ನಗರವನ್ನ ಅಭಿವೃದ್ಧಿ ಮಾಡುವುದೇ ನನ್ನ ಗುರಿ: ಶಾಸಕ ಕೆ.ಸಿ ವೀರೇಂದ್ರ ಪಪ್ಪಿ
ಚಿತ್ರದುರ್ಗ: ಚಿತ್ರದುರ್ಗ ನಗರವನ್ನ ಅಭಿವೃದ್ಧಿ ಮಾಡುವುದೇ ನನ್ನ ಮೂಲ ಉದ್ದೇಶ ಅದರಿಂದಾಗಿ ಚಿತ್ರದುರ್ಗದ ನಗರವನ್ನ ಮತ್ತಷ್ಟು ಅಂದವನ್ನು ಹೆಚ್ಚಿಸುವುದಕ್ಕೆ ಈಗಾಗಲೇ ರೂಪೇಶ್ಗಳನ್ನ ತಯಾರಿಸಲಾಗಿದೆ ಅದರಂತೆ ಚಿತ್ರದುರ್ಗ ನಗರದ ವಿವಿಧ ಕಡೆ ಬೀದಿಬದಿ ಡಬ್ಬದ ಅಂಗಡಿಗಳನ್ನು ತೆರವುಗೊಳಿಸಿ ಅದೇ ಸ್ಥಳದಲ್ಲಿ ಫುಡ್ ಕೋರ್ಟುಗಳನ್ನು ನಗರಸಭೆ ವತಿಯಿಂದ ನಿರ್ಮಿಸಲಾಗುತ್ತಿದೆೆ, ಚಿತ್ರದುರ್ಗ ನಗರದ ಅಭಿವೃದ್ಧಿಗೆ ಬೀದಿಬದಿ ವ್ಯಾಪಾರಸ್ಥರ ಸಹಕಾರ ನಮಗೆ ಅವಶ್ಯಕವಾಗಿ ಬೇಕಿದೆ ಎಂದು ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಮನವಿ ಮಾಡಿದರು.
ನಗರದ ಕೆಳಕೋಟೆಗೆ ಭಾನುವಾರ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆಗಳನ್ನ ಆಲಿಸಿ ಮಾತಾಡಿದ್ದಾರೆ, ಚಿತ್ರದುರ್ಗ ನಗರವನ್ನ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ಸಭೆಯನ್ನು ನಡೆಸಿದ್ದೇನೆ, ಅದರಂತೆ ಫುಡ್ ಕೋರ್ಟ್ ಮಳಿಗೆಗಳನ್ನ ನಿರ್ಮಾಣ ಮಾಡುವ ಕುರಿತಂತೆ ಚಿತ್ರದುರ್ಗ ನಗರದ ಕೆಲವು ಸ್ಥಳಗಳನ್ನು ಭೇಟಿ ಮಾಡಲಾಗಿದೆ. ಸಾರ್ವಜನಿಕರು ರಸ್ತೆ ಬದಿಗಳಲ್ಲಿ ಇಟ್ಟಿರುವಂತಹ ಡಬ್ಬಗಳ ಅಂಗಡಿಗಳನ್ನು ತೆರವುಗೊಳಿಸಿ ಸುಸ್ಸರ್ಜಿತವಾದ ಫುಡ್ ಕೋರ್ಟ್ಗಳನ್ನ ನಿರ್ಮಿಸಿಕೊಡಲಾಗುತ್ತದೆ ಇದಕ್ಕೆ ತಮ್ಮೆಲ್ಲರ ಒಪ್ಪಿಗೆ ಅವಶ್ಯಕವಾಗಿದೆ ಎಂದು ಕೆಳಗೋಟೆ ನಿವಾಸಿಗಳಲ್ಲಿ ಮನವಿ ಮಾಡಿದರು.
ಕೆಳಗೋಟೆಯ ಸರಸ್ವತಿ ಕಾನೂನು ಕಾಲೇಜು ಮುಂಭಾಗದಲ್ಲಿರುವAತಹ ಡಬ್ಬ ಅಂಗಡಿಗಳನ್ನು ತರವುಗೊಳಿಸಿ ಡಬ್ಬ ಅಂಗಡಿಗಳ ಬದಲಿಗೆ ಫುಡ್ ಕೋರ್ಟ್ ಮಾಡುವ ಯೋಜನೆಯನ್ನು ನಗರದ ವಿವಿಧ ಕಡೆ ಹಮ್ಮಿಕೊಳ್ಳಲಾಗಿದೆ. ಅದರಂತೆ ಕೆಳಗೋಟೆ ಬಡಾವಣೆಯಲ್ಲೂ ಸಹ ಫುಡ್ ಕೋರ್ಟ್ ಗಳ ಮಳಿಗೆಯನ್ನ ತೆರೆಯಲಾಗುತ್ತದೆ, ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗುತ್ತದೆ ಒಂದೇ ಸೂರಿನ ಅಡಿಯಲ್ಲಿ ವಿದ್ಯುತ್, ಕುಡಿಯುವ ನೀರು, ಶೌಚಾಲಯವನ್ನ ಫುಡ್ ಕೋರ್ಟ್ ಮಳಿಗೆಯಲ್ಲಿ ನಿರ್ಮಿಸಿಕೊಡಲಾಗುತ್ತಿದೆ. ಇದರಿಂದ ಅಂಗಡಿಯ ಮಾಲೀಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಡಬ್ಬ ಅಂಗಡಿ ಮಾಲೀಕರಿಗೆ ತಿಳಿಸಿದರು.
ಚಿತ್ರದುರ್ಗ ನಗರ ಅಷ್ಟೇ ಅಲ್ಲದೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರಗಳಿಗೂ ಮುಂದಿನ ದಿನಗಳಲ್ಲಿ ಭೇಟಿ ಮಾಡಿ ಉಳಿದಿರುವಂತಹ ಅಭಿವೃದ್ಧಿ ಕಾರ್ಯಗಳಿಗೆ ಹೆಜ್ಜೆಯನ್ನು ಇಡಲಾಗುತ್ತದೆ. ಚಿತ್ರದುರ್ಗ ನಗರದ ಬಹುದಿನಗಳಿಂದ ಉಳಿದಿರುವಂತಹ ಕೆಲಸಗಳನ್ನ ಅಚ್ಚುಕಟ್ಟಾಗಿ ಮಾಡಲು ಪಣತೊಟ್ಟಿದ್ದೇನೆ. ಚಿತ್ರದುರ್ಗ ನಗರಕ್ಕೆ ದೇಶ ವಿದೇಶಗಳಿಂದ ಪ್ರವಾಸಿಗರು ಕೂಡ ಆಗಮಿಸುತ್ತಿದ್ದಾರೆ, ಇದರಿಂದ ಚಿತ್ರದುರ್ಗದ ನಗರದ ಬಗ್ಗೆ ದೇಶವಿದೇಶಗಳಲ್ಲಿಯೂ ಸಹ ಮಾತನಾಡುತ್ತಾರೆ ಹಾಗಾಗಿ ಚಿತ್ರದುರ್ಗ ನಗರವನ್ನು ಒಂದು ಸುಂದರವಾದ ನಗರವನ್ನಾಗಿಸಲು ಈಗಾಗಲೇ ಎಲ್ಲಾ ಅಧಿಕಾರಿಗಳ ಜೊತೆ ಸಮಾಲೋಚನೆಯನ್ನು ನಡೆಸಿದ್ದೇನೆ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯಗಳು ಆಗಲಿವೆ ಎಂದು ಹೇಳಿದರು.
ಕೆಳಗೋಟೆಯ ಬೋವಿ ಕಾಲೋನಿಯಲ್ಲಿ ಹರಿದು ಹೋಗುತ್ತಿರುವ ರಾಜ ಕಾಲುವೆಗೆ ಕೆಲವು ಕಡೆ ತಡೆಗೋಡೆಗಳು ಕುಸಿದಿವೆ, ಕಾಲೋನಿಯ ಸಣ್ಣಪುಟ್ಟ ಮಕ್ಕಳು ರಾಜ ಕಾಲುವೆ ಅಕ್ಕಪಕ್ಕದಲ್ಲಿ ಆಟವಾಡುತ್ತಿರುತ್ತವೆ. ಇದರಿಂದಾಗಿ ಸಾಕಷ್ಟು ಭಯ ಬೀತರಾಗಿದ್ದೇವೆ ತಕ್ಷಣವೇ ಸಂಬAಧಪಟ್ಟ ಇಲಾಖೆ ಅಧಿಕಾರಿಗಳಿಗೆ ತಿಳಿಸಿ ರಾಜಕಾಲವೆಗೆ ಕಬ್ಬಿಣದ ಜಲ್ಡಿಯಿಂದ ಮುಚ್ಚಬೇಕು ಎಂದು ಸಾರ್ವಜನಿಕರು ಶಾಸಕರಿಗೆ ಮನವಿ ಮಾಡಿದರು, ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ ನಗರ ಸಭೆ ಪೌರಯುಕ್ತರನ್ನು ಸ್ಥಳಕ್ಕೆ ಕರೆಸಿ ಇಲ್ಲಿನ ಜನರಿಗೆ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಲಕ್ಷ್ಮೀ, ಕೆಳಗೋಟೆ ನಿವಾಸಿಗಳಾದ ಅಂಜಿನಪ್ಪ, ಸುರೇಶ್, ಮಲ್ಲಿಕಾರ್ಜುನ್, ರವಿಕುಮಾರ್, ಸುಜಾತಮ್ಮ, ಲಕ್ಷ್ಮಮ್ಮ, ಮಂಜಮ್ಮ, ಓಬಣ್ಣ, ಖಾಲೀಲ್, ರಾಜಣ್ಣ, ಪ್ರಸನ್ನ, ಶ್ವೇತ, ನಾಗರತ್ನ, ರವಿ, ಮಂಜುನಾಥ್, ನಾಗರಾಜ್ ಹಾಗೂ ಇತರರು ಇದ್ದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.