LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

'ಅರ್ಹತೆ ಇಲ್ಲದೇ ಬಿಪಿಎಲ್ ಕಾರ್ಡ್ ಪಡೆದಿರುವವರ ಮೇಲೆ ದಂಡ ಪ್ರಯೋಗ'- ಮುನಿಯಪ್ಪ

ಬೆಂಗಳೂರು : ಅರ್ಹತೆ ಇಲ್ಲದೇ ಬಿಪಿಎಲ್ ಕಾರ್ಡ್ ಪಡೆದಿರುವವರ ಮೇಲೆ ದಂಡ ಪ್ರಯೋಗಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಅರ್ಹತೆ ಇಲ್ಲದೇ ಇರೋರು ಬಿಪಿಎಲ್ ಕಾರ್ಡ್ ವಾಪಸ್ ಮಾಡಿ ಎಂದು ಸಚಿವ ಮುನಿಯಪ್ಪ ಮಾಹಿತಿ ನೀಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅರ್ಹತೆ ಇಲ್ಲದೇ ಇರೋರು ಸಾಕಷ್ಟು ಜನ ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. ಇವರಿಗೆ ಕಾರ್ಡ್ ವಾಪಸ್ ಕೊಡಲು ಮನವಿ ಮಾಡುತ್ತೇವೆ. ಈ ಸಂಬಂಧ ಇನ್ನೊಂದು ವಾರದಲ್ಲಿ ಜಾಹೀರಾತು ಹೊರಡಿಸುತ್ತೇವೆ. ಮನವಿ ಮಾಡಿದ ಮೇಲೂ ಕಾರ್ಡ್ ವಾಪಸ್ ಕೊಡದೇ ಹೋದರೆ ಬಳಿಕ ದಂಡ ಪ್ರಯೋಗ ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಕಾನೂನಿನಲ್ಲಿ ಅವಕಾಶ ಇರುವ ದಂಡ ಪ್ರಯೋಗ ಮಾಡೋದಾಗಿ ಮುನಿಯಪ್ಪ ಎಚ್ಚರಿಕೆ ನೀಡಿದ್ದಾರೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾರ್ಡ್ ಪರಿಶೀಲನೆ ಪ್ರಾರಂಭ ಮಾಡಲಾಗುತ್ತದೆ. ಮನವಿ ಬಳಿಕವೂ ಕಾರ್ಡ್ ವಾಪಸ್ ಕೊಡದೇ ಹೋದರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪರಿಶೀಲನೆ ಮಾಡಿದ ಬಳಿಕ ಸಿಕ್ಕಿ ಹಾಕಿಕೊಂಡರೆ ದಂಡ ಪ್ರಯೋಗ ಮಾಡಲಾಗುತ್ತದೆ. ಬಿಪಿಎಲ್ ಕಾರ್ಡ್ ಮಾನದಂಡಗಳನ್ನು ಪರಿಷ್ಕರಣೆ ಮಾಡೋ ಬಗ್ಗೆ ವಿಚಾರ ಮಾಡಿ, ಕ್ಯಾಬಿನೆಟ್‌ನಲ್ಲಿ ಈ ಬಗ್ಗೆ ನಿರ್ಧಾರ ಮಾಡೋದಾಗಿ ತಿಳಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇಶ ಕೆಂಪು ಕೋಟೆ ಸ್ಫೋಟ ಪ್ರಕರಣ : ಶಂಕಿತ ಭಯೋತ್ಪಾದಕನ ಗುರುತು ಪತ್ತೆ!ಹಿರಿಯ ಸ್ವಾಮೀಜಿ ಶ್ರೀ ಶ್ರೀ ಚನ್ನಬಸವ ಸ್ವಾಮೀಜಿ ಲಿಂಗೈಕ್ಯ.!ತುಳಸಿ ಗಿಡದ ಮುಂದೆ ದುರ್ಗಾದೇವಿಯ ಫೋಟೋ ಇಟ್ಟು ಈ ಒಂದು ಕೆಲಸವನ್ನು ಮಾಡಿದರೆ ಮನೆಗೆ ರಕ್ಷಣೆ ದೊರೆಯುತ್ತದೆ.ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ನಿಧನಅಮೆರಿಕದ ಕೆಲಸವನ್ನು ತೊರೆದು ನಿಹಾರಿಕಾ ಐಪಿಎಸ್ ಅಧಿಕಾರಿಯಾದ ಕಥೆಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿದವರಿಗೆ ಸ್ವಲ್ಪ ಖುಷಿ ಸುದ್ದಿ.!ದೆಹಲಿ ಕಾರ್ ಸ್ಪೋಟ: ಪೊಲೀಸರು ಯುಎಪಿಎ ಪ್ರಕರಣ ದಾಖಲು.!ಇದುವರೆಗೂ ತಮ್ಮ ಆಸ್ತಿ ಮತ್ತು ದಾಯಿತ್ವ ವಿವರಗಳನ್ನು ಸಲ್ಲಿಸದ ಸಚಿವರು, ಶಾಸಕರ ಪಟ್ಟಿ ಇಲ್ಲಿದೆ.!ನೀವು ಯುವನಿಧಿ ಯೋಜನೆಯ ಫಲಾನುಭವಿಗಳ.? ಹಾಗಾದ್ರೆ ಇದು ಕಡ್ಡಾಯ.!11-11-2025 ದಿನದ ಮಂಡಕ್ಕಿ ಒಗರಗಣೆ- ಮಿರ್ಚಿ ..!