Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಮುರಗೋಡ ಸಂಜು ಬಸಯ್ಯ ಲವ್ ಸ್ಟೋರಿ ; ಕೊನೆಗೂ ಸಿಕ್ಕಳು ಬಳ್ಳಾರಿ ಸುಂದರಿ..!

 

ಬೆಳಗಾವಿ :
ಖ್ಯಾತ ನಟ ಮುರಗೋಡ ಮೂಲದ ಸಂಜು ಬಸಯ್ಯ ಅವರು ನಟಿ ಪಲ್ಲವಿ ಬಳ್ಳಾರಿ ಅವರೊಂದಿಗೆ ಮದುವೆಯಾಗಿದ್ದಾರೆ.
ಕನ್ನಡ ಕಿರುತೆರೆ ಲೋಕದ ಶೋಗಳ ಮೂಲಕ ಸಂಜು ಬಸಯ್ಯ ಹೆಸರುವಾಸಿಯಾಗಿದ್ದರು. ಇದೀಗ ಅವರು ತಮ್ಮ ಬಹುಕಾಲದ ಪ್ರೇಯಸಿ ಪಲ್ಲವಿ ಜೊತೆ ಹೆಜ್ಜೆ ಹಾಕಿದ್ದಾರೆ. ತಮ್ಮ ನಟನೆಯಿಂದಲೇ ಎಲ್ಲರ ಮನಸ್ಸು ಗೆದ್ದಿರುವ ಸಂಜು ಬಸಯ್ಯ ರಿಜಿಸ್ಟರ್ ಮದುವೆಯಾಗಿದ್ದಾರೆ. ನಟಿ ಪಲ್ಲವಿ ಬಳ್ಳಾರಿ ಎಂಬ ಯುವತಿ ನಾಟಕ ಕಲಾವಿದೆ. ಅನೇಕ ಕಿರು ಚಿತ್ರಗಳಲ್ಲಿ ನಟಿಸಿದ್ದಾರೆ. ಏಳೆಂಟು ವರ್ಷಗಳ ಹಿಂದಿನ ಪರಿಚಯ ಸ್ನೇಹಕ್ಕೆ ತಿರುಗಿ ಪ್ರೀತಿ ಆಗಿ ಬದಲಾಗಿದೆ.

ಮದುವೆಯಾದ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಸಂಜು ಬಸಯ್ಯ
ಜೀ ಕನ್ನಡ ವಾಹಿನಿ ಕಾಮಿಡಿ ಖಿಲಾಡಿಗಳು ಖ್ಯಾತಿಯ ನಟ. ಸಂಜು ಬಸಯ್ಯ ಅವರು ಪಲ್ಲವಿ ಬಳ್ಳಾರಿ ಎನ್ನುವರನ್ನು ವಿವಾಹವಾಗುವ ಮೂಲಕ ಇದೀಗ ಬಹುಕಾಲದ ಚರ್ಚೆಗೆ ಕೊನೆಗೂ ವಿರಾಮ ನೀಡಿದ್ದಾರೆ.

ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಸಂಜು ಬಸಯ್ಯ ಅವರು ಪಲ್ಲವಿ ಬಳ್ಳಾರಿ ಎನ್ನುವರನ್ನು ವಿವಾಹವಾದ ಕುರಿತು ಇತ್ತೀಚೆಗೆ ಅವರು ತಮ್ಮ ಇನ್‌ಸ್ಟಾಗ್ರಾಂ (sanjubasayyafficial) ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಪಲ್ಲವಿ ಕೆಲ ಯುಟ್ಯೂಬ್ ವಿಡಿಯೊಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿಯವರೆಗಿನ ನನ್ನ ಹಾಗೂ ಪಲ್ಲವಿ ಬಳ್ಳಾರಿಯವರ ನಡುವಿನ ಸಂಬಂಧಗಳ ಊಹಾಪೋಹಗಳಿಗೆ ತೆರೆ ಎಳೆದಿದ್ದೇವೆ. ಮೊದಲಿಗೆ ನಮ್ಮಿಬ್ಬರ ಪರಿಚಯವಾಗಿತ್ತು,ಆ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿದ್ದು ನಿಮಗೆಲ್ಲರಿಗೂ ಗೊತ್ತಿದ್ದ ವಿಷಯ. ಈಗ ನಾವಿಬ್ಬರು ಕಾನೂನಬದ್ದವಾಗಿ, ಅಧಿಕೃತವಾಗಿ, ರಿಜಿಸ್ಟರ್ ಮ್ಯಾರೇಜ್ ಆಗಿದ್ದೇವೆ. ನಮ್ಮ, ನಮ್ಮ ಕುಟುಂಬದ ಒಪ್ಪಿಗೆ ಪಡೆದು ನಿಮ್ಮೆಲ್ಲರ ಸುಮ್ಮುಖದಲ್ಲಿ ಆದಷ್ಟು ಬೇಗ ಸಪ್ತಪದಿ ತುಳಿಯಲಿದ್ದೇವೆ. ನಿಮ್ಮ ಪ್ರೀತಿ ,ಆಶೀರ್ವಾದ ನಮ್ಮ ಮೇಲೆ ಹೀಗೆ ಇರಲಿ. ನಿಜವಾದ ಪ್ರೀತಿಗೆ ಯಾವುದೇ ಜಾತಿ, ಧರ್ಮ ,ಇನ್ನಿತರ ಯಾವುದೇ ವಿಷಯಗಳು ಅಡ್ಡ ಬರಲಾರದು ಎಂಬುದನ್ನು ಸಾಧಿಸಿ ತೋರಿಸಿದ್ದೇವೆ, ನಿಜವಾದ ಪ್ರೀತಿಗೆ ಜಯ ಸಿಕ್ಕೆ ಸಿಗುತ್ತದೆ ಎನ್ನುವುದಕ್ಕೆ ನಾವೇ ಕಾರಣ. ಇಂತಿ ನಿಮ್ಮ ಪ್ರೀತಿಯ ಸಂಜು ಬಸಯ್ಯ, ಪಲ್ಲವಿ ಬಳ್ಳಾರಿ ಎಂದು ಬರೆದುಕೊಂಡಿದ್ದಾರೆ.

