ಬೆಂಗಳೂರು: ರಾಜ್ಯ ಸರ್ಕಾರ ನಡೆಸಿರುವ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಹಿನ್ನೆಲೆ ಬೆಂಗಳೂರಿನಲ್ಲಿ ಶನಿವಾರದಿಂದ ಗಣತಿ ಪ್ರಾರಂಭವಾಗಿದ್ದು ಮಾದಿಗ ಸಮುದಾಯಕ್ಕೆ ಸೇರಿದ ಜನರೆಲ್ಲರೂ ಸಹ ಸಮೀಕ್ಷೆ ವೇಳೆ ಮಾದಿಗರೆಂದು ಬರೆಯಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗು ಗ್ರಾಹಕ ವ್ಯವಹಾರಗಳ ಸಚಿವ ಕೆಎಚ್ ಮುನಿಯಪ್ಪ ಸಮುದಾಯಕ್ಕೆ ಮನವಿ ಮಾಡಿಕೊಂಡರು.
ಬೆಂಗಳೂರಿನ ಟೌನ್ ಹಾಲ್ ನ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಕರ್ನಾಟಕ ಮಾದರ ಮಹಾಸಭಾವತಿಯಿಂದ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2025 ನಡೆಯುತ್ತಿವ ಹಿನ್ನೆಲೆ ಮಾದಿಗರೆಲ್ಲರೂ ಮಾದಿಗರೆಂದೇ ಬರೆಯಿಸಿ ಎಂದು ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಪ್ರಮುಖರ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಗಣತಿ ಪ್ರಾರಂಭವಾಗಿದೆ. ಮಾದಿಕ ಸಮುದಾಯಕ್ಕೆ ಸೇರಿದ ಎಲ್ಲಾ ಜನರು ಸಹ ಗಣತಿಯ ವೇಳೆಯಲ್ಲಿ ಉಪ ಪಂಗಡಗಳನ್ನು ಹೇಳದೆ ನೇರವಾಗಿ ಮಾದಿಗರೆಂದೇ ಬರೆಯಿಸಿ ಎಂದು ಮನವಿ ಮಾಡಿಕೊಂಡರು. ಈಗಾಗಲೇ ಗಣತಿಗೆ ಸಂಬಂಧಿಸಿದಂತೆ ಸಾಕಷ್ಟು ಸಭೆಗಳನ್ನು ಕರೆದು ಜನರಿಗೆ ಹರಿವು ಮೂಡಿಸುವ ಕೆಲಸವನ್ನು ಮಾಡಿದ್ದೇವೆ ಹಾಗೆ ಮಾದಿಗ ಸಮುದಾಯದಲ್ಲಿ ಮುಖಂಡರುಗಳ ಜೊತೆ ಸಭೆಯನ್ನು ಮಾಡಿ ಜನರಿಗೆ ಅವರ ಏರಿಯಾ ಗಳಿಗೆ ಸಂಬಂಧಿಸಿದಂತಹ ಪ್ರಮುಖರ ಜೊತೆ ಸಭೆಯಲ್ಲಿ ಸಾಕಷ್ಟು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಜನರಿಗೆ ತೊಂದರೆ ಆಗದಂತೆ ಗಲಿಬಿಲಿಯಾಗದಂತೆ ಸಮುದಾಯದ ಒಂದೇ ಹೆಸರು ಮಾದಿಗ ಎಂದು ಮಾದಿಗರಿಂದ ಬರೆಯಿಸಿ ಅಂತ ಮನವಿ ಮಾಡಿಕೊಂಡರು.
ಮಾದಿಗ ಕ್ರಿಶ್ಚಿಯನ್ ಮಾದಿಗ ತಮಿಳು ಮಾದಿಗ ಎನ್ನುವ ಗೊಂದಲಕ್ಕೆ ಯಾವುದೇ ರೀತಿಯಿಂದಲೂ ಇಡು ಮಾಡದೆ ಮಾದಿಗರೆಲ್ಲರೂ ಮಾದಿಗರೇ ಆಗಿರಬೇಕು ಎಂದು ತಿಳಿ ಹೇಳಿದರು. 
