ನವದೆಹಲಿ: ಆಧಾರ್ ಕಾರ್ಡ್‌ನಲ್ಲಿ ಹೆಸರು, ವಿಳಾಸ, ಹುಟ್ಟಿದ ದಿನಾಂಕ ಸೇರಿದಂತೆ ಯಾವುದೇ ವೈಯಕ್ತಿಕ ವಿವರಗಳನ್ನು ನವೀಕರಿಸಲು ಅಥವಾ ತಿದ್ದುಪಡಿ ಮಾಡಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಮಾನ್ಯ ಮಾಡಿದ ಅಧಿಕೃತ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ಯಾವ ವಿವರಗಳನ್ನು ಬದಲಾಯಿಸಬೇಕೋ ಅದಕ್ಕೆ ತಕ್ಕಂತೆ ಸೂಕ್ತ ಪುರಾವೆಗಳನ್ನು ಒದಗಿಸಬೇಕಾಗುತ್ತದೆ. ಕೆಲವು ದಾಖಲೆಗಳು ಕೇವಲ ಒಂದು ನಿರ್ದಿಷ್ಟ ಬದಲಾವಣೆಗೆ ಮಾತ್ರ ಬಳಕೆಯಾದರೆ, ಇನ್ನು ಕೆಲವು ದಾಖಲೆಗಳು ಗುರುತು, ವಿಳಾಸ, ಹುಟ್ಟಿದ ದಿನಾಂಕ ಹೀಗೆ ಹಲವು ಉದ್ದೇಶಗಳಿಗೆ ಮಾನ್ಯವಾಗುತ್ತವೆ. ಯುಐಡಿಎಐ ಅಂಗೀಕರಿಸಿರುವ ದಾಖಲೆಗಳ ವರ್ಗೀಕೃತ ಮಾಹಿತಿ ಇಲ್ಲಿದೆ:
ಗುರುತಿನ ಪುರಾವೆ (Proof of Identity - PoI)
ಅರ್ಜಿದಾರರ ಗುರುತು ಅಥವಾ ಹೆಸರಿನ ಬದಲಾವಣೆಯನ್ನು ದೃಢೀಕರಿಸಲು ಅವರ ಹೆಸರು ಮತ್ತು ಭಾವಚಿತ್ರವಿರುವ ದಾಖಲೆಗಳು ಅಗತ್ಯ. ಇದಕ್ಕಾಗಿ ಈ ಕೆಳಗಿನ ದಾಖಲೆಗಳನ್ನು ಬಳಸಬಹುದು:
-
ಭಾರತೀಯ ಪಾಸ್‌ಪೋರ್ಟ್, ಪಡಿತರ ಚೀಟಿ ಅಥವಾ ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಪಿಡಿಎಸ್) ಫೋಟೋ ಕಾರ್ಡ್.
-
ಮತದಾರರ ಗುರುತಿನ ಚೀಟಿ (Voter ID) ಅಥವಾ ಇ-ವೋಟರ್ ಐಡಿ.
-
ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್).
-
ಕೇಂದ್ರ, ರಾಜ್ಯ ಸರ್ಕಾರ, ಸಾರ್ವಜನಿಕ ವಲಯದ ಉದ್ಯಮಗಳು (ಪಿಎಸ್‌ಯು) ಅಥವಾ ಶಾಸನಬದ್ಧ ಸಂಸ್ಥೆಗಳು ನೀಡಿರುವ ಫೋಟೋ ಗುರುತಿನ ಚೀಟಿ.
-
ಪಿಂಚಣಿದಾರರ ಅಥವಾ ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಗುರುತಿನ ಚೀಟಿ, ಪಿಂಚಣಿ ಪಾವತಿ ಆದೇಶ (PPO).
-
ಕಿಸಾನ್ ಫೋಟೋ ಪಾಸ್‌ಬುಕ್.
-
ಸಿಜಿಎಚ್‌ಎಸ್, ಇಸಿಎಚ್‌ಎಸ್, ಇಎಸ್‌ಐಸಿ ಅಥವಾ ಸರ್ಕಾರಿ/ಪಿಎಸ್‌ಯು ವೈದ್ಯಕೀಯ ಕ್ಲೈಮ್ ಕಾರ್ಡ್.
-
ನರೇಗಾ ಜಾಬ್ ಕಾರ್ಡ್ ಹಾಗೂ ರಾಜ್ಯ ಸರ್ಕಾರ ನೀಡಿದ ವಾಸಸ್ಥಳ ಪ್ರಮಾಣಪತ್ರ (ಡೊಮಿಸೈಲ್ ಸರ್ಟಿಫಿಕೇಟ್).
-
ವಿವಾಹ ನೋಂದಣಿ ಪ್ರಮಾಣಪತ್ರ, ವಿಚ್ಛೇದನ ತೀರ್ಪು, ಎಸ್‌ಸಿ/ಎಸ್‌ಟಿ/ಒಬಿಸಿ ಜಾತಿ ಪ್ರಮಾಣಪತ್ರ, ತೃತೀಯಲಿಂಗಿ ಗುರುತಿನ ಚೀಟಿ, ಹಾಗೂ ಹೆಸರು ಬದಲಾವಣೆಯ ಗೆಜೆಟ್ ಅಧಿಸೂಚನೆ.
-
ಮಾನ್ಯತೆ ಪಡೆದ ಶಿಕ್ಷಣ ಮಂಡಳಿ, ವಿಶ್ವವಿದ್ಯಾಲಯ ಅಥವಾ ಉನ್ನತ ಶಿಕ್ಷಣ ಸಂಸ್ಥೆಗಳು ನೀಡಿದ ಅಂಕಪಟ್ಟಿ ಅಥವಾ ಪ್ರಮಾಣಪತ್ರ.
-
ಅಂಗವಿಕಲರಿಗೆ ಸಂಬಂಧಿಸಿದಂತೆ ನೋಂದಾಯಿತ ಆಶ್ರಯ ತಾಣದ ಮುಖ್ಯಸ್ಥರು ಮತ್ತು ಅಧಿಕೃತ ಜಿಲ್ಲಾಧಿಕಾರಿ ಜಂಟಿಯಾಗಿ ಸಹಿ ಮಾಡಿದ ಪ್ರಮಾಣಪತ್ರ ಅಥವಾ ಯುಐಡಿಎಐ ನಿಗದಿತ ನಮೂನೆಯಲ್ಲಿ ಅಧಿಕೃತ ಅಧಿಕಾರಿಗಳಿಂದ ಪಡೆದ ಪ್ರಮಾಣಪತ್ರಗಳು.
ವಿಳಾಸದ ಪುರಾವೆ (Proof of Address - PoA)
ಆಧಾರ್‌ನಲ್ಲಿ ಭಾರತದೊಳಗಿನ ವಿಳಾಸವನ್ನು ನವೀಕರಿಸಲು ಅರ್ಜಿದಾರರ ಹೆಸರು ಮತ್ತು ನಿಖರ ವಿಳಾಸವಿರುವ ಕೆಳಗಿನ ದಾಖಲೆಗಳನ್ನು ಒದಗಿಸಬಹುದು:
-
ಪಾಸ್‌ಪೋರ್ಟ್, ಪಡಿತರ ಚೀಟಿ, ಕಿಸಾನ್ ಪಾಸ್‌ಬುಕ್, ಅಥವಾ ಮತದಾರರ ಗುರುತಿನ ಚೀಟಿ.
-
ಸರ್ಕಾರ ಅಥವಾ ಪಿಎಸ್‌ಯು ನೀಡಿದ ಸೇವಾ ಫೋಟೋ ಗುರುತಿನ ಚೀಟಿ ಅಥವಾ ಪಿಂಚಣಿ ಗುರುತಿನ ಚೀಟಿ.
-
ನರೇಗಾ ಜಾಬ್ ಕಾರ್ಡ್, ವಾಸಸ್ಥಳ ಪ್ರಮಾಣಪತ್ರ, ವಿವಾಹ ಪ್ರಮಾಣಪತ್ರ ಹಾಗೂ ಜಾತಿ ಪ್ರಮಾಣಪತ್ರ.