ಮುರಗೋಡ ಗ್ರಾಮದ ಸಂಜು, ಆರಂಭದಲ್ಲಿ ನಾಟಕ ಕಂಪನಿಗಳಲ್ಲಿ ಗುರುತಿಸಿಕೊಂಡಿದ್ದರು. ಜೀ ವಾಹಿನಿಯ ಕಾಮಿಡಿ ಕಿಲಾಡಿಗಳ ಮೂಲಕ ಜನಪ್ರಿಯರಾದರು. ಕೆಲ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.

ಕುಳ್ಳ ಮಿಂಡ್ರಿ, ಮೆಣಸಿನಕಾಯಿ ಬಸ್ಯಾ, ಸಂಜು ಬಸಯ್ಯ ಹೀಗೆ ಹಲವು ಹೆಸರುಗಳಿಂದಲೇ ಜನಪ್ರಿಯರು. ಕಾಮಿಡಿ ಕಿಲಾಡಿಗಳು‌ ಕನ್ನಡ ಕಿರುತೆರೆಯಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದ ಕಾಮಿಡಿ ಶೋ.. ನವರಸ ನಾಯಕ ಜಗ್ಗೇಶ್, ರಕ್ಷಿತಾ, ನಿರ್ದೆಶಕರಾದ ಯೋಗರಾಜ್ ಭಟ್ಟರು ಜಡ್ಜಸ್ ಆಗಿ ಕಾಣಿಸಿಕೊಂಡ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮ ಕನ್ನಡ ಕಿರುತೆರೆ ಇತಿಹಾಸದಲ್ಲಿ ದೊಡ್ಡ ಯಶಸ್ಸು ಕಂಡು ಸಾಕಷ್ಟು ಪ್ರತಿಭಾವಂತರನ್ನು ಸಿನಿಮಾ ಇಂಡಸ್ಟ್ರಿಗೆ ನೀಡಿತು. ಒಂದಲ್ಲಾ ಎರಡಲ್ಲಾ ಮೂರು ಸೀಸನ್ ಗಳಲ್ಲಿ ಪ್ರಸಾರವಾದ ಕಾಮಿಡಿ ಕಿಲಾಡಿಗಳು ಮತ್ತೆ ಎಲ್ಲಾ ಸೀಸನ್ ಗಳ ಕಾಮಿಡಿ‌ ಕಲಾವಿದರೊಟ್ಟಿಗೆ ಚಾಂಪಿಯನ್ ಶಿಪ್ ಶೋ ಪ್ರಸಾರವಾಯಿತು. ಎಲ್ಲಾ ಸೀಸನ್ ಗಳು ಭರ್ಜರಿ ರೇಟಿಂಗ್ ಪಡೆದು ವಾಹಿನಿ ಲಾಭ ತಂದುಕೊಟ್ಟರೆ ಇತ್ತ ಕಾಮಿಡಿ ಕಿಲಾಡಿಗಳು ಶೋಗೆ ಬಂದ ಬಹುತೇಕ ಕಲಾವಿದರು ಮನೆ ಮಾತಾದರು. ಈ ಶೋನಿಂದ ಬಂದ ಹೆಸರಿನಿಂದ ಸಿನಿಮಾ ಹಾಗೂ ಕಿರುತೆರೆಯಲ್ಲಿ ಅವಕಾಶ ಪಡೆದು ಬದುಕು‌ ಕಟ್ಟಿಕೊಂಡರು.

