LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಉಡುಪಿ: ಮೂವರು ಮಕ್ಕಳೊಂದಿಗೆ ತಾಯಿ ನಾಪತ್ತೆ..!

ಉಡುಪಿ: ಮಹಿಳೆಯೋರ್ವಳು ತನ್ನ ಮೂವರು ಮಕ್ಕಳೊಂದಿಗೆ ಡಿಸೆಂಬರ್ 4 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾದ ಘಟನೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ದೊಡ್ಡನಗುಡ್ಡೆಯಲ್ಲಿರುವ ಪೋಸ್ಟಲ್ ಕ್ವಾಟ್ರಸ್ ನಲ್ಲಿ ನಡೆದಿದೆ.

ನಾಪತ್ತೆಯಾದವರನ್ನು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ದೊಡ್ಡನಗುಡ್ಡೆಯಲ್ಲಿರುವ ಪೋಸ್ಟಲ್ ಕ್ವಾಟ್ರಸ್ ನಲ್ಲಿ ವಾಸವಾಗಿದ್ದ ಲಕ್ಷಮವ್ವ ಕುಮಾರ ಮಾಳವತ್ತರ (30) ಎಂಬ ಮಹಿಳೆಯು ತನ್ನ ಮೂವರು ಮಕ್ಕಳಾದ ಅಪೂರ್ವ (7), ಶ್ರೇಯಾ (5) ಹಾಗೂ ಮನೋಜ್ (2) ಎಂದು ಗುರುತಿಸಲಾಗಿದೆ.

ಕಾಣೆಯಾದವರ ಚಹರೆ: ಲಕ್ಷಮವ್ವ ಕುಮಾರ ಮಾಳವತ್ತರ ಅವರು 5 ಅಡಿ 1 ಇಂಚು ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದು, ಕನ್ನಡ ಹಾಗೂ ಲಮಾಣಿ ಭಾಷೆ ಮಾತನಾಡುತ್ತಾರೆ.

ಅಪೂರ್ವ 3 ಅಡಿ 1 ಇಂಚು ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಭಾಷೆ, ಶ್ರೇಯಾ 3 ಅಡಿ 5 ಇಂಚು ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಹಾಗೂ ಲಮಾಣಿ ಭಾಷೆ ಮತ್ತು ಮನೋಜ್ 2 ಅಡಿ 8 ಇಂಚು ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿರುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳ್ತಂಗಡಿ : ನೇತ್ರಾವತಿ ಬಳಿ ಅರಣ್ಯದಲ್ಲಿ ಎಸ್.ಐ.ಟಿ ತನಿಖೆ ಮುಂದುವರಿಕೆ: ಮುಂದೆ ಜೆಸಿಬಿಯಿಂದ ಕಾರ್ಯಾಚರಣೆಅಶ್ಲೀಲ ಸಂದೇಶ ಕಳುಹಿಸಿದ ದರ್ಶನ್ ಫ್ಯಾನ್ಸ್ ವಿರುದ್ಧ ದೂರು ನೀಡಿದ ರಮ್ಯಾ: ಎಫ್‌ಐಆರ್ ದಾಖಲು‘ಸನ್ಯಾಸಿನಿಯರಿಗಾಗಿ ಪ್ರಾರ್ಥಿಸುತ್ತಿದ್ದೇನೆ, ಅವರಿಗೆ ನ್ಯಾಯ ಬೇಕು’: ರಾಜೀವ್ ಚಂದ್ರಶೇಖರ್'ಪಹಲ್ಗಾಮ್ ದಾಳಿ ಮಾಡಿದ ಮೂವರು ಉಗ್ರರನ್ನು ಎನ್‌ಕೌಂಟರ್‌ ಮಾಡಲಾಗಿದೆ'- ಅಮಿತ್‌ ಶಾ ಘೋಷಣೆಧರ್ಮಸ್ಥಳ ಪ್ರಕರಣವನ್ನು ಎಸ್ ಐಟಿ ಗಂಭೀರವಾಗಿ ಪರಿಗಣಿಸಿದೆ, ತನಿಖೆಯಲ್ಲಿ ಮಧ್ಯಪ್ರವೇಶ ಇಲ್ಲ; ಗೃಹ ಸಚಿವ ಡಾ. ಪರಮೇಶ್ವರ್ ಹೇಳಿಕೆಧರ್ಮಸ್ಥಳ ಪ್ರಕರಣ: ದೂರುದಾರ ಗುರುತಿಸಿದ ಪ್ರದೇಶದಲ್ಲಿ ಮಣ್ಣು ಅಗೆದು ಶೋಧ ಕಾರ್ಯ ಆರಂಭ” ಭಾರತ vs ಪಾಕಿಸ್ತಾನ ಪಂದ್ಯ ನೋಡಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ”: ಅಸಾದುದ್ದೀನ್ ಓವೈಸಿ'ನಿತೀಶ್ ಕುಮಾರ್ ಮತ್ತೆ ಬಿಹಾರದ ಸಿಎಂ ಆಗಲಿದ್ದಾರೆ'- ಚಿರಾಗ್ ಪಾಸ್ವಾನ್ಕೇರಳದ ನರ್ಸ್ ನಿಮಿಷಾ ಪ್ರಿಯಾ ಮರಣದಂಡನೆ ಸಂಪೂರ್ಣವಾಗಿ ರದ್ದುಜಾರ್ಖಂಡ್: ಭೀಕರ ಅಪಘಾತ; ಟ್ರಕ್ ಗೆ ಬಸ್ ಡಿಕ್ಕಿ,18 ಕನ್ವಾರಿಯಾ ಭಕ್ತರ ಮೃತ್ಯು