LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮುಂಬೈ : ಬೋಟ್ ಗೆ ನೌಕಾಪಡೆಯ ಸ್ಪೀಡ್ ಬೋಟ್ ಡಿಕ್ಕಿ – 13 ಜನ ಸಾವು

ಮುಂಬೈ : ಪ್ರಯಾಣಿಕರಿದ್ದ ಬೋಟ್ ಗೆ ನೌಕಾಪಡೆಯ ಸ್ಪೀಡ್ ಬೋಟ್ ಡಿಕ್ಕಿ ಹೊಡೆದ ಪರಿಣಾಮ 13 ಮಂದಿ ಸಾವನಪ್ಪಿದ ಘಟನೆ ಗೇಟ್‌ವೇ ಆಫ್ ಇಂಡಿಯಾ ಬಳಿ ಸಮುದ್ರದಲ್ಲಿ ನಡೆದಿದೆ.

ಸಿಬ್ಬಂದಿ ಸೇರಿದಂತೆ ಸುಮಾರು 110ಕ್ಕೂ ಹೆಚ್ಚು ಪ್ರವಾಸಿಗರನ್ನು ಹೊತ್ತ ದೋಣಿಯು ಐಕಾನಿಕ್ ಗೇಟ್‌ವೇ ಆಫ್ ಇಂಡಿಯಾದಿಂದ ಯುನೆಸ್ಕೋ ಪರಂಪರೆಯ ಎಲಿಫೆಂಟಾ ದ್ವೀಪಕ್ಕೆ ತೆರಳುತ್ತಿದ್ದಾಗ ಸಂಜೆ 5.15ರ ಸುಮಾರಿಗೆ ಈ ಘಟನೆ ನಡೆದಿದೆ.

ಮೃತರ ಪೈಕಿ 10 ಮಂದಿ ಪ್ರಯಾಣಿಕರಿದ್ದು ಮೂವರು ನೌಕಾಪಡೆ ಸಿಬ್ಬಂದಿ ಎಂದು ತಿಳಿದುಬಂದಿದೆ. ನೌಕಾಪಡೆಯ ಸ್ಪೀಡ್ ಬೋಟ್ ನ ಎಂಜಿನ್ ಪರೀಕ್ಷೆ ವೇಳೆ ಈ ದುರ್ಘಟನೆ ಸಂಭವಿಸಿದೆ. ಕಾರಂಜಾದ ಉರಾನ್ ಬಳಿ ದೋಣಿ ‘ನೀಲ್ಕಮಲ್’ ದೋಣಿಗೆ ಸ್ಪೀಡ್ ಬೋಟ್ ಹೊಡೆದಿದೆ. ಸದ್ಯ 101 ಮಂದಿಯನ್ನು ರಕ್ಷಿಸಲಾಗಿದೆ. ದುರಂತದ ಬಗ್ಗೆ ಮಾಹಿತಿ ಪಡೆದ ಭಾರತೀಯ ನೌಕಾಪಡೆಯ ನಾಲ್ಕು ಹೆಲಿಕಾಪ್ಟರ್‌ಗಳು, ಮೆರೈನ್ ಪೊಲೀಸ್, ಇಂಡಿಯನ್ ಕೋಸ್ಟ್ ಗಾರ್ಡ್, ಜವಾಹರಲಾಲ್ ನೆಹರು ಬಂದರು ಪ್ರಾಧಿಕಾರ, ಸ್ಥಳೀಯ ಮೀನುಗಾರರು ಮತ್ತು ಇತರ ದೋಣಿಗಳು ಪ್ರವಾಸಿಗರನ್ನು ರಕ್ಷಿಸಲು ಭಾರಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯೆಮನ್‌ನಲ್ಲಿ ನಿಮಿಷಾ ಪ್ರಿಯಾ ಮರಣದಂಡನೆ ರದ್ದು?: ವಿದೇಶಾಂಗ ಸಚಿವಾಲಯ ಹೇಳಿದ್ದೇನು?ತಿರುಪತಿ ತಿರುಮಲ ದರ್ಶನದ ಟಿಕೇಟ್ ವಿತರಣೆ ಹಾಗೂ ಸಮಯ ಬದಲಾವಣೆ; ಇಲ್ಲಿದೆ ಮಾಹಿತಿಹಳಿತಪ್ಪಿದ ಇಸ್ಲಾಮಾಬಾದ್ ಎಕ್ಸ್‌ಪ್ರೆಸ್‌ನ 10 ಭೋಗಿಗಳು: 30 ಮಂದಿಗೆ ಗಾಯ, ಮೂವರು ಗಂಭೀರಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಎನ್‌ಕೌಂಟರ್‌ಗೆ ಓರ್ವ ಉಗ್ರ ಬಲಿದೂರಿನ ಮಾಹಿತಿ ಪಡೆಯಲು ಮನೆಗೆ ಬಂದ ಪೊಲೀಸ್ ಸಿಬ್ಬಂದಿ ಎದುರು ಸೀರೆ ಬಿಚ್ಚಿಕೊಂಡು ಹುಚ್ಚಾಟ ಮೆರೆದ ಮಹಿಳೆಭಾರತ ಇನ್ಮುಂದೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸಲ್ಲ, ಇದು ಒಳ್ಳೆಯ ಹೆಜ್ಜೆ ಎಂದ ಡೊನಾಲ್ಡ್ ಟ್ರಂಪ್ನಟಿ ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಮೂವರು ಪೊಲೀಸರ ವಶಕ್ಕೆರೈತರಿಗೆ ಗುಡ್ ನ್ಯೂಸ್, ಪಿಎಂ ಕಿಸಾನ್ 20ನೇ ಕಂತಿನ ಹಣ ಇಂದು ಬಿಡುಗಡೆಮಾಡೆಲಿಂಗ್‌ ಲೋಕ ಬಿಟ್ಟು ಯುಪಿಎಸ್‌ಸಿ ಪರೀಕ್ಷೆ ಪಾಸ್‌ ಆಗಿ ಅಧಿಕಾರಿಯಾದ ಕಥೆದಿನದ ಮಂಡಕ್ಕಿ ಒಗ್ಗರಣೆ – ಮಿರ್ಚಿ.! 02-08-2025..!