LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕರ್ನಾಟಕದಲ್ಲಿ ಕಳೆದ 5 ವರ್ಷದಲ್ಲಿ 3,000ಕ್ಕೂ ಅಧಿಕ ತಾಯಂದಿರ ಸಾವು: ಸಿಎಂಒ

ಬೆಂಗಳೂರು: ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ 3,350ಕ್ಕೂ ಅಧಿಕ ತಾಯಂದಿರ ಸಾವುಗಳು ಸಂಭವಿಸಿವೆ ಎಂದು ಮುಖ್ಯಮಂತ್ರಿಗಳ ಕಚೇರಿ(ಸಿಎಂಒ) ತಿಳಿಸಿದೆ. ಸರ್ಕಾರ ನೀಡಿದ ಅಂಕಿ ಅಂಶಗಳ ಅನುಸಾರ ನಮ್ಮ ಅವಧಿಯಲ್ಲಿ ಸಾವುನೋವು ಇಳಿಮುಖವಾಗಿದೆ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಇತ್ತೀಚಿನ ತಾಯಂದಿರ ಸರಣಿ ಸಾವಿನ ಕುರಿತು ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ತೀವ್ರ ವಾಗ್ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಕಚೇರಿ ಸೋಮವಾರ ತಾಯಂದಿರ ಸಾವಿನ ಬಗ್ಗೆ ಅಂಕಿ- ಅಂಶಗಳನ್ನು ಬಿಡುಗಡೆ ಮಾಡಿದೆ.

ಈ ಅಂಕಿ-ಅಂಶಗಳ ಅನುಸಾರ, ಕಳೆದ 5 ವರ್ಷಗಳಲ್ಲಿ ಒಟ್ಟು 3,364 ತಾಯಂದಿರು ಸಾವನ್ನಪ್ಪಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಕೋವಿಡ್-19 ಸಮಯದಲ್ಲಿ ಸಂಭವಿಸಿದ ಅತಿ ಹೆಚ್ಚು ಬಾಣಂತಿಯರು ಮೃತಪಟ್ಟಿದ್ದಾರೆ ಎಂದು ಅಂಕಿ-ಅಂಶಗಳನ್ನು ಬಹಿರಂಗಪಡಿಸಿದೆ.

2019-20 ರಲ್ಲಿ, 662 ತಾಯಂದಿರ ಸಾವುಗಳು ವರದಿಯಾಗಿದ್ದು, ನಂತರದ ವರ್ಷದಲ್ಲಿ ಈ ಸಂಖ್ಯೆ 714ಕ್ಕೆ ಸ್ವಲ್ಪ ಏರಿಕೆಯಾಗಿದೆ. ಬಳಿಕ 2021-22 ರಲ್ಲಿ 595 ಬಾಣಂತಿಯರ ಸಾವು, 2022-23 ರಲ್ಲಿ 527 ಮತ್ತು 2023-24 ರಲ್ಲಿ 518 ತಾಯಂದಿರ ಸಾವುಗಳು ದಾಖಲಾಗಿವೆ.

ನವೆಂಬರ್ 2024 ರ ಹೊತ್ತಿಗೆ, ಕರ್ನಾಟಕದಲ್ಲಿ ತಾಯಂದಿರ ಸಾವಿನ ಸಂಖ್ಯೆ 348 ರಷ್ಟಿದೆ. ಮಾಹಿತಿಯ ಪ್ರಕಾರ ಈ ಅವಧಿಯಲ್ಲಿ ಕರ್ನಾಟಕದ ತಾಯಂದಿರ ಮರಣ ಅನುಪಾತವು (ಎಂಎಂಆರ್) ಪ್ರತಿ ಒಂದು ಲಕ್ಷ ಜೀವಂತ ಜನನಗಳಿಗೆ 64 ರಷ್ಟಿದೆ.

ಭಾನುವಾರ, ರಾಜ್ಯ ಸರ್ಕಾರ ಬಳ್ಳಾರಿ ಆಸ್ಪತ್ರೆ ಮತ್ತು ರಾಜ್ಯಾದ್ಯಂತ ಇತರ ಸ್ಥಳಗಳಲ್ಲಿ ತಾಯಂದಿರ ಸಾವಿನ ಕುರಿತು ತನಿಖೆಗಾಗಿ ನಾಲ್ಕು ಸದಸ್ಯರ ಸಮಿತಿಯನ್ನು ರಚನೆ ಮಾಡಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST