Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ವಿಸ್ತರಣೆಗೆ ಮೋದಿ ಪಟ್ಟು

 

ದೆಹಲಿ:
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ವಿಸ್ತರಿಸಬೇಕು ಮತ್ತು ಭಾರತಕ್ಕೆ ಅದರಲ್ಲಿ ಕಾಯಂ ಸದಸ್ಯತ್ವ ನೀಡಬೇಕು ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಬಲ ಹಕ್ಕೊತ್ತಾಯ ಮಂಡಿಸುತ್ತಾ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಇದೀಗ ಜಿ20 ಸಮಾವೇಶದಲ್ಲೂ ಅದೇ ಪ್ರಬಲ ವಾದ ಮಂಡಿಸಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೇರಿದಂತೆ ಎಲ್ಲಾ ಜಾಗತಿಕ ಸಂಸ್ಥೆಗಳನ್ನೂ ವಿಸ್ತರಿಸಬೇಕು. ಆ ಸಂಸ್ಥೆಗಳು ಜಗತ್ತಿನ ಹೊಸ ವಾಸ್ತವಗಳನ್ನು ಪ್ರತಿಫಲಿಸಬೇಕು. ಕಾಲದೊಂದಿಗೆ ಬದಲಾವಣೆ ಆಗದವರು ಪ್ರಸ್ತುತತೆ ಕಳೆದುಕೊಳ್ಳುತ್ತಾರೆ ಎಂಬುದು ಪ್ರಕೃತಿ ನಿಯಮ ಎಂದು ಸೂಚ್ಯವಾಗಿ ಹೇಳಿದ್ದಾರೆ.

ಜಿ20 ಶೃಂಗದ ಕೊನೆಯ ದಿನ 'ಒಂದು ಭವಿಷ್ಯ ಕಾರ್ಯಾಗಾರದಲ್ಲಿ ಭಾನುವಾರ ಮಾತನಾಡಿದ ಪ್ರಧಾನಿ, ಜಗತ್ತಿಗೆ ಉತ್ತಮ ಭವಿಷ್ಯ ದೊರಕಿಸಿಕೊಡಲು ಜಾಗತಿಕ ಸಂಸ್ಥೆಗಳು ತಮ್ಮನ್ನು ತಾವೇ ಸುಧಾರಣೆ ಮಾಡಿಕೊಳ್ಳಬೇಕು. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೇರಿದಂತೆ ವಿವಿಧ ಜಾಗತಿಕ ಸಂಸ್ಥೆಗಳು ಬದಲಾಗಬೇಕು. ವಿಶ್ವಸಂಸ್ಥೆ ಜನಿಸಿದಾಗ ಜಗತ್ತು ಇವತ್ತಿಗಿಂತ ಸಂಪೂರ್ಣ ಭಿನ್ನವಾಗಿತ್ತು. ಕೇವಲ 51 ದೇಶಗಳು ಅದರ ಸದಸ್ಯರಾಗಿದ್ದವು. ಇಂದು 200 ದೇಶಗಳು ಸದಸ್ಯರಾಗಿವೆ. ಆದರೂ ಭದ್ರತಾ ಮಂಡಳಿಯಲ್ಲಿ ಕೇವಲ ಐದು ಸದಸ್ಯ ರಾಷ್ಟ್ರಗಳು ಮಾತ್ರ ಇವೆ. ಅಂದಿನಿಂದ ಈವರೆಗೆ ಜಗತ್ತು ಪ್ರತಿಯೊಂದು ವಿಷಯದಲ್ಲೂ ಬದಲಾಗಿದೆ. ಸಾರಿಗೆ , ಸಂಪರ್ಕ, ಸಂವಹನ, ಆರೋಗ್ಯ, ಶಿಕ್ಷಣ ಹೀಗೆ ಪ್ರತಿಯೊಂದು ರಂಗವೂ ರೂಪಾಂತರಗೊಂಡಿದೆ. ಜಾಗತಿಕ ಸಂಸ್ಥೆಗಳಲ್ಲಿ ಈ ಹೊಸ ಬದಲಾವಣೆಗಳು ಪ್ರತಿಫಲಿತವಾಗಬೇಕು ಎಂದು ಹೇಳಿದರು.

ಭಾರತವು ಆಫ್ರಿಕನ್‌ ಒಕ್ಕೂಟವನ್ನು ಜಿ20ಗೆ ಸೇರಿಸಿಕೊಳ್ಳಬೇಕೆಂದು ಪ್ರಸ್ತಾಪಿಸಿತು. ಕೊನೆಗೆ ಜಿ20ಗೆ ಆಫ್ರಿಕನ್‌ ಒಕ್ಕೂಟವನ್ನು ಸೇರಿಸಿಕೊಳ್ಳಲು ಶನಿವಾರ ನಿರ್ಧಾರ ಕೈಗೊಳ್ಳಲಾಗಿದೆ. ವಿಶ್ವಸಂಸ್ಥೆ, ಬಹುರಾಷ್ಟ್ರೀಯ ಅಭಿವೃದ್ಧಿ ಬ್ಯಾಂಕುಗಳನ್ನು ವಿಸ್ತರಣೆ ಮಾಡಬೇಕು. ತಕ್ಷಣ ಈ ಕೆಲಸ ಆಗಬೇಕು ಎಂದು ಮೋದಿ ಆಗ್ರಹಿಸಿದರು.

ನಂತರ ಜಿ20 ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮೋದಿ, ಮುಂದಿನ ಜಿ20 ಅಧ್ಯಕ್ಷತೆ ವಹಿಸಿಕೊಳ್ಳಲಿರುವ ಬ್ರೆಜಿಲ್‌ಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ. ಬ್ರೆಜಿಲ್‌ನ ಬದ್ಧತೆ, ದೂರದೃಷ್ಟಿ ಹಾಗೂ ಜಾಗತಿಕ ಸಮೃದ್ಧಿಯ ಕುರಿತು ಆ ದೇಶ ಹೊಂದಿರುವ ಆಶಯವು ಜಿ20ಯನ್ನು ಇನ್ನಷ್ಟು ಬಲಗೊಳಿಸುತ್ತದೆ ಎಂಬ ವಿಶ್ವಾಸ ನಮಗಿದೆ. ಕಳೆದ ಎರಡು ದಿನಗಳಲ್ಲಿ ಕೈಗೊಂಡ ನಿರ್ಧಾರಗಳನ್ನು ಜಾರಿಗೊಳಿಸಲು ಎಲ್ಲರೂ ಒಟ್ಟಿಗೇ ಕೆಲಸ ಮಾಡೋಣ. ಅದಕ್ಕಾಗಿ ಈ ವರ್ಷದ ನವೆಂಬರ್‌ ಅಂತ್ಯದಲ್ಲಿ ಇನ್ನೊಂದು ಜಿ20 ವರ್ಚುವಲ್‌ ಸಮಾವೇಶ ಆಯೋಜಿಸೋಣ ಎಂದು ಹೇಳಿದ ಅವರು, ಇದರೊಂದಿಗೆ ಜಿ20 ಶೃಂಗ ಮುಕ್ತಾಯವಾಗುತ್ತದೆ’ಎಂದು ಘೋಷಿಸಿದರು.

 

ಕ್ರಿಪ್ಟೋಕರೆನ್ಸಿ ಮತ್ತು ಸೈಬರ್‌ ಭದ್ರತೆಯ ವಿಷಯಗಳು ವರ್ತಮಾನ ಮತ್ತು ಭವಿಷ್ಯದಲ್ಲಿ ಜಗತ್ತಿನ ಮೇಲೆ ತೀವ್ರ ಪರಿಣಾಮ ಬೀರಲಿವೆ. ಇವುಗಳನ್ನು ನಿಯಂತ್ರಿಸಲು ಸರಿಯಾದ ದಾರಿಯನ್ನು ಜಗತ್ತು ಕಂಡುಕೊಳ್ಳಬೇಕು. ಸೈಬರ್‌ಸ್ಪೇಸ್‌ನಲ್ಲೇ ಭಯೋತ್ಪಾದನೆಗೆ ಹಣ ಲಭಿಸುತ್ತಿದೆ. ಅದನ್ನು ತಡೆಯಬೇಕು. ಎಲ್ಲಾ ದೇಶಕ್ಕೂ ಇದು ಬಹಳ ಮುಖ್ಯವಾದ ವಿಷಯ. ಎಲ್ಲಾ ದೇಶಗಳು ಒಟ್ಟಾಗಿ ಭದ್ರತೆ ಮತ್ತು ಸೂಕ್ಷ್ಮ ವಿಷಯಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಂಡಾಗ ‘ಒಂದು ಭವಿಷ್ಯ’ ಭದ್ರವಾಗಲಿದೆ ಎಂದು ಮೋದಿ ಅಭಿಪ್ರಾಯಪಟ್ಟರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