ಎನ್.ಗುರುಪಾದಮ್ಮ ಅವರಿಗೆ ಪಿಹೆಚ್‍ಡಿ ಪದವಿ
ಚಿತ್ರದುರ್ಗ: ಬೆಂಗಳೂರು ಮಲ್ಲೇಶ್ವರಂನ ಎಂಎಲ್‍ಎ ಪಿಯು ಕಾಲೇಜು ಕನ್ನಡ ಉಪನ್ಯಾಸಕರಾದ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ತವನಿಧಿ ಗ್ರಾಮದ ಲಲಿತಮ್ಮ ಹಾಗೂ ನೀಲಕಂಠಯ್ಯ ಅವರ ಮಗಳಾದ ಎನ್.ಗುರುಪಾದಮ್ಮ ವೀರಭದ್ರಪ್ಪ (ಉಷಾ ತವನಿಧಿ) ಅವರಿಗೆ ಕನ್ನಡ ವಿಷಯದಲ್ಲಿ ಕುವೆಂಪು ವಿಶ್ವವಿದ್ಯಾಲಯ ಪಿಹೆಚ್‍ಡಿ ಪದವಿ ನೀಡಿದೆ.
ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ಸಹ ಪ್ರಾಧ್ಯಾಪಕ ಡಾ.ನಲ್ಲಿಕಟ್ಟೆ ಸಿದ್ದೇಶ್ ಅವರ ಮಾರ್ಗದರ್ಶನದಲ್ಲಿ “ನವೋದಯ ಕಾವ್ಯ : ಮಾತೃತ್ವದ ಸಂಕಥನಗಳು” ಎಂಬ ವಿಷಯ ಕುರಿತು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ಪಿಹೆಚ್‍ಡಿ ಪದವಿಗೆ ಅಂಗೀಕರಿಸಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.