮಾನದಲ್ಲಿಯೇ ಒನಕೆ ಓಬವ್ವ ಈ ನಾಡಿಗೆ ಮಹಿಳೆಯರ ಶೌರ್ಯವನ್ನು ಪರಿಚಯಿಸಿದ್ದಾರೆ. ಮಹಿಳೆಯು ಸಹ ಸದೃಢಳಾಗಿದ್ದು ಶತ್ರುಗಳನ್ನು ನಾಶಮಾಡುವ ಶಕ್ತಿ ಹೊಂದಿದ್ಧಾಳೆಂದು ತಿಳಿಸಿದರು. ಹೈದರಾಲಿನ ಸೇನೆ ಒನಕೆ ಓಬವ್ವ ಕಿಂಡಿಯ ಮೂಲಕ ಚಿತ್ರದುರ್ಗ ಕೋಟೆಯನ್ನು ಅಕ್ರಮವಾಗಿ ಪ್ರವೇಶಿಸುವ ಸಂದರ್ಭದಲ್ಲಿ ಒನಕೆ ಓಬವ್ವ ದುರ್ಗಿಯ ಅವತಾರವನ್ನು ತಾಳಿ ಶತ್ರುಗಳ ಮಾರಣಹೋಮ ಮಾಡಿದ್ಧಾಳೆ.



ಚಿತ್ರದುರ್ಗ ಕೋಟೆ ಇರುವಷ್ಟು ಕಾಲವೂ ಒನಕೆ ಓಬವ್ವಳ ಹೆಸರು ಅಜರಾಮರ. ಛಲವಾದಿ ಮಹಾಸಭಾ ಒನಕೆ ಓಬವ್ವಳ ವೃತ್ತ, ಸಮುದಾಯ ಭವನ ನಿರ್ಮಾಣಕ್ಕೆ ಮನವಿ ನೀಡಿದ್ದಾರೆ. ನಿವೇಶನ ಲಭ್ಯವಿದ್ದರೆ ಕೂಡಲೇ ಸಮುದಾಯ ನಿರ್ಮಾಣಕ್ಕೆ ತಮ್ಮ ಅನುದಾನದಲ್ಲಿ ಆರ್ಥಿಕ ನೆರವು ನೀಡುವ ಭರವಸೆ ನೀಡಿದರು. ಓಬವ್ವ ವೃತ್ತ ನಾಮಕಾರಣದ ಬಗ್ಗೆ ಮುಂದಿನ ನಗರಸಭೆ ಸಭೆಯಲ್ಲಿ ಚರ್ಚಿಸಿ ತೀರ್ಮಾಸಲಾಗುವುದು ಎಂದರು.  

ಪ್ರಾಸ್ತಾವಿಕವಾಗಿ ಮಾತನಾಡಿದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ, ತಹಶೀಲ್ಧಾರ್ ರೇಹಾನ್‌ಪಾಷ, ವೀರವನಿತೆ ಒನಕೆ ಓಬವ್ವಳಾ ಜಯಂತಿ ಮಹೋತ್ಸವವನ್ನು ಆಚರಿಸಲು ಸಂತೋಷವೆನ್ನಿಸುತ್ತದೆ. ತನ್ನ ಪತಿ ಊಟಮಾಡುವ ಸಂದರ್ಭದಲ್ಲಿ ಶತ್ರುಗಳು ಕೋಟೆ ಒಳಗೆಪ್ರವೇಶಿಸಿದಾಗ ಪತಿಗೆ ತೊಂದರೆಯಾಗಬಾರದು ಎಂದು ಬಾವಿಸಿ ತಾನೇ ಒನಕೆ ಹಿಡಿದು ಶತ್ರುಗಳನ್ನು ಸದೆಬಡಿದಿದ್ದಾಳೆ. ಒನಕೆ ಓಬವ್ವ ಶೌರ್ಯವನ್ನು ಕಂಡ ಪತಿ ದಿಗ್ಬ್ರಾಂತಾನಾಗಿದ್ದಾನೆ. ಪತ್ನಿ ಒನಕೆ ಓಬವ್ವಳಾ ಸೂಚನೆಯಂತೆ ಕಹಳೆ ಊದಿ ಸೈನ್ಯವನ್ನು ಜಾಗೃತಗೊಳಿಸಿ ಶತ್ರುಗಳ ದಾಳಿಯನ್ನು ತಡೆಯುವಲ್ಲಿ ಯಶಸ್ವಿಯಾದ. ಒನಕೆ ಓಬವ್ವ ಶೌರ್ಯ ಮಾದರಿ ಎಂದರು.

ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷೆ ವಾಣಿಶಿವರಾಮ್ ಮಾತನಾಡಿ, ಒನಕೆ ಓಬವ್ವಳ ಹೋರಾಟ ಮತ್ತು ಶೌರ್ಯ ಕೇವಲ ಚಿತ್ರದುರ್ಗದ ಕೋಟೆಗೆ ಮಾತ್ರ ಸೀಮಿತವಲ್ಲ. ಸಮಯೋಚಿತವಾಗಿ ಶತ್ರುಗಳೊಂದಿಗೆ ಹೋರಾಟ ನಡೆಸಿ ಚಿತ್ರದುರ್ಗ ಅರಸರ ಗೌರವವನ್ನು ಕಾಪಾಡುವಲ್ಲಿ ಒನಕೆ ಓಬವ್ವ ಯಶಸ್ವಿಯಾಗಿದ್ಧಾಳೆ. ತನ್ನಲ್ಲಿ ಅಡಗಿದ್ದ ದೈರ್ಯ ಮತ್ತು ಸಾಹಸವನ್ನು ತೋರಿಸಿ ಶತ್ರುಗಳಿಗೆ ಸಿಂಹಸ್ವಪ್ನವಾಗಿ ಕಾಡಿದ್ಧಾಳೆ. ಛಲವಾದಿ iಹಾಸಭಾ ಒನಕೆ ಓಬವ್ವಳ ಚರಿತ್ರೆಯನ್ನು ನಾಡಿನೆಲ್ಲೆಡೆ  ಪ್ರಚಾರ ಮಾಡುವ ಕೆಲಸವನ್ನು ಮಾಡುತ್ತಿದೆ ಎಂದರು.

ನಿವೃತ್ತ ಪ್ರಾಧ್ಯಾಪಕ ಶ್ರೀರಾಮರೆಡ್ಡಿ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ  ಸಮಾಜದ ಮುಖಂಡರಾದ ಸಂಘದ ಅಧ್ಯಕ್ಷ ಜಯರಾiಪ್ಪ, ಓಂಕಾರಮೂರ್ತಿ, ಜಿ.ಮಂಜುನಾಥ, ಕೆ.ದೇವರಾಜು, ಮಂಜುಳಮ್ಮ, ಟಿ.ನಿಜಲಿಂಗಪ್ಪ, ಮಂಜುನಾಥ ಮುಂತಾದವರು ಮಾತನಾಡಿದರು.

ಸಿದ್ದಯ್ಯನಕೋಟೆಯ ಬಸವಲಿಂಗಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಒನಕೆ ಓಬವ್ವಳಾ ಹೋರಾಟದ ಫಲದಿಂದ ಚಿತ್ರದುರ್ಗ ಕೋಟೆ ಶತ್ರುಗಳ ದಾಳಿಯಿಂದ ಪಾರಾಗಿದೆ. ಎಂದಿಗೂ  ಯುದ್ದವನ್ನು ಬಯಸದ ಚಿತ್ರದುರ್ಗದ ಮದಕರಿನಾಯಕ ಅರಸರಿಗೆ ಶತ್ರುಗಳ ದಾಳಿಯಿಂದ ವಿಚಲಿತರಾಗಿದ್ದರು. ಕೋಟೆಒಳಗೆ ನುಗ್ಗಿದ ಶತ್ರುಗಳ ಸಂಹಾರವನ್ನು ಜಾಣ್ಮೆಯಿಂದ ಮಾಡಿದ ಒನಕೆ ಓಬವ್ವಳ ಶೌರ್ಯವನ್ನು ಕಂಡು ದಂಗಾದರು.

ಚಿತ್ರದುರ್ಗದ ಗಂಡುಮೆಟ್ಟಿನ ನಾಡಿನಲ್ಲಿ ಇಂತಹ ವೀರಮಹಿಳೆ ಜನಿಸಿದ್ದು ಸಂತಸದ ವಿಷಯವೆಂದರು. ಛಲವಾದಿ ಮಹಾಸಭಾ ಇಂತಹ ಮಹಾನ್‌ಶಕ್ತಿಯನ್ನು ಪಡೆದಿದ್ದು ಮುಂದಿನ ದಿನಗಳಲ್ಲೂ ತಮ್ಮ ಯಾವುದೇ ಸಮಸ್ಯೆ ಇದ್ದರೂ ಒನಕೆ ಓಬವ್ವಳತೆ ಹೋರಾಟ ನಡೆಸಬೇಕು. ವಿಶೇಷವಾಗಿ ಈ ಸಮುದಾಯ ತಮ್ಮ ಮಕ್ಕಳನ್ನು ತಾಂತ್ರಿಕ, ವೈಜ್ಞಾನಿಕ ಶಿಕ್ಷಣ ಕೊಡಿಸುವಲ್ಲಿ ಮುಂದಾಗಬೇಕು.ಕಾರಣ ಗುಣಾತ್ಮಕ ಶಿಕ್ಷಣದಿಂದ ಮಾತ್ರ ನಿಮ್ಮೆಲ್ಲರ ಬದುಕು ಪರಿವರ್ತನೆಹೊಂದಲು ಸಾಧ್ಯವಿದೆ ಎಂದರು.

ಗೌರವಾಧ್ಯಕ್ಷ ಸಿದ್ದಾಪುರದ ಹನುಮಂತಪ್ಪ, ಎನ್.ಬಿ.ಓಬಣ್ಣ, ಎಚ್.ತಿಪ್ಪೇಸ್ವಾಮಿ, ಡಿ.ನರಸಿಂಹಮೂರ್ತಿ, ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಜಿ.ಆರ್.ದಿನಕರ, ಮಹಾಸಭಾದ ಅಧ್ಯಕ್ಷ ರಾಮಕೃಷ್ಣಪ್ಪ, ಕುಶ, ರವೀಂದ್ರ, ಪರಮೇಶ್ವರಪ್ಪ, ಜಯವೀರಚಾರಿ, ಸಿ.ಟಿ.ಶ್ರೀನಿವಾಸ್, ಟಿ.ಮಲ್ಲಿಕಾರ್ಜುನ್, ಎಂ.ಜೆ.ರಾಘವೇಂದ್ರ, ಚಳ್ಳಕೆರೆಯಪ್ಪ, ಕೆ.ವೀರಭದ್ರಪ್ಪ, ಜಿಲ್ಲಾ ಕೆಡಿಪಿ ಸದಸ್ಯ ಓ.ರಂಗಸ್ವಾಮಿ, ನಾಮಿನಿಸದಸ್ಯರಾದ ಅನ್ವರ್‌ಮಾಸ್ಟರ್, ಇಒ.ಎಚ್.ಶಶಿಧರ, ಬಿಇಒ ಕೆ.ಎಸ್.ಸುರೇಶ್, ಬಿಸಿಎಂ ಅಧಿಕಾರಿ ರಮೇಶ್, ಎಸ್ಟಿ ಕಲ್ಯಾಣಾಧಿಕಾರಿ ಎಂ.ಟಿ.ಶಿವರಾಜ್, ಸಮಾಜಕಲ್ಯಾಣಾಧಿಕಾರಿ ದೇವಲನಾಯ್ಕ ಮುಂತಾದವರು ಉಪಸ್ಥಿತರಿದ್ದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು : ಜಿಲ್ಲಾ ಉಸ್ತುವಾರಿ ಸಚಿವರು ಟಿ ರಘುಮೂರ್ತಿಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಕಾಡುಗೊಲ್ಲರ ಬದುಕು - ಸಣ್ಣಚಿತ್ತಯ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಹಂದರಗಂಭ ಪೂಜೆನೂತನ ಬಸ್ ನಿಲ್ದಾಣ ಲೋಕಾರ್ಪಣೆ ನೆರವೇರಿಸಿದ ಸಚಿವ ಟಿ.ರಘುಮೂರ್ತಿ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳ ಉದ್ಘಾಟನೆಬೆಳೆ ಸಮೀಕ್ಷೆದಾರರ ಬೇಡಿಕೆ ಈಡೇರಿಕೆಗೆ ಕ್ರಮ: ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಚಿವ ರಘುಮೂರ್ತಿದೇವಾಲಯ ನಿರ್ಮಾಣ ಪವಿತ್ರ ಕಾರ್ಯ - ಟಿ. ರಘುಮೂರ್ತಿಡಾ.ಹೇಮಂತರಾಜು ರವರ ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನ ಲೋಕಾರ್ಪಣೆಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತದ ಶೂಟಿಂಗ್ ತಾರೆ ಮನು ಭಾಕರ್ಪ್ಯಾರಾ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಕೆ.ಎಸ್. ಶಿಲ್ಪಾ