ಈ ಸಂಬಂಧ ನಮ್ಮ ನಮ್ಮ ನಾಯಕರು ಸಮುದಾಯದ ಮುಖಂಡರುಗಳು ನೇರವಾಗಿ ಮಾದಿಗರ ಓಣಿಗಳಿಗೆ ಭೇಟಿ ನೀಡಲಿದ್ದು ಅಲ್ಲಿ ಅವರ ಸಮಸ್ಯೆಗಳು ಹಾಗೂ ಆಗುತ್ತಿರುವ ಗೊಂದಲಗಳ ಬಗ್ಗೆ ವಿವರವನ್ನು ಪಡೆಯುವ ಮೂಲಕ ಗಣತಿಯಲ್ಲಿ ನಮ್ಮ ಸಮುದಾಯದ ಬಲಾಬಲವನ್ನು ತೋರಿಸುವ ಕೆಲಸವನ್ನು ಸಮಾಜದ ಜನರು ಮಾಡಬೇಕಾಗಿದೆ ಎಂದರು. ತದನಂತರ ಕೇಂದ್ರ ಸರ್ಕಾರವು ಸಹ ಗಣತಿ ಕಾರ್ಯವನ್ನು ಶೀಘ್ರ ಹಮ್ಮಿಕೊಳ್ಳಲಿದೆ. ಈ ವೇಳೆ ರಾಜ್ಯ ಸರ್ಕಾರ ಮಾಡಿರುವುದಕ್ಕಿಂತ ಎರಡು ಪಟ್ಟು ಹೆಚ್ಚಿನ ದಾಗಿ ಜನಸಂಖ್ಯೆ ಹೆಚ್ಚಳದ ಮಾಹಿತಿಯನ್ನು ತೋರಿಸಬೇಕಾಗಿದೆ ಎಂದು ತಿಳಿಸಿದರು.
ಅಬಕಾರಿ ಸಚಿವ ಆರ್ ವಿ ತಿಮ್ಮಾಪುರ ಮಾತನಾಡಿ, ಮಾದಿಗ ಸಮುದಾಯಕ್ಕೆ ಅದರಲ್ಲೂ ಜನರಿಗೆ ಗಣತಿಯ ವೇಳೆಯಲ್ಲಿ ಗೊಂದಲವನ್ನು ಸೃಷ್ಟಿ ಮಾಡಬೇಡಿ ಕ್ರಿಶ್ಚಿಯನ್ ಮಾದಿಗ ಆಂಧ್ರ ಮಾದಿಗ ತಮಿಳು ಮಾದಿಗ ಎನ್ನುವ ಜಾತಿ ಹೆಸರು ಹೇಳಿಕೊಂಡು ಜನರಲ್ಲಿ ಗೊಂದಲ ಸೃಷ್ಟಿ ಮಾಡಬೇಡಿ, ನಾವು ಸಭೆಯಲ್ಲಿ ಮಾತನಾಡುವ ವಿಚಾರಗಳು ಹೊರಗಡೆ ಸಾಕಷ್ಟು ಕಿತ್ತಾಟಗಳಿಗೆ ಕಾರಣವಾಗಿ ಮತ್ತೊಂದು ಸಂದೇಶ ಸಾರುವಂಥಾಗುತ್ತದೆ ಎಂದು ಸಮುದಾಯದ ಮುಖಂಡರಲ್ಲಿ ಕಿವಿಮಾತು ಹೇಳಿದರು.. 