-
ಭಾವಚಿತ್ರ, ಬ್ಯಾಂಕ್ ಮೊಹರು ಮತ್ತು ಸಹಿಯಿರುವ ಬ್ಯಾಂಕ್ ಅಥವಾ ಅಂಚೆ ಕಚೇರಿ ಉಳಿತಾಯ ಖಾತೆ ಪಾಸ್‌ಬುಕ್.
-
ಮೂರು ತಿಂಗಳಿಗಿಂತ ಹಳೆಯದಲ್ಲದ ಬ್ಯಾಂಕ್ ಅಥವಾ ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್, ಅಂಚೆ ಕಚೇರಿ ಉಳಿತಾಯ ಖಾತೆ ಸ್ಟೇಟ್‌ಮೆಂಟ್.
-
ಮೂರು ತಿಂಗಳೊಳಗಿನ ವಿದ್ಯುತ್, ನೀರು, ಗ್ಯಾಸ್, ಲ್ಯಾಂಡ್‌ಲೈನ್, ಪೋಸ್ಟ್‌ಪೇಯ್ಡ್ ಮೊಬೈಲ್ ಅಥವಾ ಬ್ರಾಡ್‌ಬ್ಯಾಂಡ್ ಬಿಲ್‌ಗಳು.
-
ಒಂದು ವರ್ಷಕ್ಕಿಂತ ಹಳೆಯದಲ್ಲದ ಆಸ್ತಿ ತೆರಿಗೆ ರಸೀದಿ.
-
ನೋಂದಾಯಿತ ಮಾರಾಟ ಒಪ್ಪಂದ, ಗಿಫ್ಟ್ ಡೀಡ್ ಅಥವಾ ಬಾಡಿಗೆ/ಲೀಸ್ ಒಪ್ಪಂದದ ಪತ್ರಗಳು.
-
ಒಂದು ವರ್ಷದೊಳಗೆ ನೀಡಲಾದ ಸರ್ಕಾರಿ ಅಥವಾ ಪಿಎಸ್‌ಯು ವಸತಿ ಹಂಚಿಕೆ ಪತ್ರ.
-
ವಿತರಣೆಯಾದ ದಿನಾಂಕದಿಂದ ಒಂದು ವರ್ಷದವರೆಗೆ ಮಾನ್ಯತೆ ಹೊಂದಿರುವ ಜೀವ ಅಥವಾ ವೈದ್ಯಕೀಯ ವಿಮಾ ಪಾಲಿಸಿ.
-
ಜನಪ್ರತಿನಿಧಿಗಳು, ಗೆಜೆಟೆಡ್ ಅಧಿಕಾರಿಗಳು, ತಹಶೀಲ್ದಾರ್, ಶಿಕ್ಷಣ ಸಂಸ್ಥೆ ಅಥವಾ ಗೊತ್ತುಪಡಿಸಿದ ಗ್ರಾಮ ಮಟ್ಟದ ಅಧಿಕಾರಿಗಳು ಯುಐಡಿಎಐ ನಿಗದಿತ ನಮೂನೆಯಲ್ಲಿ ನೀಡಿರುವ ವಿಳಾಸ ದೃಢೀಕರಣ ಪತ್ರ.
ಸಂಬಂಧದ ಪುರಾವೆ (Proof of Relationship - PoR)
ಕುಟುಂಬದ ಮುಖ್ಯಸ್ಥರ (HoF) ಮೂಲಕ ಆಧಾರ್ ವಿವರಗಳನ್ನು ನವೀಕರಿಸುವಾಗ ಅಥವಾ ಮಗುವಿನ ವಿವರ ಜೋಡಿಸುವಾಗ ಸಂಬಂಧವನ್ನು ದೃಢೀಕರಿಸಲು ಈ ದಾಖಲೆಗಳು ಅಗತ್ಯ:
-
ಭಾರತೀಯ ಪಾಸ್‌ಪೋರ್ಟ್.
