Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಪೊಲೀಸ್ ಕಾನ್‌ಸ್ಟೇಬಲ್‌ ಗಳಿಗೆ ನೇವಿ ಬ್ಲೂ ಪೀಕ್ ಕ್ಯಾಪ್‌

ಬೆಂಗಳೂರು : ಕರ್ನಾಟಕದಲ್ಲಿ ಪೊಲೀಸ್ ಕಾನ್‌ಸ್ಟೇಬಲ್‌ಗಳು ಮತ್ತು ಹೆಡ್ ಕಾನ್‌ಸ್ಟೇಬಲ್‌ಗಳು ಇನ್ನು ಮುಂದೆ ಸ್ಲೋಚ್ ಟೋಪಿಗಳ ಬದಲಿಗೆ ನೇವಿ ಬ್ಲೂ ಪೀಕ್ ಕ್ಯಾಪ್‌ಗಳನ್ನು ಧರಿಸಲಿದ್ದಾರೆ. ಈ ಮೂಲಕ ಈಗ ಧರಿಸುತ್ತಿದ್ದ ಸ್ಲೌಚ್ ಹ್ಯಾಟ್​ಗೆ ರಾಜ್ಯ ಸರ್ಕಾರ ಗುಡ್​ ಬೈ ಹೇಳಿದೆ.
ಈ ಹೊಸ ಮಾದರಿಯ ಕ್ಯಾಪ್​ಗಳು ತೆಲಂಗಾಣ ಪೊಲೀಸ್​ ಯೂನಿಫಾರಂನಿಂದ ಪ್ರೇರಿತವಾಗಿದ್ದು, ನಾಲ್ಕು ದಶಕಗಳಿಂದ ಕರ್ನಾಟಕದಲ್ಲಿ ಪೊಲೀಸ್​ ಕಾನ್ಸ್‌ಟೇಬಲ್‌ಗಳು ಧರಿಸುತ್ತಿದ್ದ ಸ್ಲೌಚ್ ಹ್ಯಾಟ್​ ಈಗ ಇತಿಹಾಸದ ಪುಟ ಸೇರಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ಡಾ.ಜಿ.ಪರಮೇಶ್ವರ ಮಂಗಳವಾರ ಈ ಹೊಸ ಕ್ಯಾಪ್‌ಗಳನ್ನುಪೊಲೀಸ್ ಕಾನ್‌ಸ್ಟೇಬಲ್‌ಗಳಿಗೆ ವಿತರಣೆ ಮಾಡಿದ್ದಾರೆ.
ವಿವಿಧ ರಾಜ್ಯಗಳ ಪೋಲಿಸ್ ಕ್ಯಾಪ್ ಮಾದರಿಗಳನ್ನು ಪರಿಶೀಲಿಸಿ, ಅಂತಿಮವಾಗಿ ತೆಲಂಗಾಣ ಮಾದರಿಯ ಕ್ಯಾಪ್​ಗಳನ್ನು ಕರ್ನಾಟಕದ ಕಾನ್ಸ್‌ಟೇಬಲ್‌ಗಳಿಗೆ ಒದಗಿಸಲು ತೀರ್ಮಾನಿಸಿದ್ದರು. ತೆಲಂಗಾಣ ಮಾದರಿಯ ನೇವಿ ಬ್ಲೂ ಕ್ಯಾಪ್‌ಗಳು ಸೂಕ್ತ ವಿನ್ಯಾಸ, ಉತ್ತಮ ಫಿಟ್ ಮತ್ತು ವೃತ್ತಿಪರ ಆಕರ್ಷಣೆ ಹೊಂದಿರುವ ಕಾರಣ ಇದೇ ಮಾದರಿ ಬಗ್ಗೆ ಕರ್ನಾಟಕ ಸರ್ಕಾರ ಸಹಮತ ವ್ಯಕ್ತಪಡಿಸಿತ್ತು.

ಸ್ಲೌಚ್ ಹ್ಯಾಟ್​ಗಳ ಬಳಕೆ ಉಸಿರಾಟದ ತೊಂದರೆಗೆ ಕಾರಣವಾಗಬಹುದು ಎಂದು ಕೇಂದ್ರ ಆರೋಗ್ಯ ಇಲಾಖೆಯ ವರದಿಗಳು ಹೇಳಿದ್ದವು. ಮೆರವಣಿಗೆಗಳು, ಸಾರ್ವಜನಿಕ ಬಂದೋಬಸ್ತ್​ನಂತಹ ಕೆಲಸಗಳಲ್ಲಿ ತೊಡಗಿಸಿಕೊಂಡಾಗ ಈ ಮಾದರಿಯ ಹ್ಯಾಟ್​ಗಳು ಅನುಕೂಲಕರವಾಗಿಲ್ಲ. ಅದರ ಗಾತ್ರ ಮತ್ತು ಆಕಾರದಿಂದ ಅದು ಬಿದ್ದುಹೋಗುವ ಅಥವಾ ಜಾರುವ ಸಾಧ್ಯತೆ ಹೆಚ್ಚಿದೆ ಎಂದು ದೂರು ಬಂದಿತ್ತು. ಹೀಗಾಗಿ ಹಳೆ ಮಾದರಿಯ ಸ್ಲೌಚ್ ಹ್ಯಾಟ್​ಗಳನ್ನ ರಾಜ್ಯ ಸರ್ಕಾರ ಬದಲಾಯಿಸಿದೆ.
ರಾಜ್ಯದ ಕಾನ್ಸ್ಟೇಬಲ್‌ಗಳು ಧರಿಸುತ್ತಿದ್ದ ಸ್ಲೌಚ್ ಕ್ಯಾಪ್‌ಗೆ ಸುಮಾರು ನಾಲ್ಕು ದಶಕಗಳ ಇತಿಹಾಸವಿದ್ದು, 1980–83ರ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರ ಕಾಲದಲ್ಲಿ ಇವು ಪರಿಚಯಿಸಲ್ಪಟ್ಟವು. ಅಂದಿನ ನೀಲಿ ಮತ್ತು ಕೆಂಪು ಪಟ್ಟಿಯ ಪೇಟದ ಬದಲಿಗೆ ಈ ಕ್ಯಾಪ್‌ಗಳನ್ನು ದಿನನಿತ್ಯದ ಕರ್ತವ್ಯಕ್ಕಾಗಿ ಅಳವಡಿಸಿಕೊಳ್ಳಲಾಯಿತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