ಮಾಜಿ ಸಂಸದ ಎ ನಾರಾಯಣಸ್ವಾಮಿ ಮಾತನಾಡಿ, ಮಾದಿಗರು ಸಮೀಕ್ಷೆಯಲ್ಲಿ ಸಕ್ರಿಯರಾಗಬೇಕು. ನಮ್ಮದು ಒಂದೆ ಜಾತಿ ಅದೇ ಮಾದಿಗ, ಅದನ್ನು ಬಿಟ್ಟು ಯಾರು ಬೇರೆ ಬೇರೆ ಜಾತಿಯ, ಉಪಜಾತಿಯ ಹೆಸರುಗಳನ್ನು ಬರೆಯಿಸಬಾರದು. ಕೇವಲ 10 ದಿನಗಳ ಒಳಗಾಗಿ ನಿಮ್ಮ ಜಾತಿಪ್ರಮಾಣ ಪತ್ರ ಹೊಸ ರೂಪ ಪಡೆಯಲಿದೆ. ಹೀಗಾಗಿ ಜಾತಿ ಹೆಸರು ಬರೆಯಬೇಕಾದರೆ ಮಾದಿಗ ಎಂದೇ ಬರೆಯಿರಿ. ಇಲ್ಲದಿದ್ದರೆ ನಿಮಗೆ ಯಾವುದೇ ಸರ್ಕಾರದ ಸೌಲಭ್ಯಗಳು ಸಿಗುವುದಿಲ್ಲ. ಎಚ್ಚರದಿಂದ ತಿಳಿದುಕೊಳ್ಳಿ ಎಂದರು.
ಸಮಾಜದ ಜನರಿಗೆ ಅರಿವು ಮೂಡಿಸುವ ಹಿನ್ನೆಲೆ ಸಭೆ ಕರೆದರೆ ಬೆರಳೇಣಿಕೆಯಷ್ಟು ಮುಖಂಡರು, ಸಮಾಜದವರು ಸಭೆಗೆ ಆಗಮಿಸಿದ್ದಾರೆ. ಇದೆಲ್ಲವನ್ನು ಯಾರಿಗೆ ಮಾಡಲಾಗುತ್ತದೆ. ನಮ್ಮನ್ನು ವೇದಿಕೆ ಮೇಲೆ ಕರೆಯಲಿಲ್ಲ ಎಂದು ಕೆಲವರು ಹಾಗೆಯೇ ಹೊಗಿದ್ದಾರೆ. ನನಗೆ ಚೆನ್ನಾಗಿ ಗೊತ್ತು. ಅಧಿಕಾರ, ಅಂತಸ್ತುಗ್ಗಿಂತ ಜಾತಿ ಮುಖ್ಯವಾಗಿದೆ ಎಂದು ಸಮುದಾಯದ ಜನರ ವಿರುದ್ದ ಗರಂ ಆದರು.
ಸಭೆಯಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆಹೆಚ್ ಮುನಿಯಪ್ಪ, ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಮಾಜಿ ಸಂಸದ ಎಲ್ ಹನುಮಂತಯ್ಯ, ಮಾಜಿ ಕೇಂದ್ರ ಸಚಿವ ಎ ನಾರಾಯಣ ಸ್ವಾಮಿ, ಎಂ ಎಲ್ ಸಿ ಡಾ. ತಿಮ್ಮಯ್ಯ, ಮೈಸೂರು ಪಾಲಿಕೆ ಮಾಜಿ ಮಹಾಪೌರರಾದ ನಾರಾಯಣ್, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಅಶೊಕ್ ಸಾಲಪ್ಪ, ಮಾಜಿ ಶಾಸಕ ಧರ್ಮಸೇನ್ , ಪೌರಕಾರ್ಮಿಕರ ಮುಖಂಡರಾದ ಡಾ.ಮುತ್ಯಾಲಪ್ಪ, ಮುತ್ತುರಾಜ್,ಕೋಗಿಲು ವಂಕಟೇಶ್, ಶಿವಪ್ಪ,ದಾಡಿ ಬಾಬು, ದೊಡ್ಡೇರಿ ವೆಂಕಟೇಶ್,ಪುರುಷೋತ್ತಮ್ ಮಾದಿಗ ಸಮುದಾಯಕ್ಕೆ ಸೇರಿದ ಅನೇಕ ಮುಖಂಡರು,ಪೌರಕಾರ್ಮಿಕರು, ಸಮುದಾಯದವರು ಉಪಸ್ಥಿತರಿದ್ದರು.