ಕಾಮಿಡಿ ಕಿಲಾಡಿಗಳು ಶೋಗೆ ಬಂದಿದ್ದವರು ಬಹುತೇಕ ಎಲ್ಲರೂ ಸಹ ಗ್ರಾಮೀಣ ಭಾಗದ ಪ್ರತಿಭೆಗಳೇ ಆಗಿದ್ದು ಈ ಶೋ ಅವರಿಗೆಲ್ಲಾ ಒಂದೊಳ್ಳೆ ವೇದಿಕೆಯನ್ನು ನೀಡಿತು ಎಂದರೆ ತಪ್ಪಾಗಲಾರದು. ಇನ್ನು ಈ ಶೋನಲ್ಲಿ ಭಾಗವಹಿಸಿದ ನಯನಾ.

ಗೋವಿಂದೇ ಗೌಡ ಇನ್ನೂ ಅನೇಕರು ಸಿನಿಮಾಗಳಲ್ಲಿ ಅವಕಾಶ ಪಡೆದು ಮಿಂಚಿದರು. ಗೋವಿಂದೇ ಗೌಡ ಕೆಜಿಎಫ್ ಸಿನಿಮಾದಲ್ಲಿ ಕಾಣಿಸಿಕೊಂಡು ಜನಮನ ಗೆದ್ದರು. ಇನ್ನೂ ಸಾಕಷ್ಟು ಕಲಾವಿದರಿಗೆ ಜೀ ಕನ್ನಡ ವಾಹಿನಿಯಲ್ಲಿಯೇ ಪ್ರಸಾರವಾಗುತ್ತಿರುವ ಎಲ್ಲಾ ಧಾರಾವಾಹಿಗಳಲ್ಲಿ‌ ಒಬ್ಬರು ಇಬ್ಬರು ಕಲಾವಿದರಿಗೆ ಅವಕಾಶ ಕೊಟ್ಟಿರುವುದು ಒಳ್ಳೆಯ ವಿಚಾರ. ಕೊರೊನಾ ಸಮಯದಲ್ಲಿ ಸಿನಿಮಾ ಅವಕಾಶಗಳಿಲ್ಲದೇ ಇದ್ದ ಅನೇಕ‌ ಕಲಾವಿದರಿಗೆ ಧಾರಾವಾಹಿಗಳಲ್ಲಿ ಹಾಗೂ ಶೋಗಳಲ್ಲಿ ಅವಕಾಶ ಕೊಟ್ಟು ಜೀವನಕ್ಕೆ ದಾರಿಯಾಗಿದ್ದು ನಿಜಕ್ಕೂ ಮೆಚ್ಚುವಂತದ್ದು.

ಇನ್ನು ಕಾಮಿಡಿ ಕಿಲಾಡಿಗಳು ಶೋ ಮೂಲಕವೇ ಪರಿಚಯವಾದ ಖ್ಯಾತ ಕಲಾವಿದ ಕೆಜಿಎಫ್ ಸಿನಿಮಾ ಮೂಲಕ ಜನಮನ ಗೆದ್ದ ಗೋವಿಂದೇ ಗೌಡ ಹಾಗೂ ಅದೇ ಶೋನಲ್ಲಿ ಕಾಣಿಸಿಕೊಂಡ ದಿವ್ಯಾ ಅವರು ನಿಜ ಜೀವನದಲ್ಲಿ‌ಯೂ ಜೋಡಿಯಾಗಿ ಎರಡು ವರ್ಷದ ಹಿಂದೆ ದಾಂಪತ್ಯ ಜೀವನಕ್ಕೆ‌ ಕಾಲಿಟ್ಟಿದ್ದು ವಿಶೇಷ.. ಇನ್ನು ಇದೀಗ ಮತ್ತೊಬ್ಬ ಕಲಾವಿದ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಸಂತೋಷ ಹಂಚಿಕೊಂಡಿದ್ದಾರೆ. ಕಾಮಿಡಿ ಕಿಲಾಡಿ ಶೋನ ಸಂಜು ಬಸಯ್ಯಾ.. ಇದೀಗ ಮದುವೆಯ ಜೀವನಕ್ಕೆ ಕಾಲಿಡುತ್ತಿದ್ದು ಸಿಕ್ಕಾಪಟ್ಟೆ ಸಂತೋಷದಲ್ಲಿದ್ದಾರೆನ್ನಬಹುದು. ಸಂಜು ಬಸಯ್ಯ ಕಾಮಿಡಿ ಕಿಲಾಡಿಗಳು ಶೋ ಗೆ ಬಂದ ನಂತರ ಜನಮೆಚ್ಚುಗೆ ಗಳಿಸಿದ್ದು ಮಾತ್ರವಲ್ಲ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದರು.

