LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾತ್ರಿ ಶುಭಾಂಶು ಶುಕ್ಲಾ ಜೊತೆಗೆ ಮೋದಿ ಸಂವಾದ

ನವದೆಹಲಿ : ಆಕ್ಸಿಯಂ-4 ಮಿಷನ್‌ ಕಾರ್ಯಾಚರಣೆಯ ಭಾಗವಾಗಿ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿರುವ ಭಾರತೀಯ ವಾಯುಪಡೆಯ (IAF) ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದು ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಿದ್ದಾರೆ.

ಸುಮಾರು 18 ನಿಮಿಷಗಳ ಕಾಲ ಮಾತುಕತೆ ನಡೆಸಿದ ಪ್ರಧಾನಿ ಮೋದಿ-ಶುಕ್ಲಾ, ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಮೊದಲಿಗೆ ಮಾತು ಆರಂಭಿಸಿದ ಪ್ರಧಾನಿ ಮೋದಿ ನನ್ನ ಮಾತಿನ ಜೊತೆಗೆ 140 ಕೋಟಿ ಭಾರತೀಯರ ಭಾವನೆ ಇದೆ. ಅವರ ಉತ್ಸಾಹ ಮತ್ತು ಕುತೂಹಲವೂ ಇದೆ ಎಂದು ಹೇಳಿದರು.

ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಶುಕ್ಲಾ, ದೇಶದ ಜನರು ಪ್ರೀತಿ, ಆರ್ಶಿವಾದದಿಂದ ನಾನು ಚೆನ್ನಾಗಿದ್ದೇನೆ. ಈ ಬಾಹ್ಯಕಾಶ ಯಾತ್ರೆ ನನ್ನದಲ್ಲ, ನನ್ನ ದೇಶದು. ನಿಮ್ಮ ನೇತೃತ್ವದ ಸರ್ಕಾರ ಕನಸುಗಳನ್ನು ಸಹಕಾರ ನೀಡಲು ಅವಕಾಶ ನೀಡುತ್ತದೆ ಎಂದು ಉತ್ತರಿಸಿದರು.

ಸದ್ಯ ಶುಕ್ಲಾ ಐಎಸ್‌ಎಸ್‌ಗೆ ಮೂರು ರೀತಿ ಭಾರತೀಯ ಭಕ್ಷ್ಯಗಳನ್ನು ಕೊಂಡೊಯ್ದಿದ್ದಾರೆ. ಮ್ಯಾಂಗೋ ಜ್ಯೂಸ್‌, ಹೆಸರು ಬೇಳೆ ಹಲ್ವಾ ಹಾಗೂ ಕ್ಯಾರೆಟ್‌ ಹಲ್ವಾ ಕೊಂಡೊಯ್ದಿದ್ದಾರೆ. ಇದನ್ನು ನೆನಪಿಸಿದ ಪ್ರಧಾನಿ ಮೋದಿ ಹಲ್ವಾ ತೆಗೆದುಕೊಂಡು ಹೊಗಿದ್ದೀರಿ, ನಿಮ್ಮ ಸ್ನೇಹಿತರಿಗೆ ನೀಡಿದ್ರಾ? ಅಂತ ಕೇಳಿದ್ರು, ಇದಕ್ಕೆ ವಿನಯದಿಂದಲೇ ಉತ್ತರಿಸಿದ ಶುಕ್ಲಾ, ಹೌದು ನಾನು ಹಲ್ವಾ, ಮಾವಿನ ರಸ (ಮ್ಯಾಂಗೋ ಜ್ಯೂಸ್‌), ಹೆಸರು ಬೇಳೆ ಹಲ್ವಾ ತಂದಿದ್ದೇನೆ. ಇಲ್ಲಿ ಎಲ್ರೂ ಒಟ್ಟಾಗಿ ಅದನ್ನ ತಿಂದ್ವಿ, ಎಲ್ಲರೂ ತುಂಬಾ ಖುಷಿ ಪಟ್ಟರು ಎಂದರು.

ಭಾರತ ಬಹಳ ಅದ್ಭುತವಾಗಿ ಕಾಣುತ್ತೆ. ಭೂಮಿಯ ಯಾವ ಭಾಗದ ಮೇಲೆ ಪ್ರಯಾಣ ಮಾಡ್ತಿದ್ದೀರಿ? ಅಂತ ಮೋದಿ ಕೇಳಿದ್ದಕ್ಕೆ ಈ ಕ್ಷಣದಲ್ಲಿ ನಿರ್ದಿಷ್ಟವಾಗಿ ಹೇಳಲು ಸಾಧ್ಯವಾಗ್ತಿಲ್ಲ. ಆದರೆ ಈಗ ಪ್ರತಿ ಗಂಟೆಗೆ 18,000 ವೇಗದಲ್ಲಿ ಪ್ರಯಾಣ ಮಾಡುತ್ತಿದ್ದೇವೆ. 16 ಬಾರಿ ಸೂರ್ಯೋದಯ, ಸೂರ್ಯಾಸ್ತ ನೋಡುತ್ತಿದ್ದೇವೆ. ಭೂಮಿಗೆ ಯಾವುದೇ ಗಡಿ ಕಾಣುವುದಿಲ್ಲ. ಭಾರತ ಮ್ಯಾಪ್‌ನಲ್ಲಿ ನೋಡುವುದಕ್ಕಿಂತ ದೊಡ್ಡದಾಗಿ ಕಾಣುತ್ತೆ. ಭಾರತ ಬಹಳ ಅದ್ಭುತವಾಗಿ ಕಾಣುತ್ತೆ. ರಾಜ್ಯ ದೇಶಗಳ ಗಡಿ ಕಾಣಲ್ಲ ಅಂತ ತಮಗಾದ ಅನುಭವ ಹಂಚಿಕೊಂಡರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026