-
ಪಡಿತರ ಚೀಟಿ ಅಥವಾ ಪಿಡಿಎಸ್ ಕಾರ್ಡ್.
-
ಪಿಂಚಣಿದಾರರ ಫೋಟೋ ಐಡಿ ಅಥವಾ ಪಿಂಚಣಿ ಪಾವತಿ ಆದೇಶ.
-
ನರೇಗಾ ಜಾಬ್ ಕಾರ್ಡ್, ವಾಸಸ್ಥಳ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ ಅಥವಾ ವಿವಾಹ ಪ್ರಮಾಣಪತ್ರ.
-
ಜನನ ಪ್ರಮಾಣಪತ್ರ.
-
ಕುಟುಂಬದ ಸದಸ್ಯರ ವಿಳಾಸವನ್ನು ಬಳಸಿಕೊಂಡು ವಿಳಾಸ ನವೀಕರಿಸುವ ಸಂದರ್ಭದಲ್ಲಿ, ಅದೇ ವಿಳಾಸದಲ್ಲಿ ವಾಸಿಸುತ್ತಿರುವ ಆ ಕುಟುಂಬದ ಮುಖ್ಯಸ್ಥರು ನೀಡುವ ಸ್ವಯಂ ಘೋಷಣಾ ಪತ್ರ.
-
ಸಕ್ಷಮ ಪ್ರಾಧಿಕಾರ ಅಥವಾ ನ್ಯಾಯಾಲಯ ನೀಡಿದ ಕಾನೂನುಬದ್ಧ ಪಾಲಕತ್ವ (ಗಾರ್ಡಿಯನ್‌ಶಿಪ್) ದಾಖಲೆ.
-
ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ನೀಡಿದ ನಿಗದಿತ ಪ್ರಮಾಣಪತ್ರ ಮತ್ತು ಮಕ್ಕಳ ಆರೈಕೆ ಸಂಸ್ಥೆಯ ನಿಯೋಜನೆ ಆದೇಶ.
ಹುಟ್ಟಿದ ದಿನಾಂಕದ ಪುರಾವೆ (Proof of Date of Birth - DoB)
ಅರ್ಜಿದಾರರ ಹೆಸರು ಮತ್ತು ನಿಖರ ಜನ್ಮದಿನಾಂಕವನ್ನು ದೃಢೀಕರಿಸಲು ಈ ದಾಖಲೆಗಳನ್ನು ಬಳಸಬಹುದು:
-
ಜನನ ಮತ್ತು ಮರಣ ನೋಂದಣಿ ಕಾಯ್ದೆ 1969ರ ಅಡಿಯಲ್ಲಿ ಅಧಿಕೃತವಾಗಿ ನೀಡಲಾದ ಜನನ ಪ್ರಮಾಣಪತ್ರ.
-
ಭಾರತೀಯ ಪಾಸ್‌ಪೋರ್ಟ್.
-
ಮಾನ್ಯತೆ ಪಡೆದ ಶಿಕ್ಷಣ ಮಂಡಳಿ ಅಥವಾ ವಿಶ್ವವಿದ್ಯಾಲಯ ನೀಡಿದ ಅಂಕಪಟ್ಟಿ/ಪ್ರಮಾಣಪತ್ರ.
-
ಸರ್ಕಾರ ಅಥವಾ ಸಾರ್ವಜನಿಕ ವಲಯದ ಉದ್ಯಮಗಳು (ಪಿಎಸ್‌ಯು) ನೀಡಿದ ಸೇವಾ ಫೋಟೋ ಗುರುತಿನ ಚೀಟಿ.
-
ಪಿಂಚಣಿದಾರರ ಅಥವಾ ಸ್ವಾತಂತ್ರ್ಯ ಹೋರಾಟಗಾರರ ಗುರುತಿನ ಚೀಟಿ / ಪಿಂಚಣಿ ಆದೇಶ.
-
ತೃತೀಯಲಿಂಗಿ ಗುರುತಿನ ಚೀಟಿ ಅಥವಾ ಪ್ರಮಾಣಪತ್ರ.