LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

'ಭಾರತದ ನ್ಯಾಯಯುತವಾದ ನೀರಿನ ಪಾಲನ್ನು ಪಾಕ್ ಪಡೆಯುವುದಿಲ್ಲ'- ಮೋದಿ

ಬಿಕಾನೇರ್ : "ನನ್ನ ರಕ್ತನಾಳಗಳಲ್ಲಿ ಹರಿಯುತ್ತಿರುವುದು ರಕ್ತವಲ್ಲ, ಬಿಸಿ ಸಿಂಧೂರ. ಈಗ ಮನಸ್ಸು ಶಾಂತವಾಗಿದೆ ಆದರೆ ರಕ್ತ ಕುದಿಯುತ್ತಿದೆ. ಭಾರತದ ನ್ಯಾಯಯುತವಾದ ನೀರಿನ ಪಾಲನ್ನು ಪಾಕಿಸ್ತಾನ ಪಡೆಯುವುದಿಲ್ಲ" ಎಂದು ಪ್ರಧಾನಿ ನರೇಂದ್ರ ಮೋದಿ ಪಹಲ್ಗಾಮ್ ದಾಳಿಯನ್ನು ನೆನಪಿಸಿಕೊಂಡು ಆಕ್ರೋಶ ಹೊರಹಾಕಿದ್ದಾರೆ.

ಗುರುವಾರ ರಾಜಸ್ಥಾನದ ಬಿಕಾನೇರ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, "ಕೂದಲಿನಿಂದ ಸಿಂಧೂರವನ್ನು ಅಳಿಸಲು ಬಂಧವರು ಧೂಳಾಗಿ ಹೋದರು. ಪಾಕಿಸ್ತಾನದೊಂದಿಗೆ ಯಾವುದೇ ವ್ಯಾಪಾರ ಅಥವಾ ಮಾತುಕತೆ ಇರುವುದಿಲ್ಲ, ಪ್ರತಿಯೊಂದು ಭಯೋತ್ಪಾದಕ ದಾಳಿಗೂ ಅವರು ಬೆಲೆ ತೆರಬೇಕಾಗುತ್ತದೆ. 140 ಕೋಟಿ ದೇಶವಾಸಿಗಳು ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತೊಗೆಯಲು ಸಂಕಲ್ಪ ಮಾಡಿದ್ದರು. ನಮ್ಮ ಸರ್ಕಾರ ಮೂರೂ ಪಡೆಗಳಿಗೂ ಮುಕ್ತ ಸ್ವಾತಂತ್ರ‍್ಯ ನೀಡಿತು. ಮೂರು ಪಡೆಗಳು ಒಟ್ಟಾಗಿ ಪಾಕಿಸ್ತಾನವನ್ನು ಶರಣಾಗುವಂತೆ ಒತ್ತಾಯಿಸಿದವು" ಎಂದರು.

"ಏಪ್ರಿಲ್ 22 ರಂದು ನಡೆದ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು 22 ನಿಮಿಷಗಳಲ್ಲಿ ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿತು. ಕುಂಕುಮವು ಗನ್‌ಪೌಡರ್ ಆಗಿ ಬದಲಾದಾಗ ಏನಾಗುತ್ತದೆ ಎಂದು ಎಲ್ಲರೂ ನೋಡಿದ್ದಾರೆ. ನನ್ನ ದೇಶವಾಸಿಗಳಿಗೆ ನಾನು ಹೇಳುವುದೇನೆಂದರೆ, ಸಿಂಧೂರವನ್ನು ಒರೆಸಲು ಬಂದವರು ಧೂಳಿನೊಂದಿಗೆ ಬೆರೆತುಹೋಗಿದ್ದಾರೆ. ಭಾರತದಲ್ಲಿ ಚೆಲ್ಲಲ್ಪಟ್ಟ ಪ್ರತಿಯೊಂದು ರಕ್ತದ ಹನಿಗೂ ಪ್ರತೀಕಾರ ತೀರಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ತಮ್ಮ ಶಸ್ತ್ರಾಸ್ತ್ರಗಳ ಬಗ್ಗೆ ಹೆಮ್ಮೆಪಡುತ್ತಿದ್ದವರು ಇಂದು ಅವಶೇಷಗಳ ರಾಶಿಯಲ್ಲಿ ಹೂತುಹೋಗಿದ್ದಾರೆ" ಎಂದು ತಿಳಿಸಿದರು.

"ಭಾರತದ ವಿರುದ್ಧ ನೇರ ಯುದ್ಧದಲ್ಲಿ ಪಾಕಿಸ್ತಾನ ಎಂದಿಗೂ ಗೆಲ್ಲಲು ಸಾಧ್ಯವಿಲ್ಲ. ಅವರು ಹೋರಾಡಿದಾಗಲೆಲ್ಲಾ ಸೋಲನ್ನು ಎದುರಿಸಿದ್ದಾರೆ. ಇನ್ನೇನಿದ್ದರೂ ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರ ಚರ್ಚೆ. ಭಾರತದ ರಕ್ತದೊಂದಿಗೆ ಆಟವಾಡಿದ್ದಕ್ಕೆ ಪಾಕಿಸ್ತಾನ ಬೆಲೆ ತೆರಬೇಕಾಗುತ್ತದೆ" ಎಂದು ವಾಗ್ದಾಳಿ ನಡೆಸಿದರು.

"ಅದಕ್ಕಾಗಿಯೇ ಪಾಕಿಸ್ತಾನವು ಭಾರತದ ವಿರುದ್ಧ ಹೋರಾಡಲು ಭಯೋತ್ಪಾದನೆಯನ್ನು ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಸ್ವಾತಂತ್ರ‍್ಯದ ನಂತರ ಕಳೆದ ಹಲವಾರು ದಶಕಗಳಿಂದ ಇದು ನಡೆಯುತ್ತಿದೆ. ಪಾಕಿಸ್ತಾನ ಭಾರತದಲ್ಲಿ ಭಯೋತ್ಪಾದನೆಯನ್ನು ಹರಡುತ್ತಿತ್ತು, ಮುಗ್ಧ ಜನರನ್ನು ಕೊಲ್ಲುತ್ತಿತ್ತು, ಭಯದ ವಾತಾವರಣವನ್ನು ಸೃಷ್ಟಿಸುತ್ತಿತ್ತು ಆದರೆ ಪಾಕಿಸ್ತಾನ ಒಂದು ವಿಷಯವನ್ನು ಮರೆತಿದೆ" ಎಂದು ಹೇಳಿದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST