LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕೇರಳ ಕರಾವಳಿಗೆ ವಾಡಿಕೆ ಮೊದಲೇ ಮುಂಗಾರು ಪ್ರವೇಶ

ನವದೆಹಲಿ: ವಾಡಿಕೆಗೂ ಮೊದಲೇ ಕೇರಳ ಕರಾವಳಿಗೆ ಮುಂಗಾರು ಪ್ರವೇಶವಾಗಿದೆ. ಭಾರತೀಯ ಹವಾಮಾನ ಇಲಾಖೆ ಮೇ 27ಕ್ಕೆ ಮುಂಗಾರು ಮಾರುತಗಳು ಕೇರಳ ಕರಾವಳಿ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹೇಳಿತ್ತು. ಆದರೆ 3 ದಿನದ ಮೊದಲೇ ಮುಂಗಾರು ಪ್ರವೇಶವಾಗಿದ್ದು ರೈತರು ಮೊಗದಲ್ಲಿ ಖುಷಿ ತಂದಿದೆ.

ಸಾಮಾನ್ಯವಾಗಿ ಭಾರತದಲ್ಲಿ ಜೂನ್ 1 ರಂದು ಮುಂಗಾರು ಮಳೆ ಭಾರತವನ್ನು ಪ್ರವೇಶಿಸುತ್ತದೆ. ಆದರೆ ಈ ಬಾರಿ ನೈರುತ್ಯ ಮಾನ್ಸೂನ್ ಕೇರಳದಲ್ಲಿ ಸಾಮಾನ್ಯ ದಿನಾಂಕಕ್ಕಿಂತ 8 ದಿನಗಳು ಮುಂಚಿತವಾಗಿ ಪ್ರಾರಂಭವಾಗಿರುವುದು ವಿಶೇಷ.

ಈ ಹಿಂದೆ 2009 ರಲ್ಲಿ ಮೇ 23ಕ್ಕೆ ಮುಂಗಾರು ಮಳೆ ಪ್ರವೇಶವಾಗಿತ್ತು. 2023 ರಲ್ಲಿ ಜೂನ್‌ 9, 2024ರಲ್ಲಿ ಮೇ 30 ರಂದು ಮುಂಗಾರು ಪ್ರವೇಶವಾಗಿತ್ತು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST