- ಸಿರುಗುಪ್ಪ: 2026-27ನೇ ಸಾಲಿನ 6ನೇ ತರಗತಿ ಪ್ರವೇಶಕ್ಕಾಗಿ ನವೋದಯ ಪ್ರವೇಶ ಪರೀಕ್ಷೆ ಶನಿವಾರದಂದು ನಡೆಯಲಿದ್ದು, ಸಿರುಗುಪ್ಪ ನಗರದಲ್ಲಿ ಶಾಂತಿನಿಕೇತನ ವಿದ್ಯಾ ಮಂದಿರ, ವಿಜಯಮೇರಿ ಶಾಲೆ, ಎಸ್.ಇ.ಎಸ್.ಬಾಲಕಿಯರ ಅನುದಾನಿತ ಶಾಲೆಗಳು ತಾಲೂಕಿನ ನವೋದಯ ಪ್ರವೇಶ ಪರೀಕ್ಷಾ ಕೇಂದ್ರಗಳಾಗಿರುತ್ತವೆ. ಶುಕ್ರವಾರದಂದು ಕ್ಷೇತ್ರ ಸಮನ್ವಯಾಧಿಕಾರಿಗಳಾದ ತಮ್ಮನಗೌಡ ಪಾಟೀಲ್ ಮತ್ತು ನವೋದಯ ಪ್ರವೇಶ ಪರೀಕ್ಷೆಯ ನೋಡಲ್ ಅಧಿಕಾರಿಯಾದ ಎಂ. ಸುರೇಶ್ ನಗರದ ಪ್ರವೇಶ ಪರೀಕ್ಷೆ ನಡೆಯುವ ಮೂರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪೂರ್ವ ಸಿದ್ಧತೆಯನ್ನು ಪರಿಶೀಲಿಸಿದರು. ಪ್ರವೇಶ ಪರೀಕ್ಷೆಯ ಪ್ರವೇಶ ಪತ್ರದಲ್ಲಿರುವ ಸಮಯಕ್ಕೆ ಸರಿಯಾಗಿ ನಿಗದಿತ ಪರೀಕ್ಷಾ ಕೇಂದ್ರಗಳಿಗೆ ತಲುಪಲು ಸಂಬಂಧಪಟ್ಟ ಶಾಲೆಯ ಶಿಕ್ಷಕರು ಮತ್ತು ಪಾಲಕರು ಕ್ರಮ ಕೈಗೊಳ್ಳತಕ್ಕದ್ದು. ನವೋದಯ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ತಾಲೂಕಿನ ಎಲ್ಲಾ ಮಕ್ಕಳು ಪರೀಕ್ಷೆಗೆ ಹಾಜರಾಗಲು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್. ಗುರಪ್ಪ ಮತ್ತು ನವೋದಯ ಪರೀಕ್ಷೆ ತಾಲೂಕು ನೋಡಲ್ ಅಧಿಕಾರಿಯಾದ ಎಂ.ಸುರೇಶ್ ರವರು ಕೋರಿದ್ದಾರೆ

ನಗರದ ಪ್ರವೇಶ ಪರೀಕ್ಷಾ ಕೇಂದ್ರದಲ್ಲಿ ಮಕ್ಕಳ ನೋಂದಣಿ ಸಂಖ್ಯೆ ಬರೆಯುವಲ್ಲಿ ನಿರತರಾಗಿರುವ ಶಿಕ್ಷಕಿ
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.