 

ಸಂಜು ಬಸಯ್ಯಾ ಅವರು ದರ್ಶನ್ ಅವರು ಅಭಿನಯದ ಯಜಮಾನ ಸಿನಿಮಾದಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಲ್ಲದೇ ಇಂತಿ ನಿಮ್ಮ ಭೈರ ಸೇರಿದಂತೆ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಹಾಸ್ಯ ಕಲಾವಿದನಾಗಿ ಮಿಂಚುತ್ತಿದ್ದಾರೆ. ಕಿರುತೆರೆಯ ಶೋಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಸಂಜು ಬಸಯ್ಯ.. ತಮ್ಮ ಮದುವೆ ವಿಚಾರವನ್ನು ಹಂಚಿಕೊಂಡಿರುವ ಸಂಜು ಬಸಯ್ಯ ತಾವು ಮದುವೆಯಾಗುತ್ತಿರುವ ಹುಡುಗಿಯ ಬಗ್ಗೆಯೂ ಹೇಳಿದ್ದಾರೆ. ಮೂಲತಃ ಬಳ್ಳಾರಿಯವರಾದ ಪಲ್ಲವಿ ಅವರು ಕಳೆದ ಎಂಟು ವರ್ಷಗಳಿಂದ ಸಂಜು ಬಸಯ್ಯ ಅವರ ಸ್ನೇಹಿತರಾಗಿದ್ದರು‌.

ಸಂಜು ಬಸಯ್ಯಾ ಹಾಗೂ ಪಲ್ಲವಿ ಇಬ್ಬರೂ ಉತ್ತರ ಕರ್ನಾಟಕದವರಾಗಿದ್ದು ಎಂಟು ವರ್ಷದ ಸ್ನೇಹ ಪ್ರೀತಿ ಇದೀಗ ಮದುವೆಯಾಗುವವರೆಗೆ ಬಂದು ನಿಂತಿದೆ.

ಬೆಳಗಾವಿ ಜಿಲ್ಲೆ ಮುರಗೋಡಿನಿಂದ ಬಂದು ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡ ಸಂಜು ಬಸಯ್ಯ ಅವರು ನೋಡಲು ಚಿಕ್ಕ ಹುಡುಗನಂತಿದ್ದರೂ ಅದಾಗಲೇ ಮದುವೆಯ ವಯಸ್ಸಿಗೆ ಬಂದಿದ್ದು ಅದರಲ್ಲೂ ಪ್ರೀತಿಸಿ ಮದುವೆಯಾಗುತ್ತಿರುವುದು ವಿಶೇಷ. ಕಳೆದ ಎಂಟು ವರ್ಷಗಳಿಂದ ಪಲ್ಲವಿ ಹಾಗೂ ಸಂಜು ಬಸಯ್ಯ ಸ್ನೇಹಿತರಾಗಿದ್ದರು. ಆನಂತರ ಸ್ನೇಹ ಪ್ರೀತಿಯಾಗಿದ್ದು ಗತ ಇತಿಹಾಸ.

 

ಕಾಮಿಡಿ‌ ಕಿಲಾಡಿಗಳು ವೇದಿಕೆಯಲ್ಲಿ ಈ ವಿಚಾರ ತಿಳಿಸಿದ ಸಂಜು ಬಸಯ್ಯ ಅವರು ಸಂತೋಷ ಹಂಚಿಕೊಂಡಿದ್ದಾರೆ.. ನಿಶ್ಕಲ್ಮಶ ಪ್ರೀತಿಯ ಮುಂದೆ ಮಿಕ್ಕೆಲ್ಲವೂ ಶೂನ್ಯವೆಂಬುದಕ್ಕೆ ಈ ಜೋಡಿಯೇ ನೈಜ ಉದಾಹರಣೆ.. ಸಂಜು ಬಸಯ್ಯಾ ಅವರ ಲವ್ ಕಹಾನಿ ಕೇಳಿ ಕಾಮಿಡಿ ಕಿಲಾಡಿಗಳು ಸ್ಪರ್ಧಿಗಳು ಮಾತ್ರವಲ್ಲದೇ ರಕ್ಷಿತಾ ಅವರು ಜಗ್ಗೇಶ್ ಅವರು ಯೋಗರಾಜ್ ಭಟ್ಟರು ಸೇರಿದಂತೆ ಎಲ್ಲರೂ ಸಹ ಆಶ್ಚರ್ಯ ವ್ಯಕ್ತಪಡಿಸಿ ಇಬ್ಬರಿಗೂ ಮನಸ್ಪೂರ್ತಿಯಾಗಿ ಶುಭ ಹಾರೈಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